Boy Missing: ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಬಾಲಕ ನಾಪತ್ತೆ: ಪ್ರಕರಣ ದಾಖಲು!

ಬೆಂಗಳೂರು ಜನವರಿ 23: 12 ವರ್ಷದ ಬಾಲಕ ಟ್ಯೂಷನ್‌ನಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಒಂದೆರಡು ಕಡೆ ಬಾಲಕ ಕಂಡುಬಂದಿದ್ದು, ಆತ ಎಲ್ಲಿದ್ದಾನೆ ಎಂಬುದು ತಿಳಿದುಬಂದಿಲ್ಲ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಗುಂಜೂರಿನ ದೀನ್‌ ಅಕಾಡೆಮಿಯ 6ನೇ ತರಗತಿ ವಿದ್ಯಾರ್ಥಿ ಪರಿಣವ್‌ ಜನವರಿ 21ರ ಭಾನುವಾರದಿಂದ ನಾಪತ್ತೆಯಾಗಿದ್ದಾನೆ. ಪರಿಣವ್ ಸುಕೇಶ್ ಮತ್ತು ನಿವೇದಿತಾ ದಂಪತಿಯ ಪುತ್ರ. ಭಾನುವಾರದಂದು ಆತನ ತಂದೆ ವೈಟ್‌ಫೀಲ್ಡ್‌ನಲ್ಲಿರುವ ಅಲೆನ್ ಟ್ಯುಟೋರಿಯಲ್ ತರಗತಿಗೆ ಡ್ರಾಪ್ ಮಾಡಿದ್ದರು. ಅವನ ತಂದೆ ಅವನನ್ನು ಟ್ಯೂಷನ್ ಮುಗಿದ ಬಳಿಕ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ತಂದೆ ಬರುವುದು ಕೊಂಚ ತಡವಾಗಿದೆ. ಆ ಹೊತ್ತಿಗೆ ಪರಿಣವ್ ತರಗತಿಯಿಂದ ಹೊರಟು ಹೋಗಿದ್ದನು.

12-year-old boy Parinav missing from Whitefield, Bengaluru: Case registered!

ಕುಂದಲಹಳ್ಳಿ ಗೇಟ್ ಮತ್ತು ಮಾರತ್ತಹಳ್ಳಿ ಸೇತುವೆ ನಡುವಿನ ಕಾವೇರಿ ಆಸ್ಪತ್ರೆಯ ಸಿಸಿಟಿವಿಯಲ್ಲಿ ಪರಿಣವ್ ಮಧ್ಯಾಹ್ನ 2:30ಕ್ಕೆ ಸೆರೆಯಾಗಿದ್ದಾರೆ. ಮಧ್ಯಾಹ್ನ 3:04 ಕ್ಕೆ ಮಾರತ್ತಹಳ್ಳಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಹತ್ತುತ್ತಿರುವಾಗ ಬಾಲಕ ಕಾಣಿಸಿಕೊಂಡಿದ್ದಾನೆ.

ಮಾರತ್ತಹಳ್ಳಿ ಮಾರುಕಟ್ಟೆಯಲ್ಲಿ ಪರಿಣವ್ ಇಳಿದಿರುವುದು ಸೆರೆಯಾಗಿದೆ. ಪೊಲೀಸರು ಬಸ್‌ನ ಜಾಡು ಹಿಡಿದು ಕಂಡಕ್ಟರ್‌ನನ್ನು ವಿಚಾರಿಸಿದ್ದಾರೆ. ಹುಡುಗನ ಬಳಿ ಹಣ ಸೀಮಿತವಾಗಿತ್ತು ಎಂದು ಕಂಡಕ್ಟರ್ ಹೇಳಿದ್ದಾರೆ. ಕಂಡಕ್ಟರ್ ಟಿಕೆಟ್ ಕೊಡಲು ಮುಂದಾದಾಗ ಪರಿಣವ್ ಹಣವಿಲ್ಲವೆಂದು ಹೇಳಿದ್ದು ಆತನನ್ನು ಬಸ್‌ನಿಂದ ಕೆಳಗಿಳಿಸಲಾಗಿದೆ ಎಂದು ಕಂಡಕ್ಟರ್ ಹೇಳಿದ್ದಾರೆ.

ಯಮಲೂರು ಬಳಿ ಮಧ್ಯಾಹ್ನ 3:11 ರ ಸುಮಾರಿಗೆ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರನೇ ತರಗತಿಯ ಹುಡುಗ ಕೊನೆಯದಾಗಿ ಹಳದಿ ಬಣ್ಣದ ಟೀ ಶರ್ಟ್ ಧರಿಸಿ ಕಪ್ಪು ಪ್ಯಾಂಟ್ ಮತ್ತು ಸ್ಕೂಲ್ ಬ್ಯಾಗ್ ಧರಿಸಿದ್ದು ಕಂಡು ಬಂದಿದೆ. ಮಾರತ್ತಹಳ್ಳಿಯಲ್ಲಿ ಬಾಲಕನ ಉಪಸ್ಥಿತಿಯ ಬಗ್ಗೆ ಬಾಲಕನ ಪೋಷಕರು ಗೊಂದಲಕ್ಕೊಳಗಾಗಿದ್ದಾರೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+