ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಮೆರಿಕಾದ ಎನ್‌ಆರ್‍‌ಐ ಮಹಿಳೆಗೆ 2.65ಕೋಟಿ ಮೋಸ

|
Google Oneindia Kannada News

ಬೆಂಗಳೂರು, ಆಗಸ್ಟ್06: ಬೆಂಗಳೂರಿನಲ್ಲಿ ಸ್ವಂತ ಸೂರನ್ನು ಹೊಂದಬೇಕು ಎನ್ನುವುದು ಹಲವರ ಹಂಬಲವಾಗಿರುತ್ತದೆ. ಸ್ವಂತ ಮನೆಯನ್ನು ಮಾಡಿಕೊಳ್ಳಲು ತಮ್ಮ ಜೀವಮಾನದಲ್ಲಿ ದುಡಿದ ಕೋಟ್ಯಂತರ ಹಣವನ್ನು ಕೂಡಿಸುತ್ತಾರೆ. ಆದರೆ ಯಾರನ್ನೋ ನಂಬಿ ಹಣವನ್ನು ಕೊಟ್ಟು ತನ್ನ ಹಣವನ್ನು ಮನೆಯನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ.

ವಿದೇಶದಲ್ಲಿ ವೈದ್ಯರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಎನ್‌ಆರ್‍‌ಐ ಮಹಿಳೆಗೆ ಮನೆಯನ್ನು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಕೋಟಿ ಹೆಚ್ಚು ಹಣವನ್ನು ಪಡೆದು ಯಾಮಾರಿಸಿದ್ದಾನೆ. ಹಣವನ್ನು ಮಾತ್ರವಲ್ಲದೇ ಮಹಿಳೆ ಖರೀದಿಸಬೇಕಿದ್ದ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಂಡು ವೈದ್ಯೆಗೆ ಮೋಸವನ್ನು ಮಾಡಿದ್ದಾನೆ.

ಮನೆಯಲ್ಲಿ ತಮ್ಮ ಸಾಕು ಮಗನಂತೆ ಸಾಕಿ ಸಲಹಿದ್ದವನನ್ನು ನಂಬಿದ ತಪ್ಪಿಗೆ ಹಣವನ್ನು ಮತ್ತು ಮನೆಯನ್ನು ಎರಡನ್ನು ಕಳೆದುಕೊಂಡು ನ್ಯಾಯಕ್ಕಾಗಿ ಹುಳಿಮಾವು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ, ತನ್ನ ಮಗನಂತೆ ಸಾಕಿದವನೇ ತನಗೆ ಮೋಸ ಮಾಡುತ್ತಾನೆ ಎಂಬುದನ್ನು ಅರಿಯದೇ ಕೇಳಿದಷ್ಟು ಹಣವನ್ನು ನೀಡಿ ಯಾಮಾರಿದ್ದಾರೆ ವೈದ್ಯೆ.

 ವೈದ್ಯೆಯ ಯಾಕಾಗಿ ಹಣವನ್ನು ಕೊಟ್ಟರು

ವೈದ್ಯೆಯ ಯಾಕಾಗಿ ಹಣವನ್ನು ಕೊಟ್ಟರು

ಮಣಿತಿರುಮಲೆ ಎಂಬ ವೈದ್ಯೆಯು ಮೋಸಹೋಗಿದ್ದಾರೆ. ತಾನು ಅಮೆರಿಕಾ ವಾಸಿಯಾಗಿದ್ದು ಈಗ್ಗೆ ಎರಡೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದಾಗ ಬೆಂಗಳೂರಿನ ಸಾರ್ವಭೌಮ ನಗರದಲ್ಲಿರುವ ಆರೋಪಿಗೆ ಸೇರಿದ ಸಿಂಪನಿ ಸ್ವೀಟ್ಸ್ ಎಂಬ ಹೆಸರಿನ ಸರ್ವೀಸ್ ಅಪಾರ್ಮೆಂಟ್ ಬಾಡಿಗೆಗಿದ್ದು ಆ ಸಮಯದಲ್ಲಿ ಬೆಂಗಳೂರಿನಲ್ಲಿ ಒಂದು ಮನೆಯನ್ನು ಖರೀದಿಸಲು ಹುಡುಕುತ್ತಿದೆದ, ಆಗ ಆರೋಪಿ ಬಿಟಿಎಂ 4ನೇ ಹಂತದಲ್ಲಿ, 5ನೇ ಅಡ್ಡರಸ್ತೆಯಲ್ಲಿ 1208 ತೋರಿಸಿದ್ದು ಮನೆಯನ್ನು ಒಪ್ಪಿಕೊಂಡು ಹೋಗಿರುತ್ತಾರೆ. ಈ ವೇಳೆಯಲ್ಲಿ ಅಮೆರಿಕಾದಲ್ಲಿ ಕಾರ್ಯನಿಮಿತ್ತ ಹೋಗಬೇಕಿದ್ದ ಕಾರಣ ಹೋಗಿದ್ದರು.

