ಬೆಳಗಾವಿ ಅಧಿವೇಶನದಲ್ಲಿ ಊಟದ ಖರ್ಚಿಗೆ ಕತ್ತರಿ!
ಬೆಂಗಳೂರು, ನ. 23: ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗುವ ಹತ್ತು ದಿನಗಳ ಚಳಿಗಾಲದ ಅಧಿವೇಶನದದಲ್ಲಿ ಭಾಗವಹಿಸುವವರ ಊಟದ ಮೆನು ಸಿದ್ಧವಾಗಿದೆ. ಕಳೆದ ಅಧಿವೇಶನದಲ್ಲಿ ಊಟೋಚಾರಕ್ಕೆ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಈ ಬಾರಿ ಊಟದ ಖರ್ಚಿಗೆ ಕತ್ತರಿ ಬಿದ್ದಿದೆ.
ನ.25ರ ಸೋಮವಾರದಿಂದ ಆರಂಭವಾಗುವ 10 ದಿನಗಳ ಅಧಿವೇಶನದ ಊಟೋಪಚಾರಕ್ಕೆ ಎರಡು ಕೋಟಿ ರೂ.ನಿಗದಿ ಪಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಗೆ ಭೋಜನ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಊಟದ ವ್ಯವಸ್ಥೆಯ ಗುತ್ತಿಗೆಯನ್ನು ಧಾರವಾಡದ ಮಯೂರ್ ಕೇಟರರ್ ಗುತ್ತಿಗೆ ಪಡೆದಿದೆ.

ಕಳೆದ ಬಾರಿಯ ಅಧಿವೇಶನದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳಿಗಾಗಿ ರಾಗಿ ಮುದ್ದೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ ಮುದ್ದೆ ಊಟಕ್ಕೆ ತಡೆ ನೀಡಲಾಗಿದೆ. ದಿನವೊಂದಕ್ಕೆ ಮೂರು ಸಿಹಿಗಳನ್ನು ಕಳೆದ ಬಾರಿ ನೀಡಲಾಗಿತ್ತು, ಈ ಬಾರಿ ಅದನ್ನು ಒಂದಕ್ಕೆ ಮಿಸಲಿಡಲಾಗಿದೆ. ದಿನಕ್ಕೊಂದು ಸಿಹಿ ತಿಂಡಿಯನ್ನು ಅಧಿವೇಶನದಲ್ಲಿ ಭಾಗವಹಿಸಿದವರಿಗೆ ನೀಡಲಾಗುತ್ತದೆ.
ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು, ಮಾರ್ಷಲ್‌ಗಳು, ಮಾಧ್ಯಮದವರು, ಇತರ ಸಿಬ್ಬಂದಿ ಸೇರಿ ಪ್ರತಿದಿನ ಸುಮಾರು ಮೂರು ಸಾವಿರ ಜನರು ಭೋಜನ ಸವಿಯಲಿದ್ದಾರೆ. ಒಂದು ಊಟಕ್ಕೆ 300 ರಿಂದ 350 ರೂ. ವೆಚ್ಚವಾಗಲಿದೆ. ಪೊಲೀಸರು, ಚಾಲಕರಿಗೆ ಸೌಧದಲ್ಲಿಯೇ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.
ಊಟದ ಮೆನು : ರೊಟ್ಟಿ, ಚಪಾತಿ, ಎಣ್ಣೆಗಾಯಿ, ಭಾಜಿ, ಕಾಳಿನ ಪಲ್ಲೆ, ಸಾಂಬಾರು, ಚಟ್ನಿ, ಪುಟಾಣಿ ಚಟ್ನಿ, ಸಿಹಿ, ಬಿಳಿ ಅನ್ನ, ಮಸಾಲೆ ಅನ್ನ, ಮಜ್ಜಿಗೆ, ಮಣ್ಣಿನ ಗಡಿಗೆಯಲ್ಲಿ ಕೆನೆ ಮೊಸರು, ಹಣ್ಣು, ಬಾಳೆಹಣ್ಣು, ಪಾನ್‌ಬೀಡಾ ನೀಡಲಾಗುತ್ತಿದೆ. ಧಾರವಾಡ ಪೇಡ, ಗೋಕಾಕ ಕರದಂಟು, ಗೋದಿ ಹುಗ್ಗಿ, ಬುಂದಿ ಲಾಡುಗಳನ್ನು ಪ್ರತಿದಿನ ಒಂದರಂತೆ ನೀಡಲು ಸಿದ್ಧತೆ ನಡೆದಿದೆ.
ಬೆಂಗಳೂರು ವಿಧಾನಸೌಧದದಲ್ಲಿನ ಊಟದ ವ್ಯವಸ್ಥೆಯಂತೆ, ಮೇಲ್ಮನೆ ಹಾಗೂ ಕೆಳಮನೆಯವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಶಾಸಕರು, ಸಚಿವರಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ, ಮಾಧ್ಯಮದವರು, ಅಧಿಕಾರಿಗಳಿಗೆ ನೆಲ ಮಹಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸೌಧದ ಹೊರಗಡೆ ಎರಡು ಕಡೆಗಳಲ್ಲಿ ಕ್ಯಾಂಟೀನ್ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications