• search
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆ ವೇಳೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಲು ಬರ್ತಾರೆ ಶರದ್ ಪವಾರ್

By ಬೆಳಗಾವಿ ಪ್ರತಿನಿಧಿ
|
   Karnataka Elections 2018 : ಮರಾಠಿ ಭಾಷಿಕರನ್ನ ಪ್ರಚೋದಿಸಲು ಬರ್ತಿದ್ದಾರೆ ಶರದ್ ಪವಾರ್ | Oneindia Kannada

   ಬೆಳಗಾವಿ, ಮಾರ್ಚ್ 22 : ಕರ್ನಾಟಕದ ಗಡಿಭಾಗದಲ್ಲಿ ವಿವಿಧ ಸಂಘ- ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಈಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರನ್ನು ಬೆಳಗಾವಿಗೆ ಕರೆಸಿ, ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ತಯಾರಿ ನಡೆಸುತ್ತಿದೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗಡಿಭಾಗದಲ್ಲಿ ಮರಾಠಿ ಭಾಷಿಕರನ್ನು ಪ್ರಚೋದಿಸುವುದು, ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಸಿ ವೈಷಮ್ಯ ಬಿತ್ತುವುದು, ಮರಾಠಿ ಮೇಳಾವ್ ಹೆಸರಿನಲ್ಲಿ ಮರಾಠಿ ಭಾಷಿಕರನ್ನು ಕರ್ನಾಟಕ ಸರಕಾರದ ವಿರುದ್ಧ ಎತ್ತಿ ಕಟ್ಟುವುದು ಎಂಇಎಸ್ ನ ಕೆಟ್ಟ ಚಾಳಿಯಾಗಿದೆ.

   ಕರ್ನಾಟಕ ಚುನಾವಣೆ : 100 ಕ್ಷೇತ್ರಗಳಲ್ಲಿ ಎನ್‌ಸಿಪಿ ಸ್ಪರ್ಧೆ

   ಎಂಇಎಸ್ ಸಂಘಟನೆಯು ಕಾಕಾ, ಮಾಮಾ, ದಾದಾ ಎಂಬ ಹಲವಾರು ಗುಂಪುಗಳಾಗಿ, ಈಗ ಭಿನ್ನಮತದ ರೋಗದಿಂದ ಬಳಲುತ್ತಿದೆ. ಈ ರೋಗಕ್ಕೆ ಔಷಧ ಕೊಡಲು ಮಹಾರಾಷ್ಟ್ರದ ನಾಯಕ ಶರದ ಪವಾರ್ ಅವರನ್ನು ಮಾರ್ಚ್ 31ರಂದು ಬೆಳಗಾವಿಗೆ ಕರೆಸಿ, ನಗರದ ಸಿಪಿಎಡ್ ಮೈದಾನದಲ್ಲಿ ಮರಾಠಿ ಮೇಳಾವ್ ನಡೆಸಲು ಬುಕ್ ಮಾಡಿರುವ ಎಂಇಎಸ್ ನಾಯಕರು, ಪೊಲೀಸರ ಅನುಮತಿಗಾಗಿ ಅರ್ಜಿ ಹಾಕಲಿದ್ದಾರೆ ಅಥವಾ ಅರ್ಜಿ ಹಾಕಿದ್ದಾರೆ ಅನ್ನೋದು ಗೋಪ್ಯ ವಿಷಯ.

   ಶರದ್ ಪವಾರ್ ಬಗ್ಗೆ ಪೊಲೀಸ್ ಇಲಾಖೆಗೆ ಗೊತ್ತಿದೆ

   ಶರದ್ ಪವಾರ್ ಬಗ್ಗೆ ಪೊಲೀಸ್ ಇಲಾಖೆಗೆ ಗೊತ್ತಿದೆ

   ಮೇಳಾವ್ ನಡೆಯುವ ಒಂದು ದಿನ ಮೊದಲು, ಅಂದರೆ ಮಧ್ಯರಾತ್ರಿ ವೇಳೆ ಅನುಮತಿ ನೀಡಿದ ವಿಷಯ ಗೊತ್ತಾಗುತ್ತದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಗಡಿ ವಿಚಾರದಲ್ಲಿ ಬೆಳಗಾವಿಯ ಮರಾಠಿ ಭಾಷಿಕರನ್ನು ಯಾವ ರೀತಿ ಪ್ರಚೋದಿಸಿದ್ದಾರೆ ಎಂಬುದು ಪೊಲೀಸ್ ಇಲಾಖೆಗೆ ಗೊತ್ತಿದೆ.

