ಬೆಂಗಳೂರು : ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಶೇ 20ರಷ್ಟು ರಿಯಾಯಿತಿ
ಬೆಂಗಳೂರು, ಮೇ 17 : ಬೆಂಗಳೂರಿನಲ್ಲಿ ಕಾರು ಪಾರ್ಕಿಂಗ್‌ಗೆ ಜಾಗ ಸಿಗುವುದು ಕಷ್ಟವಾಗಿದೆ. ಆದರೆ, ಈಗ ನೀವು ಎಲೆಕ್ಟ್ರಿಕ್ ಕಾರು ಪಾರ್ಕ್ ಮಾಡಿದರೆ ಶೇ 20ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಹೌದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಶೇ 20 ರಷ್ಟು ರಿಯಾಯಿತಿ ದೊರೆಯಲಿದೆ. ಮಾಲಿನ್ಯ ರಹಿತ ವಾಹನ ಬಳಕೆ ಪ್ರೋತ್ಸಾಹಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ವಿಮಾನ ನಿಲ್ದಾಣದ ಪಿ2 ಮತ್ತು ಪಿ3 ಪಾರ್ಕಿಂಗ್ ಏರಿಯಾದಲ್ಲಿ ಎಲೆಕ್ಟ್ರಿಕ್ ಕಾರು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ನಿಲುಗಡೆ ಮಾಡುವ ಕಾರುಗಳಿಗೆ ಶೇ 20ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಳಿತದಿಂದಾಗಿ ಜನರು ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಜಾಗತಿಕವಾಗಿ ಪರಿಸರ ಮಾಲಿನ್ಯ ರಹಿತ ಕಾರಿಗಾಗಿ ಬೇಡಿಕೆ ಹೆಚ್ಚುತ್ತಿದೆ.
ದೊಡ್ಡ ದೊಡ್ಡ ಕಾರು ಉತ್ಪಾದಕ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯತ್ತ ಗಮನ ಹರಿಸಿವೆ. ದೇಶದಲ್ಲಿ ಮಹೀಂದ್ರಾ ಸಂಸ್ಥೆ ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿಯೂ ಹಲವಾರು ಎಲೆಕ್ಟ್ರಿಕ್ ಕಾರುಗಳಿವೆ.












Click it and Unblock the Notifications