ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಬೆಳಗಾವಿ ಯೋಧ

ಬೆಳಗಾವಿ, ಜೂ. 06: ಮಣಿಪುರದ ಮೋಲ್ಟುಕ್ ಕಣಿವೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಉಗ್ರರ ಅಟ್ಟಹಾಸದಲ್ಲಿ ಕರ್ನಾಟಕದ ಬೆಳಗಾವಿ ಸೈನಿಕ ಭರತೇಶ್ವರ(31) ವೀರ ಮರಣ ಅಪ್ಪಿದ್ದಾರೆ.

ಇಂಫಾಲದಿಂದ 90 ಕಿ.ಮೀ. ದೂರದಲ್ಲಿರುವ ತೆಂಗ್‌ನೌಪಲ್-ನ್ಯೂ ಸಮ್ತಲ್ ರಸ್ತೆಯಲ್ಲಿ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ ಉಗ್ರರು ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿ ಸೈನ್ಯದ ವಾಹನವನ್ನು ಸ್ಫೋಟಮಾಡಿದ್ದರು.[ಉಲ್ಫಾ ಉಗ್ರರಿಂದ 20 ಯೋಧರ ಭೀಕರ ಹತ್ಯೆ]

army

ಆರ್ಥಿಕವಾಗಿ ಹಿಂದುಳಿದ ಕುಟುಂಬದ ರಾಯಪ್ಪ ಮತ್ತು ಗೋದಾವರಿ ದಂಪತಿಯ ಪುತ್ರ ವೀರ ಯೋಧ ಭರತೇಶ್ವರ. 2006 ರಲ್ಲಿ ಸೈನ್ಯ ಸೇರಿದ್ದ ಭರತೇಶ್ವರ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು, ಸಂಗೀತಾ ಎಂಬುವರನ್ನು ವಿವಾಹವಾಗಿದ್ದ ಅವರಿಗೆ ಚಿರಂಜೀವಿ ಮತ್ತು ಹೃತ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿಗೆ ಮೃತದೇಹ ಆಗಮಿಸಲಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+