ಕುಮಾರಸ್ವಾಮಿ ರಾಜ್ಯ ಒಡೆಯಲು ಹೊರಟಿದ್ದಾರೆ: ಯಡಿಯೂರಪ್ಪ
Recommended Video

ಬೆಳಗಾವಿ, ಜುಲೈ.31: ಕರ್ನಾಟಕ ಏಕೀಕರಣ ಆದ ಮೇಲೆ ಇದುವರೆಗೆ ಇಷ್ಟು ದೊಡ್ಡ ಪ್ರಮಾಣದ ಹೋರಾಟ ಆಗಿರಲಿಲ್ಲ. ಇಂದು ಸುವರ್ಣ ಸೌಧದ ಎದುರು ಸ್ವಾಮೀಜಿಗಳು ಪ್ರತಿಭಟನೆ ಮಾಡುವ ಸಂದರ್ಭ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಇಂದಿನ ಪ್ರತಿಭಟನೆಗೆ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿಯರ ಹೇಳಿಕೆ. ಇದುವರೆಗೆ ಮಾಜಿ ಪ್ರಧಾನಿ ದೇವೇಗೌಡರು ಒಂದು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಕುಮಾರಸ್ವಾಮಿಯವರು ತಂದೆಯ ಸಹಮತವಿಲ್ಲದೆ ಯಾವುದೇ ಮಾತುಗಳನ್ನು ಆಡುವುದಿಲ್ಲ.
ನಾನು ಹೋರಾಟಗಾರರಲ್ಲಿ ಕೈಮುಗಿದು ಮನವಿ ಮಾಡಿಕೊಳ್ಳುತ್ತಾನೆ. ಯಾರೂ ಕೂಡ 2ನೇ ತಾರಿಖಿನಂದು ಬಂದ್ ಆಚರಿಸಬೇಡಿ. ನಾವು ಸದನದ ಒಳಗೆ ಹೊರಗೆ ನಿಮ್ಮ ಪರವಾಗಿ ಹೋರಾಟ ನಡೆಸಲು ಸಿದ್ಧರಿದ್ದೇವೆ.

ಎಷ್ಟೋ ಜನ ಸಾಹಿತಿಗಳು, ಗಣ್ಯರ ಹೋರಾಟದಿಂದ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ನಿಜವಾಗಿಯೂ ಮುಖ್ಯಮಂತ್ರಿಗಳಿಗೆ ಕಾಳಜಿ ಇದ್ದರೆ ಅವರು ಇಲ್ಲಿ ಬಂದು ಜನರ ಹತ್ತಿರ ಕ್ಷಮೆ ಕೇಳಬೇಕಿತ್ತು.
ಕುಟುಂಬ ರಾಜಕಾರಣಕ್ಕೆ ನೀವು ಪಕ್ಷಗಳನ್ನ ಒಡೆದಿದ್ದಿರಿ. ನಿಮ್ಮೊಂದಿಗಿದ್ದವರಿಗೆ ಮೋಸ ಮಾಡಿದ್ದಿರಿ. ಇಂದು ರಾಜ್ಯ ಒಡೆಯಲು ಹೊರಟಿದ್ದೀರಿ. ಆರುವರೆ ಕೋಟಿ ಕನ್ನಡದ ಜನ ನಿಮ್ಮನ್ನ ಕ್ಷಮಿಸಲ್ಲ ಎಂದು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.












Click it and Unblock the Notifications