• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ 9 ದಿನದಲ್ಲಿ 29 ಡೆಂಗ್ಯೂ ಪ್ರಕರಣ, ಹೆಚ್ಚಿದ ಆತಂಕ

|

ಬೆಂಗಳೂರು, ಮೇ 14: ಅಕಾಲಿಕ ಮಳೆ, ಹವಾಮಾನ ಬದಲಾವಣೆಯಿಂದಾಗಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ.

ಕಳೆದ 9 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 29 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮತ್ತೆ ಸದ್ದು ಮಾಡುತ್ತಿದೆ ಡೆಂಗ್ಯೂ ಮಹಾಮಾರಿ, ಪರಿಹಾರ ಹೇಗೆ?

ಆಗಾಗ ಒಂದೊಂದು ಮಳೆ ಬಂದು ನಿಂತಿರುವ ನೀರಿನಲ್ಲಿ ಹೆಚ್ಚು ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 796 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 311, ಶಿವಮೊಗ್ಗದಲ್ಲಿ 99 ಪ್ರಕರಣ ದಾಖಲಾಗಿತ್ತು, 360 ಚಿಕೂನ್ ಗುನ್ಯಾ ಪ್ರಕರಣವು ಕೂಡ ಇದೆ.

ಕಾಡುಗೊಂಡನಹಳ್ಳಿಯಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು ಪ್ಲೇಟ್‌ಲೆಟ್‌ ಕೌಂಟ್ ಕೇವಲ ಪ್ರತಿ ಮೈಕ್ರೋ ಲೀಟರ್‌ಗೆ ಕೇವಲ 16 ಸಾವಿರ ಪ್ಲೇಟ್‌ಲೆಟ್ ಕೌಂಟ್ ಇದೆ. ಸಾಮಾನ್ಯವಾಗಿ 1,50,000ರಿಂದ 4,50,000 ಇರಬೇಕು.

ಸೋಂಕು ತಡೆಗಟ್ಟುವುದು ಹೇಗೆ?

ಸೋಂಕು ತಡೆಗಟ್ಟುವುದು ಹೇಗೆ?

-ಪೂರ್ತಿ ತೋಳಿರುವ ಉಡುಪು ಧರಿಸುವುದು ಸೂಕ್ತ.

-ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಬಳಸುವುದು

-ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ದ ಸಮಯದಲ್ಲಿ , ನಾವುಗಳು ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

ಅಕಾಲಿಕ ಮಳೆ, ಮನೆಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಿ

ಅಕಾಲಿಕ ಮಳೆ, ಮನೆಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಿ

ಸಾಮಾನ್ಯವಾಗಿ ಮಳೆಗಾಲದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಬಿಬಿಎಂಪಿ ಕೈ ಜೋಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಮುಂಗಾರು ಪೂರ್ವ ಮಳೆ ಬರುತ್ತಿರುವ ಕಾರಣ ಸಾರ್ವಜನಿಕರೇ ಸ್ವಲ್ಪ ಜಾಗ್ರತೆಯಿಂದ ಇರಬೇಕಿದೆ. ಮನೆಯ ಮುಂದೆಲ್ಲಾ ನೀರು ನಿಲ್ಲದಂತೆ ಎಚ್ಚರವಹಿಸಬೇಕಿದೆ.

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

ನೆನಪಿಡಲೇ ಬೇಕಾದ ಅಂಶಗಳು ಇವು

ನೆನಪಿಡಲೇ ಬೇಕಾದ ಅಂಶಗಳು ಇವು

-ಹೆಣ್ಣು ಸೊಳ್ಳೆ ಮಾತ್ರ ತನ್ನ ಮೊಟ್ಟೆಗಳನ್ನು ಇಡಲು ಬೇಕಾಗುವ ಪ್ರೊಟೀನ್ಗಾಗಿ ಮಾತ್ರ ನಮ್ಮನ್ನು ಕಚ್ಚುತ್ತವೆ.

- ಭಯಾನಕ ಸತ್ಯ ಎಂದರೆ ಒಮ್ಮೆ ಸೋಂಕಿಗೊಳಗಾದ ಸೊಳ್ಳೆ, ಸೋಂಕಿತ ಸೊಳ್ಳೆಯಾಗಿಯೇ ಉಳಿಯುತ್ತದಲ್ಲದೆ, ತಾನು ಇಡುವ ಮೊಟ್ಟೆಗಳಿಗೂ ಇದರ ಸೋಂಕನ್ನು ತಲುಪಿಸಿ ತನ್ಮೂಲಕ , ಆ ಮೊಟ್ಟೆ ಮರಿ ಸೊಳ್ಳೆಯಾಗಿ ಹುಟ್ಟುವಾಗಲೇ ಸೋಂಕಿತ ಸೊಳ್ಳೆಯಾಗಿ ಹುಟ್ಟಿ ಮತ್ತೆ ರೋಗ ಪಸರಿಸುತ್ತದೆ.

-ಈ ಸೊಳ್ಳೆಯ ಜೀವಿತಾವಧಿ 2 ವಾರಗಳು ಮಾತ್ರ.

-ಇವು ಸಾಮಾನ್ಯವಾಗಿ ಕತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ ಅಂದ್ರೆ ನಮ್ಮ ಮನೆಯ ಕ್ಲಾಸೆಟ್ಸ್, ಕರ್ಟನ್, ಮಂಚದ ಕೆಳಗೆ, ವಾರ್ಡ್ ರೋಬ್ಸ್ ಹೀಗೆ ಕತ್ತಲ ಜಾಗಗಳಲ್ಲಿರುತ್ತವೆ.

ಡೆಂಗ್ಯೂ ಹೇಗೆ ಹರಡುತ್ತದೆ ಇಲ್ಲಿದೆ ಮಾಹಿತಿ

ಡೆಂಗ್ಯೂ ಹೇಗೆ ಹರಡುತ್ತದೆ ಇಲ್ಲಿದೆ ಮಾಹಿತಿ

ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV2, DENV4 ಎಂಬ 4 ವಿಧದ ವೈರಸ ಗಳಿಂದ ಹರಡುತ್ತದೆ.

ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

English summary
A 16-year-old boy is battling for life at a hospital, a few days after being diagnosed with dengue. He is among a growing number of patients with the disease in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X