 2.65 ಕೋಟಿ ಹಣವನ್ನು ಹಾಕಿಸಿಕೊಂಡಿದ್ದ ಆರೋಪಿ

2.65 ಕೋಟಿ ಹಣವನ್ನು ಹಾಕಿಸಿಕೊಂಡಿದ್ದ ಆರೋಪಿ

ವೈದ್ಯೆ ಮಣಿತಿರುಮಲೆಯ ಸಂಪರ್ಕದಲ್ಲಿ ಆರೋಪಿ ಕನ್ನಯ್ಯ ಕುಮಾರ್ ನಿಮಗೆ ಕೆಲಸವನ್ನು ಮುಗಿಸಿಕೊಳ್ಳಿ. ನೀವು ಹಣವನ್ನು ಹಾಕಿದರೆ ತನ್ನ ಹೆಸರಿಗೆ ಮೊದಲು ರಿಜಿಸ್ಟಾರ್ ಮಾಡಿಸಿಕೊಂಡು ನೀವು ಅಮೆರಿಕಾದಿಂದ ವಾಪಸ್ಸಾದ ಬಳಿಕ ತಮ್ಮ ಹೆಸರಿಗೆ ಕ್ರಯವನ್ನು ಮಾಡಿಸಿಕೊಡುವುದಾಗಿ ನಂಬಿಸಿದ್ದ. ವೈದ್ಯೆ ಕನ್ನಯ್ಯ ಕುಮಾರ್ ಮಾತನ್ನು ನಂಬಿ ಅದರಂತೆ 2.65 ಕೋಟಿಯನ್ನು ಚೆಕ್ ಮೂಲಕ ಕೊಟ್ಟಿದ್ದು. ಆ ಹಣದಿಂದಲೇ ಅಪಾರ್ಟ್‌ಮೆಂಟ್ ಮಾಲೀಕರಿಗೆ ಹಣವನ್ನು ಕೊಟ್ಟು ರಿಜಿಸ್ಟಾರ್ ತನ್ನ ಹೆಸರಿಗೆ ಮಾಡಿಸಿಕೊಂಡಿರುತ್ತಾನೆ.

 ಮನೆಯನ್ನು ನೀಡದ ಪ್ರಾಣಬೆದರಿಕೆ ಹಾಕಿದ ಭೂಪ

ಮನೆಯನ್ನು ನೀಡದ ಪ್ರಾಣಬೆದರಿಕೆ ಹಾಕಿದ ಭೂಪ

ಅಮೆರಿಕಾದಿಂದ ಜುಲೈನಲ್ಲಿ ವಾಪಸ್ಸಾದ ಮೇಲೆ ವೈದ್ಯೆ ಆರೋಪಿಗೆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಆರೋಪಿಯು ಮನೆಗೆ ತಾನೇ ಲೀಗಲ್ ಮಾಲೀಕನೆಂದು ಹೇಳಿದ್ದಾನೆ. ಈ ಸಮಯದಲ್ಲಿ ನೇರವಾಗಿ ಭೇಟಿ ಮಾಡಲು ಜಯನಗರದ ಸಾರಂಗಿ ಹೊಟೇಲ್‌ಗೆ ಊಟಕ್ಕೆ ಕರೆದ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಮತ್ತೆ ಮನೆಯನ್ನು ನಿನ್ನ ಹೆಸರಿಗೆ ಮಾಡಿಕೊಡು ಎಂದು ಕೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆಯನ್ನು ಹಾಕಿದ್ದಾನೆ. ಆರೋಪಿಯ ಹಣವನ್ನು ಪಡೆದು ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡದೇ ಮೋಸ ಮಾಡಿ ನಂಬಿಕೆ ದ್ರೋಹ ಎಸಗಿದ್ದಾನೆ ಎಂದು ವೈದ್ಯೆ ಮಣಿತಿರುಮಲೆ ದೂರನ್ನು ನೀಡಿದ್ದಾರೆ.

 ಲೀಗಲ್ ಟ್ರಾನ್ಸಾಕ್ಷನ್ ಮಾಡಿರುವುದೇ ವೈದ್ಯೆಗೆ ವರ

ಲೀಗಲ್ ಟ್ರಾನ್ಸಾಕ್ಷನ್ ಮಾಡಿರುವುದೇ ವೈದ್ಯೆಗೆ ವರ

ಹುಳಿಮಾಮು ಪೊಲೀಸರಿಗೆ ಕನ್ನಯ್ಯನ ಮೋಸ ಮತ್ತು ನಂಬಿಕೆದ್ರೋಹದ ಕುರಿತಾಗಿ ದೂರನ್ನು ನೀಡಲಾಗಿದೆ. ಐಪಿಸಿ ಸೆಕ್ಷನ್ 506,504,406,420 ಅನ್ವಯ ದೂರನ್ನು ದಾಖಲು ಮಾಡಲಾಗಿದೆ. ವೈದ್ಯೆ ಮಣಿತಿರುಮಲೆ ಹಣಕಾಸಿ ವ್ಯವಹಾರವನ್ನು ಲೀಗಲ್ ಆಗಿ ನಡೆಸಿರುವುದರಿಂದ ಕೇಸ್ ಅವರಿಗೆ ಫೇವರ್ ಆಗಿದೆ. ಆದರೆ ಯಾರನ್ನೋ ನಂಬಿ ಹಣವನ್ನು ಕೊಟ್ಟು ಪರಿಪಾಟಲು ಪಡುವ ಬದಲು ಸ್ವಲ್ಪ ಜಾಗೃತರಾಗಿದ್ದರೇ ಬಹಳ ಒಳಿತು.

Recommended Video

ಮುಖ್ಯಮಂತ್ರಿ ಬೊಮ್ಮಾಯಿಗೆ ಕೊರೋನಾ ಮೋದಿ ಮೀಟಿಂಗ್ ಕ್ಯಾನ್ಸಲ್ | *Politics | OneIndia Kannada

English summary
Manitirumale, a doctor living in America, met Kannaiah Kumar because he wanted to buy a house in Bengaluru. After showing the house, when the doctor went to America for work, the accused called that the registration was getting delayed and got the money through check and made the house in his name and made a sum of 2.65 crores. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X