'ಆಕೆ ನನ್ನ ಹೆಂಡತಿ' ಎಂದು ಇಬ್ಬರ ಜಗಳ, ಮೂರನೆಯವನ ಜತೆ ಮಹಿಳೆ ಜೂಟ್

ಬೆಂಗಳೂರು, ಆಗಸ್ಟ್ 5: ಇದೊಂದು ವಿಲಕ್ಷಣ ಪ್ರಹಸನ. ಬೆಂಗಳೂರು- ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಪುರುಷರು ಒಬ್ಬ ಮಹಿಳೆ ಎದುರೇ ಆಕೆಗಾಗಿಯೇ ಹೊಡೆದಾಡಿದ್ದರು. ಅಲ್ಲಿಗೇ ಆ ಹೊಡೆದಾಟ ಕೊನೆಯಾಗಲಿಲ್ಲ. ಅದಕ್ಕೆ ಕೊನೆ ಅಂತ ಸಿಕ್ಕಿದ್ದು ಮಾತ್ರ ಸಿನಿಮೀಯ ಶೈಲಿಯಲ್ಲಿ.

ಆ ಮೂವತ್ತೆಂಟು ವರ್ಷದ ಮಹಿಳೆಯು, ನಾನು ಈ ಇಬ್ಬರನ್ನೂ ಮದುವೆ ಆಗಿಲ್ಲ. ಇನ್ನೊಬ್ಬರನ್ನು ಆಗಬೇಕಿದ್ದೇನೆ ಎಂದಳು. ಕೊನೆಗೆ ತನ್ನ 'ಗೆಳೆಯ'ನ ಜತೆಗೆ ಆಕೆ ಹೊರಟುಹೋದಳು. ಇಡೀ ಪ್ರಹಸನವನ್ನು ಕೆಲವು ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದರು.

ಇಬ್ಬರು ಗಂಡಸರು ಒಬ್ಬ ಮಹಿಳೆಗಾಗಿ ಜಗಳ ಅಂತ ಮಾಡಿದ್ದು ಬಾವಿಕೆರೆ ಕ್ರಾಸ್ ನಲ್ಲಿ. ಈ ಜಗಳದ ವೇಳೆ ನೆಲಮಂಗಲದಿಂದ ಬೆಂಗಳೂರಿಗೆ ಬರಬೇಕಿದ್ದ ಜನರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡರು. ಈ ಜಗಳದ ಮಜಾ ತೆಗೆದುಕೊಳ್ಳಲು ಜನರು ತಮ್ಮ ಕೆಲಸವನ್ನು ಬಿಟ್ಟು, ನಿಂತರು. ಆ ವೇಳೆಗೆ ಪೊಲೀಸರು ಅಲ್ಲಿ ಬಂದು, ಇಬ್ಬರು ಪುರುಷರು ಮತ್ತು ಮಹಿಳೆಯನ್ನು ಕರೆದೊಯ್ದರು.

2 ‘husbands’ fight on highway, woman leaves with third man

ಪೊಲೀಸರ ಪ್ರಕಾರ, ಮಹಿಳೆ ಹೆಸರು ಶಶಿಕಲಾ. ಟ್ರ್ಯಾಕ್ಟರ್ ಚಾಲಕ ಮೂರ್ತಿ ಎಂಬುವರ ಜತೆ ಇದ್ದಳು. ಮೊದಲಿಗೆ ರಂಗಸ್ವಾಮಿ ಎಂಬುವರ ಜತೆ ಶಶಿಕಲಾ ಮದುವೆ ಆಗಿತ್ತು. ಆ ಮದುವೆ ಮುರಿದುಬಿದ್ದ ಮೇಲೆ ನಂತರ ಕೆಲ ಕಾಲ ರಮೇಶ್ ಕುಮಾರ ಎಂಬಾತನ ಜತೆ ಇದ್ದಳು. ಆ ಬಳಿಕ ಕುಮಾರ್ ಅನ್ನೋ ವ್ಯಕ್ತಿ ಜತೆ ಇದ್ದು, ಬೇರೆಯಾಗಿ ಎರಡು ಮಕ್ಕಳ ತಂದೆಯಾದ ಚಿಕ್ಕಬಿದರಿಕಲ್ಲು ಮೂರ್ತಿ ಜತೆ ಈಚೆಗೆ ವಾಸವಿದ್ದಳು.

ಈ ಮಧ್ಯೆ ಸಿದ್ದರಾಜು ಎಂಬ ಕ್ಯಾಬ್ ಚಾಲಕ ಶಶಿಕಲಾಳಿಗೆ ಮದುವೆ ಪ್ರಸ್ತಾವ ಇಟ್ಟಿದ್ದ. ಮೂರ್ತಿಗೆ ಅದಾಗಲೇ ಮದುವೆಯಾಗಿ, ಮಕ್ಕಳಾಗಿತ್ತು. ಸಿದ್ದರಾಜು ಅವಿವಾಹಿತನಾಗಿದ್ದರಿಂದ ಆತನನ್ನು ಮದುವೆ ಆಗಲು ಆಕೆ ನಿರ್ಧರಿಸಿದ್ದಳು. ಶನಿವಾರದಂದು ಅದೇ ಸಿದ್ದರಾಜು ಜತೆ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗಲೇ ಮೂರ್ತಿ ಬಂದು, ಸಿದ್ದರಾಜು ಮೇಲೆ ದಾಳಿ ನಡೆಸಿದ್ದಾನೆ.

ಇಷ್ಟೆಲ್ಲ ರಂಪಾಟ ಆಗಿ, ಪೊಲೀಸರು ಮಧ್ಯಪ್ರವೇಶ ಮಾಡಿ, ಮೂವರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಶಶಿಕಲಾಳನ್ನು ಏನು ಇದು ಕಥೆ ಅಂದರೆ, ಸಿದ್ದರಾಜು ಹಾಗೂ ಮೂರ್ತಿ ಇಬ್ಬರೂ ನನ್ನ ಸ್ನೇಹಿತರು ಹಾಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಹೊಟ್ಟೆಕಿಚ್ಚು. ಇವರಿಬ್ಬರನ್ನೂ ನಾನು ಮದುವೆ ಆಗಲ್ಲ ಅಂದಿದ್ದಾಳೆ.

ಅಷ್ಟರಲ್ಲಿ, ಶಶಿಕಲಾಳ ಗೆಳೆಯ ನಾನು ಎಂದು ಹೇಳಿಕೊಂಡು ಬಂದ ವ್ಯಕ್ತಿ ಜತೆಗೆ ಆಕೆ ಠಾಣೆಯಿಂದ ಹೋಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+