ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದ ಎಸ್‌ಐಟಿ
ಬೆಳಗಾವಿ, ಆಗಸ್ಟ್ 30: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಿಂದ ವ್ಯಕ್ತಿಯೊಬ್ಬನನ್ನು ಎಸ್‌ಐಪಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿಯ ಸಾಗರ್ ಲಾಖೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈತ ಗೌರಿ ಹತ್ಯೆ ಆರೋಪದಲ್ಲಿ ಬಂಧಿತನಾಗಿರುವ ಭರತ್ ಕುರ್ನೆ ಜೊತೆ ನಿಟಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಗೌರಿ ಹತ್ಯೆಗೆ ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ: ಮುಂದೇನು?
ಮೊದಲು ಬಂಧಿತನಾಗಿದ್ದ ಭರತ್ ಕುರ್ನೆ, ಗೌರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಪರಶುರಾಮ್ ವಾಘ್ಮೋರೆಗೆ ಆಶ್ರಯ ನೀಡಿದ್ದ ಅಲ್ಲದೆ. ಹತ್ಯೆ ಸಂಚಿಗೂ ನೆರವಾಗಿದ್ದ ಎಂದು ಎಸ್‌ಐಟಿ ಆರೋಪಿಸಿದೆ.
ಗೌರಿ ಲಂಕೇಶ್ ಹತ್ಯೆ: ಪುಣೆಯಲ್ಲಿ ಮತ್ತೊಂದು ಬೈಕ್ ಪತ್ತೆ
ಭರತ್ ಕುರ್ನೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಸಾಗರ್ ಲಾಖೆ ಕೂಡ ಗೌರಿ ಹತ್ಯೆಯ ಹಿಂದೆ ಇರಬಹುದೆಂಬ ಅನುಮಾನದಲ್ಲಿ ಎಸ್‌ಐಟಿಯು ಆತನನ್ನು ವಿಚಾರಣೆ ಒಳಪಡಿಸಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !