ರಮೇಶ್ ಜಾರಕಿಹೊಳಿಯ 'ಬೃಹನ್ನಾಟಕ' ವಿಶ್ವದ ಎಂಟನೇ ಅದ್ಭುತ
Recommended Video
ಬೆಳಗಾವಿ, ಜುಲೈ 4: ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯ ರಾಜಕೀಯ ನಡೆಯನ್ನು, ಅವರ ಸಹೋದರ ಸತೀಶ್ ಜಾರಕಿಹೊಳಿ ಕಟುವಾದ ಶಬ್ದದಿಂದ ಟೀಕಿಸಿದ್ದಲ್ಲದೇ, ವ್ಯಂಗ್ಯವೂ ಆಡಿದ್ದಾರೆ.
ರಮೇಶ್ ರಾಜೀನಾಮೆ ನಾಟಕದ ಹಿಂದೆ ಬೇರದೇ ಕಾರಣಗಳಿವೆ. ನಾನು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಹಾಗೇ, ಅವರಿಗೆ ಅವರ ಅಳಿಯಂದಿರರೇ ದೊಡ್ಡ ಸಮಸ್ಯೆ ಎಂದು ಸತೀಶ್ ಹೇಳಿದ್ದಾರೆ.
ಸಹೋದರನ ರಾಜಕೀಯ ನಡೆಯನ್ನು ವಿಶ್ವದ ಎಂಟನೇ ಅದ್ಭುತ ಎಂದು ವ್ಯಂಗ್ಯವಾಡಿರುವ ಸತೀಶ್, ಬಿಜೆಪಿಯವರು ರಮೇಶ್ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ.

ರಮೇಶ್ ರಾಜೀನಾಮೆ ಕೊಟ್ಟ ನಂತರವಷ್ಟೇ ಚುನಾವಣೆಯ ವಿಷಯ. ಹೈಕಮಾಂಡ್ ಈ ವಿಚಾರದಲ್ಲಿ ಏನು ಸೂಚಿಸುತ್ತೋ, ಅದರಂತೆಯೇ ನಡೆಯುತ್ತೇವೆ ಎಂದು ಸತೀಶ್ ಹೇಳಿದ್ದಾರೆ.
ಅಂಬಿರಾವ್, ಅಪ್ಪಿರಾವ್ ಮತ್ತು ಶಂಕರ್ ಎಂಬ ಮೂವರು ಅಳಿಯಂದಿರು ರಮೇಶ್ ಜಾರಕಿಹೊಳಿಗೆ ಇದ್ದಾರೆ. ಇವರನ್ನು ಗೋಕಾಕ ತಾಲ್ಲೂಕಿನಲ್ಲಿ ತ್ರೀ ಇಡಿಯಟ್ಸ್ ಎಂದು ಕರೆಯುತ್ತಾರೆಂದು ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದರು.
ಆನಂದ್ ಸಿಂಗ್ ಮಾತ್ರವೇ ರಾಜೀನಾಮೆ ಸಲ್ಲಿಸಿದ್ದಾರೆ, ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿಲ್ಲ. ಅವರು ರಾಜೀನಾಮೆ ಸಲ್ಲಿಸಿಲ್ಲವೆಂದು ಸ್ಪೀಕರ್ ರಮೇಶ್ ಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದರು.












Click it and Unblock the Notifications