ಬೆಂಗಳೂರು : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಬೆಂಗಳೂರು, ಡಿಸೆಂಬರ್ 24 : ಟೆಕ್ಕಿ ವಿಶ್ವಾಸ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಡಿಸೆಂಬರ್ 20ರಂದು ಮಡಿವಾಳ ಕೆರೆಯಲ್ಲಿ ವಿಶ್ವಾಸ್ ಮೃತದೇಹ ಪತ್ತೆಯಾಗಿತ್ತು.
ವಿಶ್ವಾಸ್ (27) ಆತ್ಮಹತ್ಯೆ ಮಾಡಿಕೊಳ್ಳಲು ಆಫೀಸ್‌ನಲ್ಲಿದ್ದ ಒತ್ತಡವೇ ಕಾರಣ ಎಂಬುದು ಬಹಿರಂಗವಾಗಿದೆ. 1 ತಿಂಗಳ ಹಿಂದೆ ಕಾರ್ಯಕ್ಷಮತೆ ಸರಿ ಇಲ್ಲ ಎಂದು ವಿಶ್ವಾಸ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
ಮೈಕೋಲೇಔಟ್ ಪೊಲೀಸರು ವಿಶ್ವಾಸ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರು. ವಿಶ್ವಾಸ್ ಅವರ ಈ ಮೇಲ್ ಓಪನ್ ಮಾಡಿದಾಗ ಪೊಲೀಸರಿಗೆ ಡೆತ್‌ನೋಟ್ ಸಿಕ್ಕಿದೆ.

ಪೊಲೀಸರು ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿಶ್ವಾಸ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಅವರು ನೋಟಿಸ್ ನೀಡಿದ್ದಾರೆ.
ಡಿ.13ರಂದು ನಾಪತ್ತೆ : ಡಿಸೆಂಬರ್ 13ರಂದು ವಿಶ್ವಾಸ್ ಮನೆ ಬಿಟ್ಟು ಹೋಗಿದ್ದರು. ಪೋಷಕರು ಮೈಕೋಲೇಔಟ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಡಿಸೆಂಬರ್ 20ರಂದು ಮಡಿವಾಳ ಕೆರೆಯಲ್ಲಿ ವಿಶ್ವಾಸ್ ಶವ ಪತ್ತೆಯಾಗಿತ್ತು.












Click it and Unblock the Notifications