ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಿ ಹೆಬ್ಬಾಳ್ಕರ್‌, ಜಾರಕಿಹೊಳಿ ಸಹೋದರರ ನಡುವೆ ಮತ್ತೆ ಜಟಾಪಟಿ?

|
Google Oneindia Kannada News

ಬೆಳಗಾವಿ, ಅಕ್ಟೋಬರ್ 12: ರಾಜ್ಯ ರಾಜಕಾರಣವನ್ನೇ ತಲ್ಲಣಗೊಳಿಸಿದ್ದ ಬೆಳಗಾವಿ ರಾಜಕೀಯ ಮತ್ತೆ ಹೆಡೆ ಎತ್ತುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ತಿಂಗಳ ಹಿಂದಷ್ಟೆ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ಮಧ್ಯೆ ಜಟಾಪಟಿ ನಡೆದು ಅದು ದೆಹಲಿ ಹೈಕಮಾಂಡ್‌ ವರೆಗೂ ಹೋಗಿತ್ತು. ಅದು ಮರೆಯುವ ಮುನ್ನವೇ ಬೆಳಗಾವಿಯಲ್ಲಿ ಇನ್ನೊಂದು ಸ್ಥಳೀಯ ಸಂಸ್ಥೆಯ ಅಧ್ಯಕ್ಷರ ಚುನಾವಣೆ ಬಂದಿದೆ.

ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?

ಬೆಳಗಾವಿ ಎಪಿಎಂಸಿ ಅಧ್ಯಕ್ಷರ ಆಯ್ಕೆ ಸನಿಹದಲ್ಲೇ ನಡೆಯಲಿದ್ದು, ಇಲ್ಲೂ ಸಹ ಲಕ್ಷ್ಮಿ ಹೆಬ್ಬಾಳ್ಕರ್ ಬಳಗ ಹಾಗೂ ಜಾರಕಿಹೊಳಿ ಸಹೋದರರ ಬಳಕ ಎದುರು ಬದುರಾಗಲಿದೆ. ಆ ಮೂಲಕ ಮತ್ತೆ ಇಬ್ಬರು ರಾಜಕೀಯ ದಿಗ್ಗಜರ ನಡುವೆ ರಾಜಕೀಯ ಕಾದಾಟ ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಎಪಿಎಂಸಿ ಚುನಾವಣೆ ಮಾಹಿತಿ

ಎಪಿಎಂಸಿ ಚುನಾವಣೆ ಮಾಹಿತಿ

ಬೆಳಗಾವಿ ಎಪಿಎಂಸಿ ಅಧ್ಯಕ್ಷರ ಆಯ್ಕೆ ಚುನಾವಣೆ ಇದೇ ಅಕ್ಟೋಬರ್ 15ಕ್ಕೆ ನಿಗದಿಯಾಗಿದೆ. 14 ಜನ ಚುನಾಯಿತ ಸದಸ್ಯರು ಹಾಗೂ ಮೂರು ಜನ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ.

ಕಳೆದ ಬಾರಿ ಏನಾಗಿತ್ತು?

ಕಳೆದ ಬಾರಿ ಏನಾಗಿತ್ತು?

ಕಳೆದ ಬಾರಿ ಎಪಿಎಂಸಿ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಬಣ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ ಬಣಗಳು ಸಮಬಲ ಸಾಧಿಸಿದ್ದವು. ಚೀಟಿ ಹಾಕಿದಾಗ ಸತೀಶ್ ಬಣದ ವಿಠಲ್‌ ಜಾದವ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಅವರ 20 ತಿಂಗಳ ಅವಧಿ ಮುಕ್ತಾಯವಾಗಿದೆ ಹಾಗಾಗಿ ಹೊಸ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟು ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟು

ಪಿಎಲ್‌ಡಿ ಚುನಾವಣೆಯಲ್ಲಿ ಜಟಾಪಟಿ

ಪಿಎಲ್‌ಡಿ ಚುನಾವಣೆಯಲ್ಲಿ ಜಟಾಪಟಿ

ಪಿಎಲ್‌ಡಿ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವೆ ಭಾರಿ ಜಟಾಪಟಿ ನಡೆದಿತ್ತು. ಸಂಧಾನ ಮಾತುಕತೆ ತರುವಾಯ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಜಯವಾಗಿತ್ತು, ಆದರೆ ಆ ನಂತರ ಜಾರಕಿಹೊಳಿ ಸಹೋದರರು ಕಾಂಗ್ರೆಸ್‌ ವಿರುದ್ಧವೇ ಬಂಡಾವೆದ್ದಿದ್ದರು. ಹೈಕಮಾಂಡ್‌ ಮಧ್ಯ ಪ್ರವೇಶದ ನಂತರ ಪರಿಸ್ಥಿತಿ ತಿಳಿಯಾಗಿತ್ತು.

ಲಕ್ಷ್ಮಿ ಹೆಬ್ಬಾಳ್ಕರ್‌ಗೆ 30 ಕೋಟಿ ಹಣ ಮತ್ತು ಸಚಿವ ಸ್ಥಾನದ ಆಮಿಷಲಕ್ಷ್ಮಿ ಹೆಬ್ಬಾಳ್ಕರ್‌ಗೆ 30 ಕೋಟಿ ಹಣ ಮತ್ತು ಸಚಿವ ಸ್ಥಾನದ ಆಮಿಷ

ಈಗಿನದ್ದೂ ಅದೇ ಸ್ಥಿತಿ

ಈಗಿನದ್ದೂ ಅದೇ ಸ್ಥಿತಿ

ಈಗಾಗಲೇ ಬೆಳಗಾವಿ ಎಪಿಎಂಸಿಯಲ್ಲಿ ಬಣ ರಾಜಕೀಯ ಪ್ರಾರಂಭವಾಗಿದೆ. ಕಳೆದ ಬಾರಿ ಸತೀಶ್‌ ಅವರ ಬೆಂಬಲಿಗರು ಅಧ್ಯಕ್ಷರಾಗಿದ್ದರು ಹಾಗಾಗಿ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಮ್ಮ ಬೆಂಬಲಿಗರನ್ನು ಎಪಿಎಂಸಿ ಅಧ್ಯಕ್ಷರ ಖುರ್ಚಿಯ ಮೇಲೆ ಕೂರಿಸಲು ಈಗಾಗಲೇ ಕಸರತ್ತು ಪ್ರಾರಂಭಿಸಿದ್ದಾರೆ.

ಮತ್ತೆ ಶುರುವಾಯ್ತು ಲಕ್ಷ್ಮಿ ಹೆಬ್ಬಾಳ್ಕರ್ ಆಟ, PLD ಬ್ಯಾಂಕ್ ಮ್ಯಾನೇಜರ್ ಅಮಾನತು!ಮತ್ತೆ ಶುರುವಾಯ್ತು ಲಕ್ಷ್ಮಿ ಹೆಬ್ಬಾಳ್ಕರ್ ಆಟ, PLD ಬ್ಯಾಂಕ್ ಮ್ಯಾನೇಜರ್ ಅಮಾನತು!

English summary
Belgavi APMC president election is creating stage for another political fight between Lakshmi Hebbalkar and Jarakiholi brothers in Belgavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X