   ಕನ್ನಡಪರ ಹೋರಾಟಗಾರರ ಬಳಿ ಮಾಹಿತಿ ಇದೆ

   ಕನ್ನಡಪರ ಹೋರಾಟಗಾರರ ಬಳಿ ಮಾಹಿತಿ ಇದೆ

   ಹಳೆಯ ಕಡತಗಳನ್ನು ತೆಗೆದು ನೋಡಿದರೆ ಶರದ್ ಪವಾರ್ ಯಾವ ರೀತಿ ಗಡಿಯಲ್ಲಿ ಹೋರಾಟ ಮಾಡಿದರು, ಅವರ ಮೇಲೆ ಯಾವ ಯಾವ ಕೇಸ್ ಹಾಕಲಾಗಿತ್ತು ಎಂಬುವದರ ಬಗ್ಗೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಹತ್ತಿರ ಸಂಪೂರ್ಣ ಮಾಹಿತಿ ಇದ್ದು, ಆ ಮಹಿತಿಯೊಂದಿಗೆ ರಾಜ್ಯ ಸರಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಲಿ ಅನ್ನೋದು ಗಡಿನಾಡ ಕನ್ನಡಿಗರ ನಿರೀಕ್ಷೆಯಾಗಿದೆ.

   ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವೈಷಮ್ಯ ಬಿತ್ತುವ ಕೆಲಸ

   ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವೈಷಮ್ಯ ಬಿತ್ತುವ ಕೆಲಸ

   ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಭಾಷೆಯ ಹೆಸರಿನಲ್ಲಿ ಎಂಇಎಸ್ ಮತ ಕೇಳಲು ಹೊರಟಿದೆ. ಒಂದು ಭಾಷೆಯ ಸಮುದಾಯವನ್ನು ಪ್ರಚೋದಿಸಲು ಬೆಳಗಾವಿಯಲ್ಲಿ ಮೇಳಾವ್ ನಡೆಸಲು ಹೊರಟಿರುವ ಎಂಇಎಸ್ ಕುತಂತ್ರದ ಕುರಿತು ರಾಜ್ಯ ಸರಕಾರವು ಚುನಾವಣಾ ಆಯೋಗಕ್ಕೆ ದೂರು ನೀಡಲಿ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಒತ್ತಾಯ.

   ಸುಪ್ರೀಂ ಕೋರ್ಟ್ ನಲ್ಲಿದೆ ಗಡಿ ವಿವಾದ

   ಸುಪ್ರೀಂ ಕೋರ್ಟ್ ನಲ್ಲಿದೆ ಗಡಿ ವಿವಾದ

   ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದ್ದು, ವಿವಾದ ಬಗೆಹರಿಸುವ ವರೆಗೂ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದು ಗಡಿ ವಿವಾದದ ಬಗ್ಗೆ ಮರಾಠಿಗರನ್ನು ಕೆರಳಿಸುವಂಥ ಕೆಲಸ ಮಾಡಲು ಕರ್ನಾಟಕ ಸರಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಅನುಮತಿ ಕೊಡಬಾರದು. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳು ಸರಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವದು ಅಗತ್ಯವಾಗಿದೆ ಎಂದು ಬೆಳಗಾವಿಯಲ್ಲಿನ ಕನ್ನಡಿಗರು ಆಗ್ರಹಿಸುತ್ತಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಬೆಳಗಾವಿ ಸುದ್ದಿಗಳುView All

   English summary
   Will Sharad Pawar come to Belagavi to provoke Marathi people? Maharashtra Ekikaran Samithi asked police for permission to organise convention on March 31st. Sharad Pawar will participate in this event. So, there is a suspicion. Karnataka assembly elections are near. So, this strategy become routine for MES.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more