• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖಾನಾಪುರದಲ್ಲಿ ತಾಯಿಯನ್ನು ಕೊಂದು ಮಗನ ಕಣ್ಣು ಕಿತ್ತ ರಾಕ್ಷಸರು

|

ಬೆಂಗಳೂರು, ಡಿಸೆಂಬರ್ 25: ತಾಯಿಯನ್ನು ಕೊಂದು ಮಗನ ಕಣ್ಣು ಕಿತ್ತಿರುವ ಭೀಭತ್ಸ ಕೃತ್ಯ ಖಾನಾಪುರದಲ್ಲಿ ನಡೆದಿದೆ.

ಖಾನಾಪುರದ ಗುಂಡೇನಟ್ಟಿ ಗ್ರಾಮದ ಹೊವಲಯದ ತೋಟದ ಮನಯಲ್ಲಿ ಮಲಗಿದ್ದ ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು, ಅವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಣ್ಣು ಕಿತ್ತಿರುವ ಭೀಭತ್ಸ ಘಟನೆ ನಡೆದಿದೆ.

ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್

ಗುಂಡೇನಹಳ್ಳಿ ಕಾಳಮ್ಮನಗರದ ಅಂಗನವಾಡಿ ಸಹಾಯಕಿ ಜಯಶ್ರೀ ಕಲ್ಲಪ್ಪ ಬೆಳಗಾವಿ, ಅನುರಾಗ್ ಮೃತರಾದವರು. ತಡರಾತ್ರಿ ತೋಟದ ಮನೆಯ ಹೆಂಚು ತೆಗೆದು ಒಳಗೆ ಇಳಿದ ದುಷ್ಕರ್ಮಿಗಳು ಜಯಶ್ರೀ ಅವರ ತಲೆಗೆ ನೇಗಿಲಿನಿಂದ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಜಯಶ್ರೀ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ

ಪಕ್ಕದಲ್ಲೇ ಮಲಗಿದ್ದ ಅವರಮಗನ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಆತನ ಎರಡೂ ಕಣ್ಣುಗಳಿಗೆ ಹರಿತವಾದ ಆಯುಧದಿಂದ ತಿವಿದಿದ್ದಾರೆ. ಬಾಲಕನ ಕಣ್ಣಿನ ಗುಡ್ಡೆ ಕಿತ್ತು ರಕ್ತ ಸುರಿದ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

English summary
A woman was brutally murdered by miscreants near Khanapura village of Belagavi districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X