ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ: ಕರವೇಯಿಂದ ಸುವರ್ಣ ಸೌಧಕ್ಕೆ ಮುತ್ತಿಗೆ

ಬೆಳಗಾವಿ, ಡಿಸೆಂಬರ್ 20: ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಕರವೇ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆಗೆ ನಡೆಸುತ್ತಿದ್ದಾರೆ. ಶಿವಸೇನೆ ಮತ್ತು ಎಂಇಎಸ್ ನಡೆಯನ್ನು ಖಂಡಿಸಿ ಇಂದು ಸರಣಿ ಹೋರಾಟ ನಡೆಸಲಾಗುತ್ತಿದೆ.

ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ( ಎಂಇಎಸ್) ಮತ್ತು ಶಿವಸೇನೆಯನ್ನು ಭಯೋತ್ಪಾದಕ ಗುಂಪುಗಳು ಎಂದು ಕರವೇ ಕರೆದಿದ್ದು ಇಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ತಪ್ಪಿಸಲಾಗದು ಎಂದು ಹೇಳಿದೆ. ಸುವರ್ಣ ಸೌಧಕ್ಕೂ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಬೆಳಗಾವಿಯಲ್ಲಿ ನಾಲ್ಕು ದಿಕ್ಕುಗಳಲ್ಲೂ ಇಂದು ಬೃಹತ್ ಪ್ರತಿಭಟನೆ ನಡೆಯಲಿದ್ದು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಹಿರೇಬಾಗೇವಾಡಿ ಟೋಲ್ ಗೇಟ್‌ನಿಂದ ಒಂದು ಮೆರವಣಿಗೆ, ಬಾಗಲಕೋಟೆ ಮಾರ್ಗವಾಗಿ ಮತ್ತೊಂದು, ಚಿನ್ನಮ್ಮ ವೃತ್ತದಿಂದ ಸುವರ್ಣ ಚಲೋ, ಪೀರನವಾಡಿಯಿಂದ ಬೈಕ್ -ಕಾರು ಮೂಲಕ ಮತ್ತೊಂದು ಮೆರವಣಿಗೆ ನಡೆಸಲಿದ್ದಾರೆ.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ, "ಶಿವಸೇನೆ ಮತ್ತು ಎಂಇಎಸ್ ಕರ್ನಾಟಕದ ಸ್ವಾಭಿಮಾನವನ್ನು ಕೆರಳಿಸಿದೆ. ಎಂಇಎಸ್ ಕಾರ್ತಕರ್ತರು ಪ್ರತಿಮೆಯನ್ನು ಧ್ವಂಸಗೊಳಿಸುವಾಗ ಬಯಲಾಗಿ ಬಿಟ್ಟು ನಮ್ಮನ್ನು ತಡೆಯುವಂತ ಕೆಲಸ ಮಾಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯವಾಗಿದೆ" ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Rayanna statue vandalism incident: Protest by Karave in Belagavi

'ಒಂದು ಕಿ.ಲೋ ಪಾದಯಾತ್ರೆ ಮಾಡುತ್ತೇವೆ. ನಾವು ನಮ್ಮ ಗುರಿ, ಬದ್ಧತೆ, ನಿಷ್ಠೆಯನ್ನು ತಲುಪುವಂತ ಕೆಲಸ ಮಾಡುತ್ತೇವೆ. ಈ ಸರ್ಕಾರಕ್ಕೆ ಮೊದಲಿದಂಲೂ ಎಂಇಎಸ್ ಯನ್ನು ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದೇವೆ. ಆದರೆ ಈ ಸರ್ಕಾರ ಎಂಈಎಸ್ ಪುಂಡಾಟ ಸಹಿಸಿಕೋಂಡು ಬಂದಿವೆ. ಇವತ್ತಿನ ಸರ್ಕಾರ ಅಂತಲ್ಲ ಹಿಂದಿನ ಸರ್ಕಾರ ಕೂಡ ಇದೇ ಮಾಡಿದೆ. ಈಗಲಾದರೂ ರಣಹೇಡಿ ಆಗಬೇಡಿ. ಈ ನೆಲದ ಸ್ವಾಭಿಮಾನವನ್ನು ಉಳಿಸುವಂತ ಕೆಲಸ ಮಾಡಿ" ಎಂದು ನಾರಾಯಣಗೌಡರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

