• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10 ಸಾವಿರ ಜನ ಭಾನುವಾರ ಹೋಂ ಕ್ವಾರಂಟೈನ್ ನಿಯಮ ಪಾಲಿಸಿಲ್ಲ!

|
Google Oneindia Kannada News

ಬೆಂಗಳೂರು, ಆಗಸ್ಟ್ 04 : ಕರ್ನಾಟಕ ಸರ್ಕಾರ ಭಾನುವಾರದ ಲಾಕ್ ಡೌನ್ ತೆರವುಗೊಳಿಸಿ ತಪ್ಪು ಮಾಡಿತೇ?. ಹೌದು ಬೆಂಗಳೂರು ನಗರದಲ್ಲಿ ಭಾನುವಾರ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ.

ಬಿಬಿಎಂಪಿ ನೀಡುವ ಮಾಹಿತಿಯಂತೆ ಭಾನುವಾರ ಬೆಂಗಳೂರಿನಲ್ಲಿ 10,593 ಜನರು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದುವರೆಗೂ ನಗರದಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ 577 ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ!ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ!

ಬೆಂಗಳೂರಿನಲ್ಲಿ ಸದ್ಯ 20,544 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ, ಭಾನುವಾರ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಜನರು ಮನೆಯಿಂದ ಹೊರ ಹೋಗಿದ್ದಾರೆ. ಭಾನುವಾರ ಲಾಕ್ ಡೌನ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮುರಿದವರು 3 ಲಕ್ಷ ಜನ! ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮುರಿದವರು 3 ಲಕ್ಷ ಜನ!

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 60,998ಕ್ಕೆ ಏರಿಕೆಯಾಗಿದೆ. ಸೋಮವಾರ ನಗರದಲ್ಲಿ 1497 ಹೊಸ ಪ್ರಕರಣಗಳು ದಾಖಲಾಗಿವೆ.

ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ? ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ?

ಸಂಪರ್ಕಕ್ಕೆ ಸಿಗುತ್ತಿಲ್ಲ ಜನರು

ಸಂಪರ್ಕಕ್ಕೆ ಸಿಗುತ್ತಿಲ್ಲ ಜನರು

ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಬಿಬಿಎಂಪಿಯ ವಾರ್ ರೂಂ ಸಿಬ್ಬಂದಿ ಕಣ್ಗಾವಲು ಇಟ್ಟಿರುತ್ತಾರೆ. ಹೋಂ ಕ್ವಾರಂಟೈನ್‌ನಲ್ಲಿರುವ ಜನರನ್ನು ಸಂಪರ್ಕಿಸಲು ಸಿಬ್ಬಂದಿ ಪ್ರಯತ್ನ ನಡೆಸಿದರೆ ಫೋನ್ ಸ್ವಿಚ್‌ ಆಫ್‌ ಬಂದಿದೆ. ಕೆಲವರು ಮೊಬೈಲ್ ಮನೆಯಲ್ಲಿಟ್ಟು ಹೋಗಿದ್ದಾರೆ.

ಸಿಬ್ಭಂದಿಗೆ ನಿಂದನೆ

ಸಿಬ್ಭಂದಿಗೆ ನಿಂದನೆ

ಬಿಬಿಎಂಪಿ ಸಿಬ್ಬಂದಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಪ್ರಶ್ನಿಸಿದಾಗ ಕೆಲವು ಜನರು ಬಿಬಿಎಂಪಿ ಅಧಿಕಾರಿಗಳನ್ನು ನಿಂದಿಸಿದ ಪ್ರಕರಣಗಳು ನಗರದಲ್ಲಿ ನಡೆದಿವೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ಎಫ್‌ಐಆರ್ ದಾಖಲು

ಎಫ್‌ಐಆರ್ ದಾಖಲು

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿಬಿಎಂಪಿ ಸಿಬ್ಬಂದಿ ತಿಳುವಳಿಕೆ ಹೇಳಿದ್ದಾರೆ. ನಿಯಮ ಪಾಲನೆ ಮಾಡಿ ಎಂದು ತಿಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಎಫ್‌ಐಆರ್ ಸಹ ದಾಖಲು ಮಾಡಲಾಗಿದೆ.

ಭಾನುವಾರದ ಲಾಕ್ ಡೌನ್ ಇಲ್ಲ

ಭಾನುವಾರದ ಲಾಕ್ ಡೌನ್ ಇಲ್ಲ

ಕರ್ನಾಟಕ ಸರ್ಕಾರ ಶನಿವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯ ತನಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸುತ್ತಿತ್ತು. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತಿತ್ತು. ಆದರೆ, ಆಗಸ್ಟ್ 2ರ ಭಾನುವಾರದಿಂದ ಜಾರಿಗೆ ಬರುವಂತೆ ಲಾಕ್ ಡೌನ್ ತೆರವುಗೊಳಿಸಲಾಗಿದೆ.

English summary
BBMP said that 20,544 people in home quarantine in Bengaluru city. On Sunday 10,593 violations were reported in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X