ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಟ್ಟ ಮಂಜು: ಕೆಂಪೇಗೌಡ ಏರ್ಪೋರ್ಟ್‌ನಿಂದ ತಡವಾಗಿ ಹಾರಿದ 20 ವಿಮಾನಗಳು

|
Google Oneindia Kannada News

ಬೆಂಗಳೂರು, ಜನವರಿ 7: ದಿನೇ ದಿನೇ ಬೆಂಗಳೂರಲ್ಲಿ ತಾಪಮಾನ ಏರುಪೇರಾಗುತ್ತಿದೆ. ಕಳೆದ ಎರಡು ದಿನಗಳಿಂದ ದಟ್ಟ ಮಂಜು ಕವಿದುಕೊಂಡಿದ್ದು, ವಿಮಾನ ಹಾರಾಟಕ್ಕೆ ಅಡಚಣೆ ಉಂಟಾಗುತ್ತಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ದಟ್ಟ ಮಂಜಿನಿಂದಾಗಿ 20 ವಿಮಾನಗಳು ತಡವಾಗಿ ಹಾರಾಟ ನಡೆಸಿತು. ಬೆಳಗ್ಗೆ 6ರಿಂದ 9ರವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ

ಕೆಲ ದಿನಗಳಿಂದ ದೇವನಹಳ್ಳಿ ಕೆಐಎ ಸುತ್ತ ಮುಂಜಾನೆಯ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಕನಿಷ್ಠ ಉಷ್ಣಾಂಶದಲ್ಲೂ ಏರುಪೇರಾಗುತ್ತಿದೆ. ಇದು ದೇಶೀಯ ವಿಮಾನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿ ಪರಿಣಮಿಸಿದೆ.

20 flights delayed at Benguluru airport

ಭಾನುವಾರವಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 50 ವಿಮಾನಗಳ ಆಗಮನ ಹಾಗೂ ನಿರ್ಗಮನಕ್ಕೆ ಅಡಚಣೆ ಉಂಟಾಗಿತ್ತು. ಈ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ನಿಗದಿಗಿಂತ 2-3 ಗಂಟೆಗೂ ಹೆಚ್ಚು ಸಮಯ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ದೆಹಲಿಯಲ್ಲೂ ದಟ್ಟ ಮಂಜು ಆವರಿಸಿಕೊಂಡಿದ್ದ ಕಾರಣ ಎಲ್ಲಾ ವಿಮಾನಗಳು ಸಂಚಾರ ತಡವಾಯಿತು. ಹಾಗೆಯೇ ಕೆಟ್ಟ ವಾತಾವರಣದಿಂದಾಗಿ ರೈಲುಗಳ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.

English summary
20 flights to and from Kempegowda International Airport in Bengaluru were also delayed due to fog between 6 am and 9 am on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X