ಕೊರೊನಾ ಸಂಕಷ್ಟದ ನಡುವೆ ಸಿಎಂ ಆಸೆ ವ್ಯಕ್ತಪಡಿಸಿದ ಉಮೇಶ್ ಕತ್ತಿ
ಬೆಳಗಾವಿ, ಜೂನ್ 22: ಶಾಸಕ ಉಮೇಶ್ ಕತ್ತಿ ಈಗಾಗಲೇ ಅನೇಕ ಬಾರಿ ಮುಖ್ಯಮಂತ್ರಿಯಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ. ಆದರೆ, ಇದೀಗ ಕೊರೊನಾ ವೈರಸ್ ಸಮಯದಲ್ಲಿ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.
Recommended Video
ಕೊರೊನಾ ವಾರಿಯರ್ಸ್‌ಗಳಿಗೆ ಕಿಟ್ ವಿತರಣೆ ಮಾಡುವ ಸಮಾರಂಭ ಇಂದು ಹುಕ್ಕೇರಿಯಲ್ಲಿ ನಡೆಯಿತು. ವಿಶ್ವರಾಜ ಕತ್ತಿ ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ಅವರು ಮುಖ್ಯಮಂತ್ರಿಯಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ. ''ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಹಾಗೆಯೇ ನಾನು ರಾಜ್ಯದ ಚುಕ್ಕಾಣಿ ಹಿಡಿಯಲು ಸಬಲನಿದ್ದೇನೆ.'' ಎಂದು ಹೇಳಿದ್ದಾರೆ.

''ಉತ್ತರ ಕರ್ನಾಟಕದ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿ ಬರಲಿ ಎನ್ನುವ ಹಾರೈಕೆ ನಿಮ್ಮದಾಗಿರಲಿ'' ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ, ತಾವು ಮುಖ್ಯಮಂತ್ರಿಯಾಗಲು ಹೊರಟಿದ್ದ ಉಮೇಶ್ ಕತ್ತಿ ಪದೇ ಪದೇ ಅದೇ ಮಾತನ್ನು ಆಡುತ್ತಿದ್ದಾರೆ.












Click it and Unblock the Notifications