ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ವಿಟಿಯು ನೇಮಕದಲ್ಲಿ ಅಕ್ರಮ: 64 ಬೋಧಕರಿಗೆ ನೋಟಿಸ್‌

By Nayana
|
Google Oneindia Kannada News

ಬೆಳಗಾವಿ, ಜು.11: ವಿವಿಧ ಜಿಲ್ಲೆಗಳಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ, ಇತ್ತೀಚೆಗೆ ಬೆಂಗಳೂರಿನ ವಿವಿಯಲ್ಲಿ ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲಾಗಿ ಸುದ್ದಿ ಮಾಡಿತ್ತು.

ಇದೀಗ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡಿರುವ 168 ಸಿಬ್ಬಂದಿಗಳ ಪೈಕಿ 64 ಸಿಬ್ಬಂದಿಗಳು ಅನರ್ಹರು ಎಂದು ತಿಳಿದುಬಂದಿದ್ದು, ವಿವಿರ ಕೇಳಿ ನೋಡಿಸ್‌ ಜಾರಿ ಮಾಡಿದೆ.

ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ

5 ವರ್ಷಗಳ ಹಿಂದೆ ಕುಲಪತಿಯಾಗಿದ್ದ ಡಾ. ಎಚ್‌ ಮಹೇಶಪ್ಪ ಅಧಿಕಾರಾವಧಿಯಲ್ಲಿ 168 ಪ್ರೊಫೆಸರ್‌ಗಳು, ಅಸಿಸ್ಟೆಂಟ್‌ ಪ್ರೊಫೆಸರ್‌ಗಳು ಹಾಗೂ ಅಸೋಸಿಯೇಟ್‌ ಪ್ರೋಫೆಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಪೈಕಿ 64 ಮಂದಿ ಅನರ್ಹರರನ್ನು ನೇಮಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

VTU recruitment scandal: Show cause notice to 64 professors

ಈ ಹಿಂದಿನ ಕುಲಪತಿಗಳ ಅಧಿಕಾರಾವಧಿಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸಲು ರಾಜ್ಯಪಾಲರು ರಚಿಸಿದ್ದ ನ್ಯಾ. ಕೇಶವನಾರಾಯಣ ಸಮಿತಿ ಸಲ್ಲಿಸಿದ ವರದಿಯಲ್ಲಿ ಈ ಲೋಪಗಳನ್ನು ತಿಳಿಸಲಾಗಿತ್ತು. ವಿಟಿಯು ರಚಿಸಿದ್ದ ಕಾರ್ಯಕಾರಿ ಸಮಿತಿ 168 ಬೋಧಕ ಸಿಬ್ಬಂದಿಯ ನೇಮಕದಲ್ಲಿನ ದಾಖಲಾತಿ ಪರಿಶೀಲಿಸಿ, ಅರ್ಹತೆ ಇಲ್ಲದೆಯೂ ನೇಮಕಗೊಂಡವರಿಗೆ ನೋಟಿಸ್‌ ನೀಡಲಾಗಿದೆ. ಈ ಸಮಿತಿ ಕೂಡ ಇತ್ತೀಚೆಗಷ್ಟೇ ವಿವಿಗೆ ತನ್ನ ವರದಿ ಸಲ್ಲಿಸಿದೆ.

ಹಲವರು ನಿರ್ದಿಷ್ಟ ಮೀಸಲಾತಿ ವರ್ಗದಡಿ ಮೀಸಲಾತಿ ಕ್ಲೇಮ್‌ ಮಾಡಿದ್ದಾರೆ. ಆದರೆ ಅವರು ಆ ವರ್ಗದಡಿ ಸೌಲಭ್ಯ ಪಡೆಯಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಸಮಿತಿ ವರದಿ ಆಧರಿಸಿ 64 ಮಮದಿಗೆ ನೋಟಿಸ್‌ ನೀಡಿದ್ದು, 15 ದಿನಗಳಲ್ಲಿ ವಿವರ ನೀಡಬೇಕು ಎಂದು ತಿಳಿಸಿದೆ.

English summary
Following allegations about recruitment process in teaching faculty, Visveswaraya Technical University has issued show cause notice to 64 professors. The recruitment was made in 2013 while Dr Maheshappa was vice chancellor of the university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X