ಬೆಳಗಾವಿ: ಎಂಇಎಸ್ ಶಾಸಕನಿಂದ ಕಾಂಗ್ರೆಸ್ ನಾಯಕಿಗೆ ಆವಾಜ್

ಬೆಳಗಾವಿ, ಜನವರಿ 25: ತುಂಬಿದ ಸಭೆಯಲ್ಲಿ ಹಾಲಿ ಶಾಸಕ ಮತ್ತು ಎಂಎಲ್‌ಎ ಟಿಕೆಟ್ ಆಕಾಂಕ್ಷಿಗಳಿಬ್ಬರು ಬೈದಾಡಿಕೊಂಡಿರುವ ಘಟನೆ ಬೆಳಗಾವಿಯ ಖಾನಾಪುರ ಬಳಿ ನಡೆದಿದೆ.

ಖಾನಾಪುರ ಎಂಇಎಸ್ ಶಾಸಕ ಅರಂವಿಂದ್ ಪಾಟೀಲರಂತೂ ಎಲ್ಲರ ಮುಂದೆಯೇ ಮಹಿಳೆಯೆಂದೂ ನೋಡದೆ ಕಾಂಗ್ರೆಸ್‌ನ ಖಾನಾಪುರ ಟಿಕೆಟ್ ಆಕಾಂಕ್ಷಿ ಅಂಜಲಿ ಅವರಿಗೆ ಜೋರು ಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ.

ಘಟನೆ ನಡೆದದ್ದು ಹೀಗೆ...
ಕೆಲ ದಿನಗಳ ಹಿಂದೆಯಷ್ಟೆ ಖಾನಾಪುರದ ಎಂಇಎಸ್ ಶಾಸಕ ಅರವಿಂದ ಪಾಟೀಲ, ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್ ಅವರು ಖಾನಾಪುರ ಬಳಿಯ ಜಾಂಬೋಟಿ ಮಾನ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

MLA warns congress lady leader on publicly

ಕಾರ್ಯಕ್ರಮದಲ್ಲಿ ಮಾತನಾಡಿದ ಅಂಜಲಿ ಅವರು ಕ್ಷೇತ್ರದ ಹಳ್ಳಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳು ಇಲ್ಲಾ. ರಸ್ತೆ , ನೀರು ಶುದ್ದೀಕರಣ ಘಟಕ, ಸೌಲಭ್ಯಗಳಿಂದ ಗ್ರಾಮಗಳು ವಂಚಿತವಾಗಿದೆ. ಯುವಕರು ಉದ್ಯೋಗ ಅರಸಿ ಪಟ್ಟಣಕ್ಕೆ ಹೊಗುತ್ತಿದ್ದಾರೆ ಎಂದು ಟೀಕಿಸಿದರು.

ಇದರಿಂದ ಮುಜುಗರಕ್ಕೆ ಒಳಗಾದ ಶಾಸಕ ಅರವಿಂದ ಪಾಟೀಲ್ ಅವರು ಒಮ್ಮೆಲೆ ನುಗ್ಗಿಬಂದು ಅಂಜಲಿ ಅವರಿಂದ ಮೈಕ್ ಕಸಿದುಕೊಂಡು, ಹೀಗೆಲ್ಲಾ ಮಾತನಾಡಿದರೆ ಎಚ್ಚರ ಎಂದು ಆವಾಜ್ ಹಾಕಿದ್ದಾರೆ.

ಶಾಸಕರ ವರ್ತನೆಗೆ ಕೆರಳಿದ ಅಂಜಲಿ ನಿಂಬಾಳ್ಕರ್ ಅವರು ಶಾಸಕರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ, ಹೀಗಾಗಿ ಕೆಲ ಕಾಲ ಅಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಆ ನಂತರ ಕಾರ್ಯಕ್ರಮ ಆಯೋಜಕರು ಮತ್ತು ಸ್ಥಳೀಯರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.

ಇವರಿಬ್ಬರೂ ವೇದಿಕೆಯಲ್ಲೇ ಬೈದಾಡಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+