ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕತ್ತಿ ಸಹೋದರರ ಬಳಿ ಸಂಧಾನಕ್ಕೆ ಮುಂದಾದ ಯಡಿಯೂರಪ್ಪ, ಯಶಸ್ವಿಯಾಗ್ತಾರಾ?

|
Google Oneindia Kannada News

ಬೆಳಗಾವಿ, ಏ.1: ಉಮೇಶ್ ಕತ್ತಿ ಬಳಿ ಸಂಧಾನಕ್ಕೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಸೋಮವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿಗೆ ಟಿಕೆಟ್ ನಿರಾಕರಿಸಿರುವ ಕಾರಣ ಉಮೇಶ್ ಕತ್ತಿ ಗರಂ ಆಗಿದ್ದಾರೆ.

ಚಿಕ್ಕೋಡಿ: ಜೊಲ್ಲೆಗೆ ಬಿಜೆಪಿ ಟಿಕೆಟ್, ಕತ್ತಿ ಸಹೋದರರ ಬಂಡಾಯಚಿಕ್ಕೋಡಿ: ಜೊಲ್ಲೆಗೆ ಬಿಜೆಪಿ ಟಿಕೆಟ್, ಕತ್ತಿ ಸಹೋದರರ ಬಂಡಾಯ

ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದ್ದಕ್ಕೆ ಹೊಸ ತಂತ್ರವೊಂದನ್ನು ರೂಪಿಸಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇನೆ ಎಂದಿರುವ ಶಾಸಕ ಉಮೇಶ್ ಕತ್ತಿ ಗುಟ್ಟು ಬಿಟ್ಟು ಕೊಡದೆ ಯಾವುದಕ್ಕೂ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

Yeddyurappa to meet Umesh katti and Ramesh katti and pacify the brothers

ಯುಗಾದಿಗೆ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಲಿದೆ.ಇನ್ನೊಂದೆಡೆ ಬಿಜೆಪಿಗೆ ಭರ್ಜರಿ ಶಾಕ್ ಆಗುವ ಸಂಗತಿ ಏನೆಂದರೆ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ರಮೇಶ್ ಕತ್ತಿಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆದಿದೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

ಉಮೇಶ್ ಕತ್ತಿಯ ಜತೆಗೆ ಇನ್ನು ಮೂವರು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ವಿಭಾಗದಲ್ಲಿ ಬಿಜೆಪಿಗೆ ಭದ್ರ ಬುನಾದಿ ಇದ್ದು , 18 ಮಂದಿ ಶಾಸಕರು ಇದ್ದಾರೆ. ಅದರಲ್ಲಿ ಉಮೇಶ್ ಕತ್ತಿ ಪ್ರಭಾವ ಹೆಚ್ಚಾಗಿಯೇ ಇದೆ. ಇದನ್ನು ಅರಿತಿರುವ ಬಿ.ಎಸ್.ಯಡಿಯೂರಪ್ಪ ಸಂಧಾನ ನಡೆಸಲು ಈಗಾಗಲೇ ಚಿಕ್ಕೋಡಿಗೆ ಭೇಟಿ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೊನೆಯ ಕ್ಷಣದಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಪ್ರಸ್ತುತ ಬಿಜೆಪಿಯಿಂದ ಟಿಕೆಟ್ ನೀಡಿರುವ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಬದಲಾಯಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದೆ.

English summary
Lok sabha elections 20149:State BJP chief BS Yedyurappa to meet Umesh Katti and Ramesh Katti and pacify the brothers. Umesh Katti is reportedly miffed with the party for denying ticket to Ramesh Katti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X