'ಈ ಬಗ್ಗೆ ನಾನು ರಾಜಕೀಯ ನಾಯಕರೊಂದಿಗೆ ಮಾಡಿದ್ದೇನೆ. ಅವರು ಇಂದು ಸದನದಲ್ಲಿ ಮಾತನಾಡುತ್ತೇವೆ ಎಂದಿದ್ದಾರೆ. ಒಂದು ವೇಳೆ ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾತನಾಡಿಲ್ಲ ಅಂದರೆ ಕ್ರಮ ತೆಗೆದುಕೊಂಡಿಲ್ಲ ಎಂದರೆ ನಾವು ಇನ್ನುಮುಂದೆ ಯಾವ ಪಕ್ಷಕ್ಕೂ ಮತ ಹಾಕುವುದಿಲ್ಲ'ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

'ಮರಾಠಿಗರ ಮತದಾನಕ್ಕಾಗಿ ರಾಜ್ಯದಲ್ಲಿ ಎಂಇಎಸ್ ಪುಂಡರ ಚಟುವಟಿಕೆಗಳನ್ನು ಸಹಿಸಿಕೊಳ್ಳುತ್ತಿದ್ದಾರೆ. ಓಟು ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ನಾಯಕರು ಓಟಿಗಾಗಿ ಅವರನ್ನು ಸಹಿಸಿಕೊಂಡಿದ್ದಾರೆ. ಎಂಇಎಸ್ ನ್ನು ಭಯೋತ್ಪಾದಕರು ಎಂದು ಮರಾಠಿಗರೇ ತಿರಸ್ಕಾರ ಮಾಡಿದ್ದಾರೆ. ಹೀಗಿರುವಾಗ ಎಂಇಎಸ್ ಅವರನ್ನು ಓಲೈಸುವುದನ್ನು ಬಿಡಬೇಕು. ಕರ್ನಾಟಕದ ನೆಲದ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತ ಕೆಲ ಮಾಡಬೇಕು ಎನ್ನುವುದು ನನ್ನ ಮನವಿ' ಎಂದು ಮನವಿ ಮಾಡಿದ್ದಾರೆ.

ನಮ್ಮ ರಾಜ್ಯ ರಕ್ಷಣೆಗಾಗಿ ನಾವು ಬೆಂಗಳೂರಿನಿಂದ ಬರುವಂತ ಪರಿಸ್ಥಿತಿ ಬಂದೊದಗಿದೆ. ಕನ್ನಡದ ಭಾವುಟವನ್ನು ಸುಟ್ಟು ಹಾಕಿದ್ದಾರೆ. ಮಹಿಳೆಯರು ಅರಿಶಿಣ ಕುಂಕುಮ ಎಂದು ನಮ್ಮ ಕನ್ನಡದ ಬಾವುಟವನ್ನು ನೋಡುತ್ತಾರೆ. ಅದನ್ನು ಸುಟ್ಟ್ಟು ಹಾಕಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕರವೇ ಮಹಿಳಾ ಕಾರ್ಯಕರ್ತರು ಕಿಡಿ ಕಾರಿದ್ದಾರೆ.

Recommended Video

      Team India ಸೌತ್ ಆಫ್ರಿಕಾ ವಿರುದ್ಧ ಸರಣಿ ಗೆಲ್ಲೋದು ಡೌಟ್!! | Oneindia Kannada

      ಇದು ಕರವೇ ಕರ್ತವ್ಯ ಮಾತ್ರವಲ್ಲ ಎಲ್ಲರ ಕರ್ತವ್ಯ. ಭಾಷೆ, ನಡೆ, ನುಡಿ ಅಂತ ಬಂದರೆ ಮೊದಲು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದೇವೆ. ಹೋರಾಟವನ್ನು ಹತ್ತಿಕ್ಕುವಂತೆ ಕೆಲಸವನ್ನು ಸರ್ಕಾರ ಮಾಡುತ್ತಲೇ ಬಂದಿದೆ. ಏನೇ ಆಗಲಿ ನಾವು ಪ್ರತಿಭಟನೆ ಮಾಡಿ ಮುತ್ತಿಗೆ ಹಾಕುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+