ಮೇ 26ರಂದು ಸತ್ಯಸಾಯಿ ಆಸ್ಪತ್ರೆ ಆವರಣದಲ್ಲಿ ಸಸಿನೆಡುವ ಕಾರ್ಯಕ್ರಮ
ಬೆಂಗಳೂರು, ಮೇ 24: ನಗರದ ಸತ್ಯಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ನೂರು ಸಸಿಗಳನ್ನು ನೆಡುವ ಕಾರ್ಯಕ್ರಮ 'ಗ್ರೀನ್ ಸೆಂಚ್ಯುರಿ'ಯನ್ನು ಮೇ 26ರಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಿದೆ.
ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇವಲ ಪರಿಸರ ತಜ್ಞರು ಕೆಲವು ಸಂಸ್ಥೆಗಳಷ್ಟೇ ನಿಗಾ ವಹಿಸಿದರೆ ಸಾಧ್ಯವಿಲ್ಲ, ಅದರ ಜತೆಗೆ ಸಾರ್ವಜನಿಕರು ಕೈ ಜೋಡಿಸುವ ಅಗತ್ಯವಿದೆ. ಪರಿಸರವನ್ನು ಉಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸತ್ಯಸಾಯಿ ಬಾಬಾ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ.

ಹಾಗೆಯೇ ನಡುವ ಸಸಿಗಳಿಗೆ ನೀರೆರೆದು ವಿಶ್ವ ಪರಿಸರ ದಿನವನ್ನೂ ಅಂದೇ ಆಚರಿಸಲಾಗುತ್ತದೆ. ಕಾರ್ಯಕ್ರಮವು ವೈಟ್‌ಫೀಲ್ಡ್‌ನಲ್ಲಿರುವ ಸತ್ಯಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ. ಅಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಸಾಮಾಜಿಕ ಕಾರ್ಯಕರ್ತ ಟಿ ವಿಜಯ್‌ಕುಮಾರ್ ರೆಡ್ಡಿ, ಪರಿಸರ ತಜ್ಞ ಸುರೇಶ್ ಹೆಬ್ಳೀಕರ್ ಆಗಮಿಸಲಿದ್ದಾರೆ.












Click it and Unblock the Notifications