ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾ ನಗರಿಯಲ್ಲಿ ಯುವರಾಜನ ಘರ್ಜನೆ

By Mahesh
|
Google Oneindia Kannada News

ಬೆಳಗಾವಿ, ಫೆ.15: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ 12.20ರ ಸುಮಾರಿಗೆ ಕುಂದಾ ನಗರಿಯಲ್ಲಿ ಕಾಲಿರಿಸಿದ್ದಾರೆ. ಆದರೆ, ರಾಹುಲ್ ಅವರಿಂದ ಭರ್ಜರಿ ಭಾಷಣದ ನಿರೀಕ್ಷೆಯಲ್ಲಿದ್ದ ಬೆಳಗಾವಿ ಜನತೆಗೆ ರಾಹುಲ್ ಕೊಂಚ ನಿರಾಸೆ ಮೂಡಿಸಿ ತೆರಳಿದ್ದಾರೆ

ಭಾರತ್ ನಿರ್ಮಾಣ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿರುವ ರಾಹುಲ್ ಗಾಂಧಿ ಅವರಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಂದ ಆತ್ಮೀಯ ಸ್ವಾಗತ ಸಿಕ್ಕಿದೆ. ಕ್ಲಬ್ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಚುಟುಕಾಗಿ ರಾಹುಲ್ ಗಾಂಧಿ ಭಾಷಣ ಮುಗಿಸಿದ್ದಾರೆ

ರಾಹುಲ್ ಗಾಂಧಿ ಅವರು ಪ್ರಸ್ತುತ ಎರಡು ದಿನಗಳ ಕಾಲ ಕರ್ನಾಟಕ ಪವಾಸದಲ್ಲಿದ್ದಾರೆ. ಶನಿವಾರ ಬೆಳಗಾವಿ ಸಮಾವೇಶ ಮುಗಿಸಿಕೊಂಡು ಮೈಸೂರಿಗೆ ತೆರಳಲಿದ್ದಾರೆ ನಂತರ ಬೆಂಗಳೂರಿಗೆ ಬಂದು ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ ನಡೆಸಲಿದ್ದಾರೆ.

ಫೆ.16ರಂದು ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 10 ಡಿಎಸ್ಪಿ, 21 ಸಿಪಿಐ, 62 ಪಿಎಸ್ ಐ, 140 ಎಎಸ್ ಐ ಗಳು ಹಾಗೂ 800 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಳಗಾವಿ ಸಮಾವೇಶದಲ್ಲಿ ಮುಖ್ಯಾಂಶಗಳನ್ನು ಮುಂದೆ ಓದಿ:

13.45: ವಿಪಕ್ಷಗಳು ಜನಸ್ನೇಹಿ ಮಸೂದೆಗಳ ಮಂಡನೆಗೆ ಅವಕಾಶ ನೀಡದೆ ವಿರೋಧಿಸಿ ಜನ ವಿರೋಧಿ ಎನಿಸಿವೆ
* ಆರ್ ಟಿಐ, ಮಹಿಳಾ ಸಬಲೀಕರಣ ಎಲ್ಲವೂ ಕಾಂಗ್ರೆಸ್ ಸರ್ಕಾರದ ಕೊಡುಗೆ
* ಐಟಿ ಕ್ರಾಂತಿಗೆ ರಾಜೀವ್ ಗಾಂಧಿ, ಎಸ್ಸೆಂಕೃಷ್ಣ ಶ್ರಮಿಸಿದ್ದರಿಂದಲೆ ಇಂದು ಬೆಂಗಳೂರು ಐಟಿ ರಾಜಧಾನಿಯಾಗಿದೆ.
* ಬಿಜೆಪಿ ಸರ್ಕಾರ ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ, ಜನತೆ ತಲೆ ತಗ್ಗಿಸುವಂತೆ ಮಾಡಿದರು.

13.40: ಈ ಹಿಂದೆ ಇಲ್ಲಿ ಇದ್ದದ್ದು ಕರ್ನಾಟಕದ ಸರ್ಕಾರವಲ್ಲ. ಬಳ್ಳಾರಿಯ ಸರ್ಕಾರ ಇತ್ತು.
* ಭ್ರಷ್ಟಾಚಾರದ ಕಾರಣದಿಂದ ಬಿಜೆಪಿ ಸರ್ಕಾರವನ್ನು ಜನರು ಕಿತ್ತು ಹಾಕಿದರು
* ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ಲೆಡೆ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಾರೆ.
* ಕರ್ನಾಟಕ, ಮಧ್ಯಪ್ರದೇಶ ಇತರೆ ಬಿಜೆಪಿ ಆಡಳಿತ ರಾಜ್ಯಗಳ ಭ್ರಷ್ಟಾಚಾರದ ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ
* ಬಡವರಿಗೆ ಆಹಾರ ಭದ್ರತೆ, ಸುರಕ್ಷತೆ ನೀಡಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ

ರಾಹುಲ್ ಗಾಂಧಿ ಭಾಷಣ: ಕರ್ನಾಟಕದಲ್ಲಿ ಐಟಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲು ಎಲ್ಲಾ ವರ್ಗದ ಸದ್ಬಳಕೆ ಮಾಡಲಾಗಿದೆ.
* ವಿಪಕ್ಷಗಳು ಒಡೆದು ಆಳುವ ನೀತಿ ಅನುಸರಿಸುತ್ತಿವೆ. ನಾವು ಎಲ್ಲರನ್ನು ಒಗ್ಗೂಡಿಸುತ್ತಿದ್ದೇವೆ
* ಬೆಳಗಾವಿಗೆ ಈ ಹಿಂದೆ ಮಹಾತ್ಮಾ ಗಾಂಧಿ ಬಂದಿದ್ರು ಈ ಊರಿನ ಜತೆ ಕಾಂಗ್ರೆಸ್ ತುಂಬಾ ಆತ್ಮೀಯ ನಂಟಿದೆ.
* ದೇವರಾಜ ಅರಸು ಕಾಲದಲ್ಲಿ ದಲಿತರು, ಬಡವರು,ಕಾರ್ಮಿಕರು ಶ್ರಮಿಕ ವರ್ಗದ ಕಣ್ಮಣಿಯಾಗಿದ್ದರು.
* ರಾಜೀವ್ ಗಾಂಧಿ ಅವರು ಕಂಪ್ಯೂಟರ್ ಬಗ್ಗೆ ಮಾತನಾಡಿದಾಗ ವಿಪಕ್ಷಗಳು ಗೇಲಿ ಮಾಡಿದ್ದರು.
* ಈಗ ಬೆಂಗಳೂರಿನಲ್ಲಿ ಕಂಪ್ಯೂಟರ್ ಎಷ್ಟು ಉದ್ಯೋಗ ಒದಗಿಸಿದೆ ಎಂಬುದನ್ನು ಕಾಣಬಹುದು.
* ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಹೇಳುವ ಮೂಲಕ ಭಾಷಣ ಆರಂಭಿಸಿದ ರಾಹುಲ್ ಗಾಂಧಿ

ಸಿದ್ದರಾಮಯ್ಯ ಭಾಷಣ: ನರಹತ್ಯೆ ಮಾಡಿದ ನರೇಂದ್ರ ಮೋದಿ ದೇಶವನ್ನು ಆಳಲು ಸಮರ್ಥರೇ ಎಂದು ಜನತೆ ಪ್ರಶ್ನಿಸಬೇಕಿದೆ
* ಮನುಷ್ಯತ್ವ, ಜಾತ್ಯಾತೀಯತೆಯಲ್ಲಿ ನಂಬಿಕೆಯಿಲ್ಲ ಇಂಥವರಿಗೆ ಓಟ್ ಕೊಟ್ಟರೆ ದೇಶದ ಐಕ್ಯತೆಗೆ ಧಕ್ಕೆ
* ಎರಡು ಬಜೆಟ್ ಗಳಿಂದ 169 ಭರವಸೆಗಳಲ್ಲಿ ನೂರಕ್ಕೂ ಹೆಚ್ಚು ಭರವಸೆ ಈಡೇರಿಸಲಾಗಿದೆ.
* ಬಿಜೆಪಿ ಸರ್ಕಾರದ 10 ಸಾವಿರ ಬಿಲ್ ಗಳನ್ನು ತೀರಿಸಬೇಕಾಯಿತು. ಅಭಿವೃದ್ಧಿ ಕುಂಠಿತ ಸರ್ಕಾರ ಎಂದರೆ ಅದು ಬಿಜೆಪಿಯದ್ದು
* ಬೆಳಗಾವಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಉಪಸ್ಥಿತಿ

English summary
Congress vice-president Rahul Gandhi will embark on a two-day tour of the state of Karnataka on Saturday. He is set to organise a road rally and media interaction in Bangalore on Saturday and also hold interaction with students in the city. he is also scheduled to address a big rally in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X