ಯಲ್ಲಮ್ಮ ದೇಗುಲದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪು ರದ್ದುಪಡಿಸಿದ ಸುಪ್ರೀಂ ಕೋರ್ಟ್
ಬೆಳಗಾವಿ, ಆಗಸ್ಟ್ 15: ಕರ್ನಾಟಕದಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೇಗುಲಗಳಿವೆ. ಈ ಸಾಲಿಗೆ ಬೆಳಗಾವಿ ಜಿಲ್ಲೆ, ರಾಯಭಾಗ ತಾಲ್ಲೂಕಿನ ಜಲಾಲ್ಪುರ ಗ್ರಾಮದ ಯಲ್ಲಮ್ಮ ದೇವಿ ದೇಗುಲ ಸಹ ಸೇರುತ್ತದೆ. ಇದೀಗ ಇದರ ಬಗ್ಗೆ ಹೈಹೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಳಗಾವಿ ಜಿಲ್ಲೆಯ ಜಲಾಲ್ಪುರ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಯಲ್ಲಮ್ಮ ದೇಗುಲವನ್ನು ಖಾಸಗಿ ಆಸ್ತಿ ಎಂದು ತೀರ್ಮಾನಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಎಂ.ಎಂ.ಸುಂದರೇಶ್ ಮತ್ತು ಕೋಟೇಶ್ವರ ಸಿಂಗ್ ಅವರ ಪೀಠವು, ಸಾರ್ವಜನಿಕರ ಪೂಜೆಗೆ ಮುಕ್ತ ಆಗಿರುವ ಪ್ರಾಚೀನ ದೇವಾಲಯಗಳು ಸಾಮಾನ್ಯವಾಗಿ ಸಾರ್ವಜನಿಕ ದೇಗುಲಗಳು ಎಂಬ ಭಾವನೆ ಇದೆ ಎಂದು ಹೇಳಿದೆ.

ಇನ್ನು ಈ ಭಾವನೆಗಳನ್ನು ನಿರಾಕರಣೆ ಮಾಡಲು ಬಲವಾದ ಪುರಾವೆಗಳ ಅಗತ್ಯ ಇದೆ. ಈ ಕುರಿತು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಣೆ ಮಾಡಿ ಹೊಸದಾಗಿ ನಿರ್ಧಾರ ಮಾಡುವಂತೆ ಸುಪ್ರೀಂ ಕೋರ್ಟ್ ಪೀಠವು ಹೈಕೋರ್ಟ್‌ಗೆ ನಿರ್ದೇಶಿಸಿ, ಅರ್ಜಿಯನ್ನು ಹಿಂದಿರುಗಿಸುವ ಮೂಲಕ ಅದು ನೀಡಿದ್ಧ ತೀರ್ಪನ್ನು ರದ್ದುಗೊಳಿಸಿತು.
ಭಕ್ತರ ಆಕ್ರೋಶ: ಹನೂರು ತಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರನ ಬೆಟ್ಟದಲ್ಲಿ 108 ಅಡಿಯ ಮಲೆ ಮಹದೇಶ್ವರರ ಪ್ರತಿಮೆ ಲೋಕಾರ್ಪಣೆಯಾಗಿ ಎರಡು ವರ್ಷಗಳು ಕಳೆದವು. ಪ್ರತಿಮೆ ಕೆಳಭಾಗದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ 4 ತಿಂಗಳಾಗಿದೆ. ಆದರೆ, ಭಕ್ತರ ವೀಕ್ಷಣೆಗೆ ಇನ್ನೂ ಅವಕಾಶ ಕಲ್ಪಿಸಲಾಗಿಲ್ಲ.
ಮಲೆ ಮಾದಪ್ಪನ ಬೆಟ್ಟದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಮಹದೇಶ್ವರನ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 2023ರ ಮಾರ್ಚ್ 18ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ತರಾತುರಿಯಲ್ಲಿ ಮಲೆ ಮಹದೇಶ್ವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಕಳೆದ ಏಪ್ರಿಲ್ 24ರಂದು ಮಹದೇಶ್ವರನ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ವೇಳೆ ಸಿಎಂ ಸಿದ್ದರಾಮಯ್ಯ ಅವರು, ಪ್ರತಿಮೆಯ ತಳಭಾಗದಲ್ಲಿ ನಿರ್ಮಿಸಿರುವ ಮಲೆ ಮಹದೇಶ್ವರನ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಿದ್ದರು. ಮಾದಪ್ಪನ ಪ್ರತಿಮೆಯನ್ನು ತುಂಬಾ ದೂರದಿಂದ ನೋಡಬಹುದೇ ಹೊರತು, ಹತ್ತಿರದಿಂದ ನೋಡಲು ಅವಕಾಶ ಇಲ್ಲದಂತಾಗಿದೆ.
ಪ್ರತಿಮೆ ನಿರ್ಮಾಣ ಆಗಿರುವ ಬೆಟ್ಟದ ದೀಪದ ಗಿರಿ ಒಡ್ಡು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇನ್ನೂ ಪೂರ್ಣ ಆಗಿಲ್ಲ. ಈಗಾಗಲೇ ಹಲವು ಬಾರಿ ತಡೆಗೋಡೆ ಕಲ್ಲುಗಳು ಕುಸಿದಿವೆ. ಈ ಹಿನ್ನೆಲೆ ರಸ್ತೆ ಕಾಮಗಾರಿ ನೆಪ ಹೇಳಿಕೊಂಡು ಬರಲಾಗುತ್ತಿದೆ. ಭಕ್ತರಿಗೆ ಪ್ರತಿಮೆ ಹಾಗೂ ಮ್ಯೂಸಿಯಂ ವೀಕ್ಷಿಸುವ ಅವಕಾಶ ಇನ್ನೂ ಕಲ್ಪಿಸಲಾಗಿಲ್ಲ ಎಂದು ಜನರು ರಾಜ್ಯ ಸೆರ್ಕಾರದ ವಿರುದ್ಧ ಆಕ್ರೊಶ ಹೊರಹಾಕುತ್ತಿದ್ದಾರೆ.
ಹುಂಡಿಗೆ ಬಿದ್ದ ಹಣ ಎಷ್ಟು ಗೊತ್ತಾ?: ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಒಂದೇ ತಿಂಗಳಿಗೆ ಭಕ್ತರಿಂದ 2.36 ಕೋಟಿ ಕಾಣಿಕೆ ಹರಿದುಬಂದಿದೆ ಎಂದು ತಿಳಿದುಬಂದಿತ್ತು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಕಳೆದ ಮೂವತ್ತು ದಿನಗಳಲ್ಲಿ ಒಟ್ಟು 2.36 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ ಆಗಿತ್ತು.
ಅಷ್ಟೇ ಅಲ್ಲದೆ, 70 ಗ್ರಾಂ ಚಿನ್ನ, 1 ಕೆಜಿ 712 ಗ್ರಾಂ ಬೆಳ್ಳಿ ಆಭರಣಗಳನ್ನು ಭಕ್ತರು ಮಲೆ ಮಾದಪ್ಪನ ಹುಂಡಿಗೆ ಹಾಕಿದ್ದರು. ಹುಂಡಿಯಲ್ಲಿ ಎರಡು ಸಾವಿರ ಮುಖಬೆಲೆಯ 14 ನೋಟುಗಳು ಹಾಗೂ 20 ವಿದೇಶಿ ನೋಟುಗಳು ಕೂಡ ಕಂಡುಬಂದಿದ್ದವು.












Click it and Unblock the Notifications