ಜೈಲಿನಿಂದಲೇ ಗ್ರಾ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ!
ಬೆಳಗಾಗಿ, ಡಿಸೆಂಬರ್ 22: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವ್ಯಕ್ತಿಯೊಬ್ಬರ ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕಿಳಿದಿದ್ದಾನೆ. 'ಆಟೋ' ವನ್ನು ಅಭ್ಯರ್ಥಿಗೆ ಚುನಾವಣಾ ಚಿನ್ಹೆಯಾಗಿ ನೀಡಲಾಗಿದೆ.
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಸ್ಪರ್ಧೆ ಪರುಶರಾಮ್ ಭರಮಾ ಪಾಕರೆ (37) ಎಂಬ ಆರೋಪಿ ಚುನಾವಣಾ ಕಣಕ್ಕಿಳಿದಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಪರುಶರಾಮ್ ಬಂಧನವಾಗಿದೆ.
ಮುಚ್ಚಂಡಿ ಗ್ರಾಮದ ಮಹೇಶ ಅವ್ವಾನೆ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಪರುಶರಾಮ್ ಭರಮಾ ಪಾಕರೆ ಮೇಲಿದೆ. ಎರಡು ತಿಂಗಳ ಹಿಂದೆ ಜೈಲು ಸೇರಿದ್ದ ಪರುಶರಾಮ ಪಾಕರೆ ಚುನಾವಣೆಗೆ ಅಭ್ಯರ್ಥಿಯಾಗಿದ್ದಾರೆ.

ಮಹೇಶ ಅವ್ವಾನೆ ಹತ್ಯೆ ಪ್ರಕರಣದಲ್ಲಿ ಪರುಶರಾಮ್ 4ನೇ ಆರೋಪಿಯಾಗಿದ್ದಾನೆ. ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಯ ಮುಚ್ಚಂಡಿ ಗ್ರಾಮದ ಅಧ್ಯಕ್ಷರಾಗಿರುವ ಪರುಶರಾಮ, ಸ್ನೇಹಿತರ ಒತ್ತಡಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಪರುಶರಾಮ್ ನಾಮಪತ್ರವನ್ನು ಸಲ್ಲಿಸಿದ್ದಾರೆ. ಜೈಲಿನಲ್ಲಿದ್ದ ಪರುಶರಾಮ್ ಸಹಿ ಮಾಡಿಸಿಕೊಂಡು ಬಂದು ಸ್ನೇಹಿತರೇ ನಾಮಪತ್ರವನ್ನು ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಪರುಶರಾಮ ಪರವಾಗಿ ಸ್ನೇಹಿತರೇ ಪ್ರಚಾರ ನಡೆಸಿದ್ದಾರೆ. ಪರುಶರಾಮ ಪಾಕರೆ ಗೆಲುವು ಸಾಧಿಸಲಿದ್ದಾರೆ ಎಂದು ಸ್ನೇಹಿತರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications