ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಿಸಿದ್ದೆಲ್ಲಾ ಹೆಣ್ಣು ಮಗು, ಮನನೊಂದ ತಾಯಿ ಆತ್ಮಹತ್ಯೆ

|
Google Oneindia Kannada News

ಬೆಳಗಾವಿ, ಡಿ.4 : ಗಂಡು ಮಗು ಜನಿಸಲಿಲ್ಲ ಎಂಬ ಕಾರಣದಿಂದ ಆರು ಹೆಣ್ಣು ಮಕ್ಕಳ ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗಂಡು ಮಗುವಾಗುತ್ತದೆ ಎಂಬ ಆಸೆಯಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದ ಮಹಿಳೆಗೆ ಕೆಲವು ದಿನಗಳ ಹಿಂದೆ ಪುನಃ ಹೆಣ್ಣು ಮಗು ಹುಟ್ಟಿತ್ತು.

ಖಾನಾಪುರ ತಾಲೂಕಿನ ದೇವನತ್ತಿ ಗ್ರಾಮದ ಸಾವಿತ್ರಿ ಸಂಪನ್ನವರ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹದಿನೈದು ವರ್ಷಗಳ ಹಿಂದೆ ಸಾವಿತ್ರಿ ಅವರ ವಿವಾಹವಾಗಿತ್ತು. ಈಗಾಗಲೇ ಅವರಿಗೆ ಐದು ಹೆಣ್ಣು ಮಕ್ಕಳಿವೆ.

Belagavi

ಕೆಲವು ದಿನಗಳ ಹಿಂದೆ ಸಾವಿತ್ರಿ ಅವರಿಗೆ ಹೆರಿಗೆಯಾಗಿದ್ದು, ಆಗಲೂ ಹೆಣ್ಣು ಮಗು ಹುಟ್ಟಿತ್ತು. ಆದ್ದರಿಂದ ಮನನೊಂದ ಸಾವಿತ್ರಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಪೋಷಕರ ಮೂಢ ನಂಬಿಕೆ, ಮಗುವಿನ ಸ್ಥಿತಿ ಗಂಭೀರ]

ಸಾವಿತ್ರಿ ಮತ್ತು ಆಕೆಯ ಪತಿ ಗಂಡು ಮಗುಬೇಕು ಎಂಬ ಆಕಾಂಕ್ಷೆ ಹೊಂದಿದ್ದರು. ಆದ್ದರಿಂದ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿರಲಿಲ್ಲ. ಆದರೂ, ಪುನಃ ಹೆಣ್ಣು ಮಗು ಹುಟ್ಟಿದ್ದರಿಂದ ಮನನೊಂದು ಆರು ಹೆಣ್ಣು ಮಕ್ಕಳನ್ನು ಬಿಟ್ಟು ಸಾವಿತ್ರಿ ಅವರು ಸಾವಿಗೆ ಶರಣಾಗಿದ್ದಾರೆ.

ಗಂಡು ಮಗುವಾಗಲಿಲ್ಲ ಎಂದು ತಾಯಿ ಆತ್ಮಹತ್ಯೆ ಮಾಡಿಕೊಂಡಳು, ಆದರೆ ಬದುಕುಳಿದಿರುವ ಆರು ಮುಗ್ಧ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಎಂಬುದು ಪ್ರಶ್ನೆಯಾಗಿದೆ.

English summary
In a heart wrenching incident in Belagavi, a mother of six girls committed suicide by consuming poison. Reason for this extreme step is she could not give birth to male baby. Who is responsible for this death? Who will look after those innocent kids?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X