ಪಬ್ ಜಿ ಆಡದಂತೆ ಬುದ್ಧಿವಾದ ಹೇಳಿದ ತಂದೆಯ ಹತ್ಯೆ!
ಬೆಳಗಾವಿ, ಸೆಪ್ಟೆಂಬರ್ 09 : ಪಬ್ ಜಿ ಆಡದಂತೆ ಬುದ್ಧಿವಾದ ಹೇಳಿದ ತಂದೆಯನ್ನು ಮಗ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಾಕತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದವರನ್ನು ಶಂಕ್ರಪ್ಪ (59) ಎಂದು ಗುರುತಿಸಲಾಗಿದೆ. ಪುತ್ರ ರಘುವೀರ್ ಕಮ್ಮಾರ್ ತಂದೆಯನ್ನು ಹತ್ಯೆ ಮಾಡಿದ್ದು ಕೈ, ಕಾಲು ಮತ್ತು ರುಂಡವನ್ನು ಬೇರ್ಪಡಿಸಿದ್ದಾನೆ.
ಶಿವಮೊಗ್ಗದಲ್ಲಿ ಪಬ್ ಜಿ ಆಡುತ್ತಿದ್ದ ಬಾಲಕ ಸಾವು
ರಘುವೀರ್ ಕಮ್ಮಾರ್‌ಗೆ ಪಬ್ ಜಿ ಆಡುವ ಹವ್ಯಾಸ ಹೆಚ್ಚಾಗಿತ್ತು. ಇಂಟರ್‌ನೆಟ್ ಪ್ಯಾಕ್ ಖಾಲಿಯಾಗಿತ್ತು. ರಿಚಾರ್ಜ್ ಮಾಡಿಸಲು ತಂದೆಯ ಬಳಿ ಹಣ ಕೇಳಿದ್ದ. ಆದರೆ, ಶಂಕ್ರಪ್ಪ ಹಣ ನೀಡಿರಲಿಲ್ಲ ಮತ್ತು ಪಬ್ ಜಿ ಆಡದಂತೆ ಬುದ್ಧಿವಾದ ಹೇಳಿದ್ದ.
ಮೊಬೈಲ್ ಗೇಮ್ನ ಟಾಸ್ಕ್ ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಂಡ ಯುವಕ
ಇದರಿಂದ ಕೋಪಗೊಂಡ ರಘುವೀರ್ ಕಮ್ಮಾರ್ ತಂದೆ ಮಲಗಿದ್ದಾಗ ಕೊಲೆ ಮಾಡಿದ್ದಾನೆ. ತಲೆ, ಕೈ, ಕಾಲುಗಳನ್ನು ದೇಹದಿಂದ ಬೇರ್ಪಡಿಸಿದ್ದಾನೆ. ಕೊಲೆಯ ಭೀಕರತೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಪಬ್ಜಿ ಮೊಬೈಲ್ ಪ್ರತಿಭೆಗಳಿಗೆ ಸವಾಲ್, ಆಟವಾಡಿ 1.5 ಕೋಟಿ ರು ಗೆಲ್ಲಿ
ಶಂಕ್ರಪ್ಪ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದ ನಿವಾಸಿ. ಪೊಲೀಸ್ ಇಲಾಖೆಯಲ್ಲಿ ಎಎಸ್‌ಐ ಆಗಿದ್ದ ಅವರು ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಮೊಬೈಲ್ ಬಳಕೆ ವಿಚಾರಕ್ಕೆ ತಂದೆ-ಮಗನ ನಡುವೆ ಜಗಳ ನಡೆದಿತ್ತು.
ತಂದೆಯೊಂದಿಗೆ ಗಲಾಟೆ ಮಾಡಿದ್ದ ರಘುವೀರ್ ಅಕ್ಕ-ಪಕ್ಕದ ಮನೆಗಳ ಗಾಜುಗಳನ್ನ ಒಡೆದು ಹಾಕಿದ್ದ. ಕಾಕತ ಪೊಲೀಸರು ಸ್ಥಳಕ್ಕೆ ಆಗಮಿಸಿ, ತಂದೆಯ ಸಮ್ಮುಖದಲ್ಲಿ ಆತನಿಗೆ ಕೆಲವು ದಿನಗಳ ಹಿಂದೆ ಬುದ್ಧಿವಾದ ಹೇಳಿ ಹೋಗಿದ್ದರು.
ಭಾನುವಾರ ರಾತ್ರಿ ಪುನಃ ಜಗಳ ನಡೆದಿತ್ತು, ಕೋಪಗೊಂಡ ರಘುವೀರ್ ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲಗಿದ್ದ ತಂದೆಯ ಕತ್ತು ಕೊಯ್ದ ಕೊಲೆ ಮಾಡಿದ್ದಾನೆ. ಆರೋಪಿ ರಘುವೀರನನ್ನು ಕಾಕತಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.