ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಸಿಬ್ಬಂದಿ ಮೇಲೆ ಕ್ರಮಕ್ಕೆ ಸಚಿವ ರಮೇಶ್ ಜಾರಕಿಹೊಳಿ ಆಗ್ರಹ

|
Google Oneindia Kannada News

ಬೆಳಗಾವಿ, ಏ. 27: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ‌ತನ್ನ ಮನೆಯ ಮುಂದೆ ವಾಹನ ತೊಳೆಯುತ್ತಿದ್ದ ಅರೆ ಸೈನಿಕ ಪಡೆಯ ಯೋಧನನ್ನು ಕೇವಲ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಂಧಿಸಿರುವುದು ಖಂಡನೀಯ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಒಬ್ಬ ಯೋಧ ಎನ್ನುವುದನ್ನೂ ಗಮನಿಸದೇ ಸಾರ್ವಜನಿಕವಾಗಿ ಹಿಂಸಿಸಿ, ಒಬ್ಬ ಖೈದಿಯಂತೆ ಕೈಗೆ ಕೋಳ ತೊಡಿಸಿ ಬಂಧಿಸಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಒಬ್ಬ ನಿರಪರಾಧಿ ಯೋಧನನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿ, ಬಂಧಿಸಿರುವುದು ಸಮವಸ್ತ್ರ ಧರಿಸಿದ ಸೈನಿಕರಿಗೆ ಮಾಡಿದ ಅವಮಾನ. ಕೂಡಲೇ ಬಂಧಿತ ಅರೆ ಸೈನಿಕ ಪಡೆಯ ಯೋಧನನ್ನು ಗೌರವದಿಂದ ಬಿಡುಗಡೆ ಮಾಡಬೇಕು. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಮಾಸ್ಕ್‌ ಧರಿಸಿಲ್ಲ ಎಂದು ಸಿಆರ್‌ಪಿಎಫ್ ಯೋಧನಿಗೆ ಇದೆಂಥಾ ಶಿಕ್ಷೆಮಾಸ್ಕ್‌ ಧರಿಸಿಲ್ಲ ಎಂದು ಸಿಆರ್‌ಪಿಎಫ್ ಯೋಧನಿಗೆ ಇದೆಂಥಾ ಶಿಕ್ಷೆ

ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್​ಪಿಎಫ್​ನ CoBRA ವಿಭಾಗದ ಕಮ್ಯಾಂಡೋ ಕ್ಯಾಪ್ಟನ್ ಸಚಿನ್ ಸಾವಂತ್ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ಎಸಗಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್​ಪಿಎಫ್)ನ ಎಡಿಜಿಪಿ ಸಂಜಯ್ ಅರೋರಾ ಇದನ್ನು ತನಿಖೆಗೊಳಪಡಿಸಬೇಕೆಂದು ಒತ್ತಾಯ ಮಾಡಿದ್ದರು.

Ramesh Jarakiholi said the arrest of the CRFF soldier cannot be justified

ಸಿಆರ್‌ಪಿಎಫ್‌ ಯೋಧನ ಮೇಲೆ ಹಲ್ಲೆ: ಪ್ರಕರಣಕ್ಕೆ ಟ್ವಿಸ್ಟ್

ಈ ಸಂಬಂಧ, ಕರ್ನಾಟಕ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಅರೋರಾ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೀಗ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಯೋಧನ ಮೇಲಿನ ಪೊಲೀಸರ ಹಲ್ಲೆಯನ್ನು ಖಂಡಿಸಿದ್ದಾರೆ.

English summary
Water Resources Minister Ramesh Jarakiholi said the arrest of a paramilitary soldier who washed his vehicle in front of his house in Chikkodi city in Belgaum district is a matter of contempt for not wearing a mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X