ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 29, 30 ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

|
Google Oneindia Kannada News

ಬೆಂಗಳೂರು, ಜುಲೈ 27: ಸೋಮವಾರದಂದು ಅಧಿವೇಶನ ನಡೆಯಲಿದ್ದು ಅಂದು ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಹಾಗಾಗಿ ಅಂದು ವಿಧಾನಸೌಧದ ಸುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಜ್ಯಪಾಲರು ಒಂದು ವಾರದ ಒಳಗಾಗಿ ಬಹುಮತ ಸಾಬೀತುಪಡಿಸುವಂತೆ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. ಆದರೆ ಯಡಿಯೂರಪ್ಪ ಅವರು ಸೋಮವಾರವೇ ಬಹುಮತ ಸಾಬೀತು ಮಾಡುವುದಾಗಿ ಘೋಷಿಸಿದ್ದಾರೆ.

ಸಿಎಂ ಆಗುತ್ತಿದ್ದಂತೆ ರೈತರಿಗೆ, ನೇಕಾರರಿಗೆ ಉಡುಗೊರೆ ಕೊಟ್ಟ ಯಡಿಯೂರಪ್ಪಸಿಎಂ ಆಗುತ್ತಿದ್ದಂತೆ ರೈತರಿಗೆ, ನೇಕಾರರಿಗೆ ಉಡುಗೊರೆ ಕೊಟ್ಟ ಯಡಿಯೂರಪ್ಪ

ಜುಲೈ 29ರಂದು ಬೆಳಗ್ಗೆ 6 ಗಂಟೆಯಿಂದ ಜುಲೈ 30ರ ಮಧ್ಯರಾತ್ರಿ 12ರವರೆಗೆ ವಿಧಾನಸೌಧ ಸುತ್ತ 2 ಕಿ.ಮೀ.ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

144 section imposed around Vidhan Soudha on July 29, 30

ಮೊನ್ನೆ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿಯೂ ಸಹ ವಿಧಾನಸೌಧದ ಸುತ್ತಾ ನಿಷೇಧಾಜ್ಞೆ ಜಾರಿಯಲ್ಲಿತ್ತು. ಅಷ್ಟೆ ಅಲ್ಲದೆ, ಮೈತ್ರಿ ಸರ್ಕಾರ ಪತನವಾದ ದಿನ ಹಾಗೂ ಅದರ ನಂತರದ ದಿನವೂ ಸಹ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.

ಜುಲೈ 29ರಂದು ವಿಶ್ವಾಸಮತಯಾಚನೆ : ಯಡಿಯೂರಪ್ಪ ಜುಲೈ 29ರಂದು ವಿಶ್ವಾಸಮತಯಾಚನೆ : ಯಡಿಯೂರಪ್ಪ

ಈ ಬಾರಿ ವಿಧಾನಸೌಧದ ಸುತ್ತಮುತ್ತ ಮಾತ್ರವೇ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಜನ ಸಾಮಾನ್ಯರಿಗೆ ವಿಧಾನಸೌಧದ ಒಳಗೆ ಹೋಗಲು ಪ್ರವೇಶ ಇರುವುದಿಲ್ಲ.

English summary
Bengaluru police commissioner imposed 144 section around Vidhan Soudha on July 29 and 30. July 29 Yeddyurappa asking for trust vote on July 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X