ಬೆಂಗಳೂರು: ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಜ, 19: ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಯುಸಿ ವಿದ್ಯಾರ್ಥಿ ಜೀತೇಂದ್ರ ತಮ್ಮ ತಂದೆಯ ರಿವಾಲ್ವಾರ್ ನಿಂದ ಸ್ವತಃ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.
ಜೀತೇಂದ್ರ ತಂದೆ ನಿವೃತ್ತ ಬಿಎಸ್ ಎಫ್ ಯೊಧರಾಗಿದ್ದು ಅವರ ಬಳಿ ಲೈಸನ್ಸ್ ಇರುವ ಗನ್ ಇತ್ತು. ಸೋಮವಾರ ಕಾಲೇಜಿನಿಂದ ಅರ್ಧಕ್ಕೆ ಬಂದ ಜೀತೇಂದ್ರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.[ಕುಟುಂಬಕ್ಕೆ ವಿಷಉಣಿಸಿ ತಾನೂ ಬೆಂಕಿ ಇಟ್ಕೊಂಡ]

17 ವರ್ಷದ ಜೀತೇಂದ್ರ ಎಲ್ಲರೊಂದಿಗೆ ಚೆನ್ನಾಗಿದ್ದ. ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸಂದರ್ಭ ಎದುರಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications