ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ: ಪ್ರಕರಣಕ್ಕೆ ಟ್ವಿಸ್ಟ್
ಬೆಳಗಾವಿ, ಏಪ್ರಿಲ್ 27: ಬೆಳಗಾವಿಯಲ್ಲಿ ಸಿಆರ್ ಪಿಎಫ್ ಯೋಧನೊಬ್ಬನ ಮೇಲೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಎಂದು ಆರೋಪಿಸಿ ಯೋಧನ ಕೈಗೆ ಕೊಳ ತೊಡಿಸಿ ಸದಲಗಾ ಪೊಲೀಸರು ಚಿತ್ರ ಹಿಂಸೆ ಕೊಟ್ಟಿದ್ದಾರೆ ಎಂದು ಯೋಧನ ಫೋಟೊ ಇರುವ ಪತ್ರಿಕೆಯೊಂದರ ಸುದ್ದಿ ಸಕತ್ ವೈರಲ್ ಆಗಿತ್ತು.
ಈ ಸುದ್ದಿ ತಿಳಿದು ಸೋಮವಾರ ಸಿಆರ್ ಪಿಎಫ್ ಕಮಾಂಡೆಂಟ್ ಸದಲಗಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.ಯೋಧ ಸಚಿನ್ ಸಾವಂತ್ ಕಳೆದ ಗುರುವಾರ ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಸದ್ಯ ಸಚಿನ್ ಸದಲಗಾ ಠಾಣೆಯಲ್ಲಿ ಪೊಲೀಸ್ ವಶದಲ್ಲಿದ್ದಾನೆ.

ಈ ಬಗ್ಗೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಯೋಧ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಬಹುದು ಎಂದು ಕೊಳ ತೊಡಿಸಲಾಗಿತ್ತು. ಇದನ್ನು ತಪ್ಪಾಗಿ ಬಿಂಬಿಸಲಾಗಿದೆ. ಚಿತ್ರಹಿಂಸೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications