ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ: ಯಾರು ಏನು ಹೇಳಿದರು?

By Mahesh
|
Google Oneindia Kannada News

ಬೆಂಗಳೂರು, ಜು.27: ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಗೆ ರಾಜ್ಯದೆಲ್ಲೆಡೆ ತೀವ್ರ ಖಂಡನೆ, ವಿರೋಧ, ಆಕ್ಷೇಪ ವ್ಯಕ್ತವಾಗಿದೆ. ಹೈ ಕೋರ್ಟ್ ನ ತೀರ್ಪನ್ನು ಧಿಕ್ಕರಿಸಿ, ಕರ್ನಾಟಕದ ಗಡಿಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂದು ವಾದಿಸುವ ಎಂ.ಇ.ಎಸ್ ಸಂಘಟನೆ ಮತ್ತೆ ಮತ್ತೆ ತನ್ನ ಪುಂಡಾಟ ಮುಂದುವರೆಸುತ್ತಲೇ ಇದೆ.

ಮಹಾರಾಷ್ಟ್ರದಿಂದ ಬಂದಿರುವ ನೂರಾರು ಮಂದಿ ಎಳ್ಳೂರು ಸೇರಿದಂತೆ ಗಡಿನಾಡಿನ 5-6 ಹಳ್ಳಿಗಳಲ್ಲಿ ಮಹಾರಾಷ್ಟ್ರಕ್ಕೆ ಸೇರಿವೆ ಎಂದು ಮರಾಠಿ ನಾಮಫಲಕ ಹಾಕಲು ಮುಂದಾಗಿರುವ ಸುದ್ದಿ ಬಂದಿದೆ.

ಎಳ್ಳೂರಿನಲ್ಲಿ ಮರಾಠಿ ಕಾರ್ಯಕರ್ತರಿಗೆ ಜಿಲ್ಲಾಡಳಿತ ಭಾನುವಾರ ಬೆಳ್ಳಂಬೆಳ್ಳಗೆ ಚುರುಕು ಮುಟ್ಟಿಸಿತ್ತು. ಎಂಇಎಸ್ ನೆಟ್ಟಿದ್ದ ನಾಮಫಲಕವನ್ನು ಹೈಕೋರ್ಟ್ ಆದೇಶದಂತೆ ತೆರವುಗೊಳಿಸಿತ್ತು. ಇದರಿಂದ ಕೆರಳಿದ ಎಂಇಎಸ್ ಕಾರ್ಯಕರ್ತರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದರು. ಮುಖ್ಯವಾಗಿ ಕನ್ನಡ ಭಾಷಿಕ ಪತ್ರಕರ್ತರನ್ನು ಗುರಿ ಮಾಡಿಕೊಂಡು ಕಲ್ಲೆಸೆತ ಮುಂದುವರೆಸಿದ್ದರು.[ನಿಲ್ಲದ ಮರಾಠಿ ಪುಂಡಾಟಿಕೆ, ಪ್ರದೇಶ ಪ್ರಕ್ಷುಬ್ಧ]

ಆದರೆ, ಎಂಇಎಸ್ ಪುಂಡರನ್ನು ವಶಕ್ಕೆ ಪಡೆಯಲಾಗಿದೆ. ಎಳ್ಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಎಳ್ಳೂರು, ನಿಪ್ಪಾಣಿ, ಖಾನಾಪುರ, ರಾಜಹಂಸ ಗಡ ಮುಂತಾದೆಡೆ ನಿಷೇಧಾಜ್ಞೆ ಮುಂದುವರೆಸಲಾಗುವುದು ಎಂದು ಡಿಸಿ ಜಯರಾಮ್ ಹೇಳಿದ್ದಾರೆ. ಎಂಇಎಸ್ ಪುಂಡಾಟಿಕೆ ಬಗ್ಗೆ ವಿವಿಧ ನಾಯಕರು, ಸಾರ್ವಜನಿಕರ ಪ್ರತಿಕ್ರಿಯೆ ಹೀಗಿದೆ...

ಎಂಇಎಸ್ ವಿರುದ್ಧ ಕಾನೂನು ಕ್ರಮ ಜಾರಿ

ಎಂಇಎಸ್ ವಿರುದ್ಧ ಕಾನೂನು ಕ್ರಮ ಜಾರಿ

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವುದು, ಸ್ವಹಿತಾಸಕ್ತಿಗಾಗಿ ಪುಂಡಾಟಿಕೆ ನಡೆಸುವವರ ವಿವರ ಕ್ರಮ ಜರುಗಿಸಲು ಸರ್ಕಾರ ಬದ್ಧವಾಗಿದೆ. ಗಡಿ ಭಾಗದಲ್ಲಿನ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಬೇಕಾದ ಅಗತ್ಯ ಕಾನೂನು ಕ್ರಮಗಳ ಬಗ್ಗೆ ಈಗಾಗಲೇ ಗೃಹ ಸಚಿವ ಕೆ.ಜೆ ಜಾರ್ಜ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತುಮಕೂರಿನಲ್ಲಿ ಭಾನುವಾರ ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದರು.

ಕನ್ನಡ-ಕನ್ನಡಿಗ-ಕರ್ನಾಟಕವನ್ನು ಪ್ರತಿನಿಧಿಸುವ ಪಕ್ಷವೆಲ್ಲಿದೆ?

ಕನ್ನಡ-ಕನ್ನಡಿಗ-ಕರ್ನಾಟಕವನ್ನು ಪ್ರತಿನಿಧಿಸುವ ಪಕ್ಷವೆಲ್ಲಿದೆ?

ಹೈ ಕೋರ್ಟ್ ನ ತೀರ್ಪನ್ನು ಧಿಕ್ಕರಿಸಿ, ಕರ್ನಾಟಕದ ಗಡಿಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂದು ವಾದಿಸುವ ಎಂ.ಇ.ಎಸ್ ನಂತಹ ಸಂಘಟನೆಗಳು ಮಾಡಿರುವ ಕೆಲಸವನ್ನು ರಾಜ್ಯ ಸರಕಾರ ಸುಮ್ಮನೆ ನೋಡುತ್ತ ಕುಳಿತಿದೆ. ಪೋಲಿಸರ ಮೇಲೆ ಹೆಲ್ಲೆ ಮಾಡಿರುವ ಜನರನ್ನು ಬಂಧಿಸುವ ಬದಲು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡಲಾಗಿದೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆಗಳು ಬರುತ್ತಿವೆ. ಈ ಬಗ್ಗೆ ಇಲ್ಲಿ ಧ್ವನಿ ಎತ್ತಿದರೆ ಅಲ್ಲಿ ತಮಗೆ ಓಟು ಸಿಗುವುದಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೌನ ವಹಿಸಿರುವಂತಿದೆ. ಸೋ ಕಾಲ್ಡ್ ರಾಷ್ಟ್ರೀಯ ಪಕ್ಷಗಳ ನಿಜ ಬಣ್ಣ ಕಾಲಕಾಲಕ್ಕೆ ಬಯಲಾಗುತ್ತಲೇ ಬಂದಿದೆ. ಹೈಕಮಾಂಡ್ ನ ಗುಲಾಮಗಿರಿಯಲ್ಲಿ ಬದುಕುವ ಇಂತಹ ಪಕ್ಷಗಳಿಂದ ನಮ್ಮ ನಾಡಿಗೆ ಒಳಿತಾಗುತ್ತದೆ ಎನ್ನುವ ಆಸೆಯಂತೂ ನನಗಿಲ್ಲ. ಕನ್ನಡ-ಕನ್ನಡಿಗ-ಕರ್ನಾಟಕವನ್ನು ಪ್ರತಿನಿಧಿಸುವ, ನಮ್ಮೆಲ್ಲರನ್ನೂ ಪ್ರತಿನಿಧಿಸುವ ಕನ್ನಡದ್ದೇ ಆದ ಪ್ರಾದೇಶಿಕ ಪಕ್ಷವೊಂದು ನಮ್ಮ ನಾಡಿನಲ್ಲಿ ಉದಯಿಸಲೇಬೇಕು.-ಚೇತನ್ ಜೀರಾಳ್

ನಮ್ಮ ನೆಲದಲ್ಲಿ ಎಂಇಎಸ್​​​ ಪುಂಡಾಟಿಕೆ ಖಂಡನೀಯ

ನಮ್ಮ ನೆಲದಲ್ಲಿ ಎಂಇಎಸ್​​​ ಪುಂಡಾಟಿಕೆ ಖಂಡನೀಯ

ಬೆಳಗಾವಿಯಲ್ಲಿ ಎಂಇಎಸ್ ಕನ್ನಡಿಗರಿಗೆ ತೊಂದರೆ ಮಾಡಿದ್ದು ಸರಿಯಲ್ಲ, ನಮ್ಮ ನೆಲದಲ್ಲಿ ಎಂಇಎಸ್​​​ ಪುಂಡಾಟಿಕೆ ಖಂಡನೀಯ, ಎಂಇಎಸ್​​ ಅಟ್ಟಹಾಸಕ್ಕೆ ನಾವು ಸುಮ್ಮನಿರಬಾರದು, ಇಂತಹ ಶಾಂತಿಭಂಗ ಮಾಡಿದ ಜನ ನಮ್ಮ ರಾಜ್ಯಕ್ಕೆ ಬೇಡ, ಅವರ ವೋಟ್​​ನಿಂದ ನಾವು ರಾಜಕಾರಣ ಮಾಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ಅವರು ಗುಲ್ಬರ್ಗಾದಲ್ಲಿ ಹೇಳಿದ್ದಾರೆ. ಗುಲ್ಬರ್ಗಾದಲ್ಲಿ ಅತ್ಯಾಚಾರ ಪೀಡಿತ ಮಹಿಳೆಗೆ ಸಾಂತ್ವನ ಹೇಳಲು ಸಚಿವೆ ಉಮಾಶ್ರೀ ಆಗಮಿಸಿದ್ದಾರೆ.

ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು

ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು

ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಕ್ಯಾತೆ ತೆಗೆಯುತ್ತಿದ್ದರೂ ಗೃಹ ಸಚಿವ ಕೆ.ಜೆ. ಜಾರ್ಜ್ ಮಾತನಾಡುತ್ತಿಲ್ಲ, ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು, ಯಳ್ಳೂರಿನಲ್ಲಿ ಮರಾಠಿ ಬೋರ್ಡ್​ ತೆರವುಗೊಳಿಸಬೇಕು. ಇಲ್ಲವಾದ್ರೆ ಸೋಮವಾರ ಕರವೇ ಉಗ್ರ ಹೋರಾಟ ನಡೆಸಲಿದೆ.

ಎಂಇಎಸ್ ​ ವಿರುದ್ಧ ಕೂಡಲೇ ಕ್ರಮಕೈಗೊಳ್ಳಲಿ, ಕೋರ್ಟ್ ಆದೇಶವಿದ್ದರೂ ಎಂಇಎಸ್ ಪುಂಡಾಟಿಕೆ ಮಾಡಿದೆ. ರಾಜಕಾರಣಿಗಳು ವೋಟ್​ಬ್ಯಾಂಕ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾರಾಯಣಗೌಡರು ಹೇಳಿದ್ದಾರೆ.

ನೃಪತುಂಗ ಕನ್ನಡ ಪ್ರಗತಿಪರ ಸಂಘ ಸ್ವಾಗತ

ನೃಪತುಂಗ ಕನ್ನಡ ಪ್ರಗತಿಪರ ಸಂಘ ಸ್ವಾಗತ

ಎಳ್ಳೂರಿನ ಮಹಾರಾಷ್ಟ್ರ ರಾಜ್ಯ ನಾಮ ಫಲಕವನ್ನು ತೆರವುಗೊಳಿಸಲು ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಅಖಿಲ ಕರ್ನಾಟಕ ನೃಪತುಂಗ ಕನ್ನಡ ಪ್ರಗತಿಪರ ಸಂಘ ಕಾರ್ಯಕಾರಿ ಸಮಿತಿ ಸ್ವಾಗತಿಸಿದೆ. ಈ ತೀರ್ಪಿನಿಂದ ಗಡಿಭಾಗದ ಕನ್ನಡಿಗರು ಸೇರಿದಂತೆ ಎಲ್ಲರಿಗೂ ಸಂತಸ ಮೂಡಿದೆ ಎಂದು ರಾಜ್ಯಾಧ್ಯಕ್ಷ ಎನ್ ಗಣೇಶ್ ಗೌಡ ಹೇಳಿದ್ದಾರೆ. ಜು.31ರಂದು ನಡೆಯಲಿರುವ ಬಂದ್ ಗೆ ತಮ್ಮ ಸಂಘಟನೆಯೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಬೆಳಗಾವಿ ಉಸ್ತುವಾರಿ ಸಚಿವರ ಹೇಳಿಕೆ

ಬೆಳಗಾವಿ ಉಸ್ತುವಾರಿ ಸಚಿವರ ಹೇಳಿಕೆ

ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ಎಳ್ಳೂರಿನಲ್ಲಿ ಗಲಾಟೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಕೋರ್ಟ್ ಆದೇಶದಂತೆ ಬೋರ್ಡ್ ತೆರವು ಮಾಡಲಾಗಿತ್ತು. ಸ್ಥಳೀಯ ಮುಖಂಡರು ಮತ್ತೆ ಬೋರ್ಡ್ ಹಾಕಿರುವುದು ಸರಿಯಲ್ಲ. ಬೋರ್ಡ್ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಅದರಂತೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

English summary
Who said What on Belgaum controversial name board issue. Tension in Yellur village continued today after Marathi-speaking people MES activists attacked media persons near controversial name board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X