ಬೆಂಗಳೂರು ಮಳೆಗೆ ಮತ್ತೊಂದು ಬಲಿ, ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಬೆಂಗಳೂರು, ಅಕ್ಟೋಬರ್ 15 : ಬೆಂಗಳೂರಿನ ಮಳೆ ಮತ್ತೊಂದು ಬಲಿ ಪಡೆದಿದೆ. 16 ವರ್ಷದ ಬಾಲಕಿಯೊಬ್ಬಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಶುಕ್ರವಾರ ನಗರದಲ್ಲಿ ಸುರಿದ ಮಳೆಗೆ 5 ಜನರು ಬಲಿಯಾಗಿದ್ದರು.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

ಸಿ.ವಿ.ರಾಮನ್ ನಗರದ ಕೃಷ್ಣಪ್ಪ ಗಾರ್ಡನ್‌ನಲ್ಲಿ ಭಾನುವಾರ ಬೆಳಗ್ಗೆ ನರಸಮ್ಮ (16) ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಬಾಲಕಿ ಕೊಚ್ಚಿ ಹೋದ ಸ್ಥಳದಿಂದ ಸುಮಾರು 400 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

16 year old girl washed away in Bengaluru

ಕಲಬುರಗಿ ಮೂಲದ ವೆಂಕಪ್ಪ, ಕಾಶಿಬಾಯಿ ದಂಪತಿಯ ಪುತ್ರಿ ನರಸಮ್ಮ ಇಂದು ಬೆಳಗ್ಗೆ ಶೌಚಕ್ಕೆ ಹೋದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ನಸರಮ್ಮನಿಗೆ ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಗಳ ಶವ ಪತ್ತೆ : ಶುಕ್ರವಾರ ನಗರದಲ್ಲಿ ಸುರಿದ ಮಳೆಯ ವೇಳೆ ಕೊಚ್ಚಿ ಹೋಗಿದ್ದ ತಾಯಿ, ಮಗಳ ಶವಕ್ಕಾಗಿ ಇಂದು ಹುಡುಕಾಟ ನಡೆಸಲಾಗುತ್ತಿತ್ತು. ಮಗಳು ಪುಷ್ಪಾ ಶವ ಕುಂಬಳಗೋಡು ಬಳಿ ಭಾನುವಾರ ಸಿಕ್ಕಿದೆ. ನಿಂಗಮ್ಮ ಶವಕ್ಕಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+