ಏಳು ದಿನದ ನಂತರ ಕಲಾಪದಲ್ಲಿ ಸಿದ್ದರಾಮಯ್ಯ ಭಾಗಿ
ಬೆಳಗಾವಿ, ಡಿಸೆಂಬರ್ 18: ಬೆಳಗಾವಿ ಅಧಿವೇಶನ ಪ್ರಾರಂಭವಾಗಿ ಏಳು ದಿನಗಳ ನಂತರ ಇಂದು ಸಿದ್ದರಾಮಯ್ಯ ಅವರು ಸದನಕ್ಕೆ ಹಾಜರಾಗಿ ಕಲಾಪದಲ್ಲಿ ಭಾಗವಹಿಸಿದರು.
ಅಧಿವೇಶನ ಆರಂಭವಾಗುವ ದಿನ ಅವರು ಮಲೇಷ್ಯಾ ಪ್ರವಾಸಕ್ಕೆ ತೆರಳಿದರು. ಆದರೆ ಐದು ದಿನಗಳ ಪ್ರವಾಸವನ್ನು ಮೂರು ದಿನಕ್ಕೆ ಮೊಟಕುಗೊಳಿಸಿ ವಾಪಸ್ ಬಂದರು.
ಆ ನಂತರ ಎರಡು ದಿನಗಳ ಕಾಲ ಅಧಿವೇಶನಕ್ಕೆ ಬರದೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ಇದ್ದ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಬೆಳಗಾವಿಗೆ ಬಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಆ ನಂತರ ಅಧಿವೇಶನಕ್ಕೆ ಹಾಜರಾದರು.

ಸಿದ್ದರಾಮಯ್ಯ ಸದನಕ್ಕೆ ಬಂದ ಸಿದ್ದರಾಮಯ್ಯ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಶಾಸಕರು ಬಂದು ಕೈ-ಕುಲುಕಿ ಗೌರವ ಸಲ್ಲಿಸಿದರು. ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಸಿದ್ದರಾಮಯ್ಯ ಅವರ ಕುರ್ಚಿ ಬಳಿ ಬಂದು ಕೂತು ಬಹು ಸಮಯ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.
ಟಗರು ಕಾಳಗ ಸ್ಪರ್ಧೆಗೆ ಮುಖ್ಯ ಅತಿಥಿಯಾಗಿದ್ದ ಸಿದ್ದರಾಮಯ್ಯ ಅವರು ಕಲಾಪ ಮುಗಿಯುವ ಮುನ್ನವೇ ಕಾರ್ಯಕ್ರಮ ನಿಮಿತ್ತ ಹೊರಟರು. ಆ ನಂತರ ಅವರು ತಮ್ಮ ಕ್ಷೇತ್ರ ಬಾದಾಮಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.












Click it and Unblock the Notifications