ಮೊಟ್ಟೆ ಖರೀದಿಗೆ ಲಂಚ; ಶಶಿಕಲಾ ಜೊಲ್ಲೆ ವಿರುದ್ಧ ದೂರು

ಬೆಂಗಳೂರು, ಜುಲೈ 27; ಮೊಟ್ಟೆ ಖರೀದಿಯ ಟೆಂಡರ್‌ಗೆ ಸಂಬಂಧಿಸಿದಂತೆ 1 ಕೋಟಿಗೂ ಹೆಚ್ಚು ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪ ಶಶಿಕಲಾ ಜೊಲ್ಲೆ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಬೆಳಗಾವಿಯಲ್ಲಿ ಲೋಕಾಯುಕ್ತರಿಗೆ ದೂರನ್ನು ಸಹ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ಬೆಳಗಾವಿ ಲೋಕಾಯುಕ್ತ ಕಚೇರಿಗೆ ವಕೀಲರಾದ ಸುರೇಂದ್ರ ಉಗಾರೆ ದೂರು ನೀಡಿದ್ದಾರೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಚಿಕ್ಕೋಡಿಯ ಸಂಜಯ ಅರಗೆ, ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ವಿರುದ್ಧವೂ ದೂರು ನೀಡಲಾಗಿದೆ.

ಸಚಿವರ ವಿರುದ್ಧ ಸುದ್ದಿ ವಾಹಿನಿ 'ನ್ಯೂಸ್‌ ಫಸ್ಟ್‌'ನಲ್ಲಿ ರಹಸ್ಯ ಕಾರ್ಯಾಚರಣೆ ಪ್ರಸಾರವಾಗಿತ್ತು. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ದೂರು ನೀಡಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಸಚಿವ ಸಂಪುಟ ವಿಸರ್ಜನೆಗೊಂಡಿದೆ.

Scam In Egg Procurement Complaint To Lokayukta Against Shashikala Jolle

ಶಶಿಕಲಾ ಜೊಲ್ಲೆ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ಸಚಿವೆಯನ್ನು ಭೇಟಿ ಮಾಡಿಸಿದ್ದು ಗಂಗಾವತಿ ಶಾಸಕ ಪರಣ್ಣ ಜೊಲ್ಲೆಗೆ 1 ಕೋಟಿ ರೂ. ನೀಡಬೇಕು ಹಾಗೂ ತಮಗೆ ರೂ 30 ಲಕ್ಷ ತಿಂಗಳಿಗೆ ಕೊಡಬೇಕು ಎಂದು ಮಾತನಾಡಿರುವುದು ವಿಡಿಯೋದಲ್ಲಿದೆ.

ಗಂಗಾವತಿ ಶಾಸಕರು ಮುಂಗಡವಾಗಿ 1 ಉಂಗರವನ್ನು ಪಡೆದುಕೊಂಡಿದ್ದು ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ನಾಲ್ವರೂ ಭ್ರಷ್ಟಾಚಾರ ಎಸಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಸ್ಪಷ್ಟನೆ ನೀಡಿದ್ದ ಸಚಿವರು; ಮೊಟ್ಟೆ ಖರೀದಿಯಲ್ಲಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದರು. ಇಲಾಖೆಯಿಂದ ಮೊಟ್ಟೆ ಖರೀದಿಗಾಗಿ ಯಾವುದೇ ಟೆಂಡರ್ ಕರೆದಿಲ್ಲ ಮೊಟ್ಟೆ ಪೂರೈಕೆ ಗುತ್ತಿಗೆ ನೀಡುವುದಕ್ಕೆ ನಾನು ಯಾವುದೇ ವ್ಯಕ್ತ ಅಥವ ಸಂಸ್ಥೆಯಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+