ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಬೆಂಗಳೂರು ಏರ್‌ರ್ಪೋರ್ಟ್‌ ತಲುಪಲು 15 ನಿಮಿಷ ಸಾಕು, ಹೇಗೆ ಗೊತ್ತಾ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ಇನ್ನೂ ನೀವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು 2ರಿಂದ 3 ಗಂಟೆ ಪ್ರಯಾಣಿಸಬೇಕಿಲ್ಲ. ಬದಲಿಗೆ ಕೇವಲ 15 ನಿಮಿಷದಲ್ಲೇ ವಿಮಾನ ನಿಲ್ದಾಣ ತಲುಪಬಹುದು, ಅರೇ ಇದು ಸಾಧ್ಯವಾ ಎಂದು ಕೊಳ್ಳಬೇಡಿ. ಇದು ಖಂಡಿತ ಸಾಧ್ಯ.

ನೀವು ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಚಾಪರ್‌ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬಹುದು. ಇದರಿಂದ ಟ್ರಾಫಿಕ್ ಅನ್ನು ತಪ್ಪಿಸಿಕೊಳ್ಳಬಹುದು. ಇದು ನಿಮ್ಮ ಪ್ರಯಾಣದ ಸಮಯವು ಪ್ರಸ್ತುತ 120 ನಿಮಿಷಗಳಿಂದ ಕೇವಲ 15 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಬೆಂಗಳೂರು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವೇಗದ ಪ್ರಯಾಣವನ್ನು ಮಾಡಲು ಚಾಪರ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಬ್ಲೇಡ್ ಇಂಡಿಯಾ ಘೋಷಿಸಿದೆ.

ಬೆಂಗಳೂರಿನಿಂದ ಗುವಾಹಟಿ, ಅಗರ್ತಲಾಕ್ಕೆ ಆಕಾಶ್‌ ವಿಮಾನ ಸೇವೆಬೆಂಗಳೂರಿನಿಂದ ಗುವಾಹಟಿ, ಅಗರ್ತಲಾಕ್ಕೆ ಆಕಾಶ್‌ ವಿಮಾನ ಸೇವೆ

ಈ ಸೇವೆಗಳು ಅಕ್ಟೋಬರ್ 10ರಂದು ಪ್ರಾರಂಭವಾಗುತ್ತದೆ. ವಾರಕ್ಕೆ ಐದು ಬಾರಿ ಈ ಸೇವೆ ಇರುತ್ತದೆ. ಪ್ರತಿ ಸೀಟಿನ ಬೆಲೆ ₹ 3,250 (ತೆರಿಗೆಗಳನ್ನು ಹೊರತುಪಡಿಸಿ). H125 ಡಿವಿಜಿ ಏರ್‌ಬಸ್ ಹೆಲಿಕಾಪ್ಟರ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ವಿಮಾನ ನಿಲ್ದಾಣ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಂದೇ ಬಾರಿಗೆ ಐದರಿಂದ ಆರು ಪ್ರಯಾಣಿಕರೊಂದಿಗೆ ಹಾರಬಲ್ಲದು.

 15 ನಿಮಿಷಗಳ ಏರ್ ರೈಡ್‌

15 ನಿಮಿಷಗಳ ಏರ್ ರೈಡ್‌

ಕಂಪನಿಯು ಚಾಪರ್ ಸೇವೆಯೊಂದಿಗೆ ಈಗ ಬಂದಿದೆ. ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟ್ರಾಫಿಕ್‌ನಲ್ಲಿ 2 ರಿಂದ ಮೂರು ಗಂಟೆ ಪ್ರಯಾಣ ಮಾಡುವ ಬದಲು 15 ನಿಮಿಷಗಳ ಏರ್ ರೈಡ್‌ನೊಂದಿಗೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಎಚ್‌ಎಎಲ್‌ನಿಂದ ಹಾರಬಹುದು. ಇದರಿಂದ ತಮ್ಮ 120 ನಿಮಿಷಗಳ ಪ್ರಯಾಣವನ್ನು ಬಿಟ್ಟು ಬದಲಿಗೆ 15 ನಿಮಿಷಗಳ ತ್ವರಿತ ಹಾರಾಟವನ್ನು ಆರಿಸಿಕೊಳ್ಳಬಹುದು ಎಂದು ಅಧಿಕೃತ ವೆಬ್‌ಸೈಟ್ ಹೇಳಿದೆ.

ಬೆಂಗಳೂರಿನಿಂದ ಈ ದೇಶಕ್ಕೆ ಮೊದಲ ನೇರ ವಿಮಾನ, ಎಲ್ಲಿಗೆ ಗೊತ್ತಾಬೆಂಗಳೂರಿನಿಂದ ಈ ದೇಶಕ್ಕೆ ಮೊದಲ ನೇರ ವಿಮಾನ, ಎಲ್ಲಿಗೆ ಗೊತ್ತಾ

 ಆರಂಭದಲ್ಲಿ ದಿನಕ್ಕೆ 2 ಬಾರಿ ಹಾರಾಟ

ಆರಂಭದಲ್ಲಿ ದಿನಕ್ಕೆ 2 ಬಾರಿ ಹಾರಾಟ

ಇದರ ತರುವಾಯ ಇನ್ನಷ್ಟು ಮಾರ್ಗಗಳನ್ನು ಸೇರಿಸುವುದಾಗಿ ಕಂಪನಿ ಹೇಳಿದೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕ ಸಾಧಿಸಲಾಗುವುದು ಎಂದು ಅದು ಹೇಳಿದೆ. ಆರಂಭದಲ್ಲಿ ಬ್ಲೇಡ್ ಇಂಡಿಯಾ ದಿನಕ್ಕೆ ಎರಡು ಬಾರಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9 ಗಂಟೆಗೆ ರೈಡ್ ನಿಗದಿಪಡಿಸಲಾಗಿದೆ. ರಿಟರ್ನ್ ಹೆಲಿಕಾಪ್ಟರ್ ಸಂಜೆ 4:15 ಕ್ಕೆ ಟೇಕಾಫ್ ಆಗಲಿದೆ.

 ಏರ್‌ಬಸ್, ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ

ಏರ್‌ಬಸ್, ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ

ಬ್ಲೇಡ್ ಇಂಡಿಯಾವು ನ್ಯೂಯಾರ್ಕ್ ಮೂಲದ ಬ್ಲೇಡ್ ಅರ್ಬನ್ ಏರ್ ಮೊಬಿಲಿಟಿ ಇಂಕ್ ಮತ್ತು ಹೊಸ ದೆಹಲಿ ಮೂಲದ ಹಂಚ್ ವೆಂಚರ್ಸ್ ನಡುವಿನ ಜಂಟಿ ಉದ್ಯಮವಾಗಿದೆ. ಕಂಪನಿಯು ಭಾರತದಲ್ಲಿ ತನ್ನ ಅಲ್ಪಾವಧಿಯ ಚಲನಶೀಲತೆಯ ಸೇವೆಯನ್ನು ಹೆಚ್ಚಿಸಲು ಸೇವೆ ವಿಸ್ತರಣೆಗಾಗಿ ಏರ್‌ಬಸ್ ಮತ್ತು ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ ಹೊಂದಿದೆ. ವೆಬ್‌ಸೈಟ್ ಪ್ರಕಾರ, ಗೋವಾ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಸೇವೆ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಈ ಸೇವೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದರ ಕುರಿತು ಯಾವುದೇ ಟೈಮ್‌ಲೈನ್ ಇಲ್ಲ.

 ಸಂಚಾರ ದಟ್ಟಣೆಯ ಸಂಕಷ್ಟ ತಪ್ಪಿಸುವ ಗುರಿ

ಸಂಚಾರ ದಟ್ಟಣೆಯ ಸಂಕಷ್ಟ ತಪ್ಪಿಸುವ ಗುರಿ

ಮುಂಬೈ, ಪುಣೆ ಮತ್ತು ಶಿರಡಿ ನಡುವೆ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ಲೇಡ್ ಇಂಡಿಯಾ ತನ್ನ ಸೇವೆಗಳನ್ನು ಪ್ರಾರಂಭಿಸಿತು. ಕಂಪನಿಯು ವಿಮಾನ ನಿಲ್ದಾಣ ಸ್ಥಳವನ್ನು ತಲುಪಲು ಇರುವ ಸಂಚಾರ ದಟ್ಟಣೆಯ ಸಂಕಷ್ಟವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದು ಗಂಟೆಗಟ್ಟಲೆ ರಸ್ತೆ ಪ್ರಯಾಣವನ್ನು ನಿಮಿಷಗಳವರೆಗೆ ವಿಮಾನ ನಿಲ್ದಾಣಕ್ಕೆ ಕಡಿತಗೊಳಿಸುತ್ತದೆ. ಇದು "ಹೆಲಿಕಾಪ್ಟರ್‌ಗಳಂತಹ ವಿಟಿಒಎಲ್‌ (ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವೆಹಿಕಲ್‌ಗಳು) ಮೂಲಕ ಸ್ಥಳಗಳನ್ನು ಸಂಪರ್ಕಿಸುತ್ತದೆ ಮತ್ತು ಭವಿಷ್ಯದಲ್ಲಿ, ಇವಿಎಗಳು (ಎಲೆಕ್ಟ್ರಿಕ್ ವರ್ಟಿಕಲ್ ಏರ್‌ಕ್ರಾಫ್ಟ್) ಹಾರುವ ಸಾಧ್ಯತೆಯೂ ಇದೆ.

English summary
Still you don't have to travel 2 to 3 hours to reach bengaluru's Kempegowda International Airport. Instead of reaching the airport in just 15 minutes, hey don't buy if it's possible. It is definitely possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X