ರಾತ್ರೋರಾತ್ರಿ ಕಿಟಕಿ ಸರಳು ಕೊರೆದು ಜೈಲಿನಿಂದ ತಪ್ಪಿಸಿಕೊಂಡ ಕಳ್ಳರು
ಬೆಳಗಾವಿ, ಆಗಸ್ಟ್ 24: ಕಳ್ಳತನ ಮಾಡಿ ಜೈಲು ಸೇರಿದ್ದ ಇಬ್ಬರು ಕೈದಿಗಳು ರಾತ್ರೋರಾತ್ರಿ ಕೋಣೆಯ ಶೌಚಾಲಯದ ಕಿಟಕಿ ಸರಳು ಕೊರೆದು ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಬೆಳಗಾವಿಯ ಹುಕ್ಕೇರಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಗೋಕಾಕ ತಾಲೂಕಿನ ಕೊನ್ನೂರು ಗ್ರಾಮದ ಪರಶುರಾಮ್ ಅಶೋಕ್ ಕಾಮ್ಟೇಕರ್ ಹಾಗೂ ಚಿಕ್ಕೋಡಿ ತಾಲೂಕಿನ ಮಂಜರಿ ಗ್ರಾಮದ ಅನಿಲ್ ತಮ್ಮಣ್ಣ ಈ ಇಬ್ಬರೂ ತಪ್ಪಿಸಿಕೊಂಡವರು. ಶತಮಾನದಷ್ಟು ಹಳೆಯದಾದ ಹುಕ್ಕೇರಿ ಉಪ ಜೈಲಿನ ಮೂರು ಬ್ಯಾರಕ್ ನಲ್ಲಿ ಮೂವತ್ತು ಮಂದಿಯನ್ನು ಇಡಲಾಗಿತ್ತು. ಪ್ರತಿ ಕೋಣೆಯಲ್ಲೂ ಹತ್ತು ಮಂದಿ ಇದ್ದರು.
ರಾತ್ರಿ ಊಟ ಮುಗಿಯುತ್ತಿದ್ದಂತೆ ಎಲ್ಲರೂ ಮಲಗುವುದನ್ನೇ ಕಾಯುತ್ತಿದ್ದ ಈ ಇಬ್ಬರೂ ಚೂಪಾದ ಸಾಧನ ಬಳಸಿ, ಶೌಚಾಯಲದ ಕಿಟಕಿ ಸರಳನ್ನು ಕೊರೆದು ಅದರಿಂದ ತಪ್ಪಿಸಿಕೊಂಡಿದ್ದಾರೆ.

Recommended Video
Lok Sabha Elections 2019 : ಆಟೋ ಚಾಲಕ ದರ್ಶನ್ ಫೋಟೋ ಹಾಕಿದ್ದೇ ತಪ್ಪಾಯ್ತಾ?
ಪರಾರಿಯಾಗಿರುವ ಈ ಇಬ್ಬರನ್ನು ಹುಡುಕಲು ವಿಶೇಷ ತಂಡ ರಚನೆ ಮಾಡಿದ್ದು, ಕಿಟಕಿ ಕೊರೆಯಲು ಬಳಸಿದ್ದ ಸಾಧನ ಹೇಗೆ ಜೈಲಿನೊಳಗೆ ದೊರೆಯಿತು ಎಂಬುದರ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ.












Click it and Unblock the Notifications