ರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು; ಎಲ್ಲೆಲ್ಲೂ ಶ್ಲಾಘನೆ

ಬೆಳಗಾವಿ, ಆಗಸ್ಟ್ 24: ಬೆಳಗಾವಿಯಲ್ಲಿ ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ಬಹುಪಾಲು ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಗುಂಡಿಗಳೇ ತುಂಬಿಕೊಂಡಿವೆ.

ಅದರಲ್ಲೂ ಕೆಎಲ್ಇ ಆಸ್ಪತ್ರೆಯಿಂದ ಎನ್ ಎಚ್ 4 ಸೇರುವ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಜೊತೆಗೆ ಹಾಳಾಗಿರುವ ರಸ್ತೆಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಆದರೆ ಇಷ್ಟು ದಿನಗಳು ಕಳೆದರೂ ರಸ್ತೆ ದುರಸ್ತಿ ಬಗ್ಗೆ ಪಾಲಿಕೆ ತಲೆಕೆಡಿಸಿಕೊಂಡಿಲ್ಲ. ಅಪಾಯಕಾರಿ ಗುಂಡಿ ಮುಚ್ಚಲೂ ಮುಂದಾಗಿಲ್ಲ.

ಪಾಲಿಕೆಯನ್ನು ಬೈದುಕೊಂಡೇ ಜನರೂ ಓಡಾಡುತ್ತಿದ್ದರು. ಆದರೆ ಈ ಸಂಚಾರಿ ಪೊಲೀಸರು ಸುಮ್ಮನೆ ಕೂರಲಿಲ್ಲ. ಇದಕ್ಕೆ ಏನಾದರೂ ವ್ಯವಸ್ಥೆ ಮಾಡಲೇಬೇಕು ಎಂದು ಯೋಚಿಸಿದ ಇವರು ತಾವೇ ಈ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.

Traffic Police Filled The Patholes In The Road

ಮಣ್ಣನ್ನು ತರಿಸಿ ತಾವೇ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿಕೊಂಡರು. ಉತ್ತರ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಪಿ.ಎಸ್ ಕೋಲ್ಕಾರ್, ಹವಾಲ್ದಾರ್ ಎಸ್ ವಿ ಹಾದಿಮನಿ, ಪಿ ಬಿ ನಾಯಕ್ ಈ ಮೂವರೂ ಸಿಬ್ಬಂದಿ ಸೇರಿ ಗುಂಡಿಗಳನ್ನು ಮುಚ್ಚಿದ್ದಾರೆ.

ಸಂಚಾರಿ ಪೊಲೀಸರ ಈ ಕಾರ್ಯ ನೋಡಿ ಜನರು ಅಚ್ಚರಿಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+