ಏಷ್ಯನ್‌ ಗೇಮ್ಸ್ ನಲ್ಲಿ‌ ಕಂಚಿನ ಪದಕ‌ ಗೆದ್ದ ಕುಂದಾನಗರಿ ಕುವರಿ

Recommended Video

      Asian Games 2018: ಭಾರತಕ್ಕೆ ಮತ್ತೊಂದು ಕಂಚು | Oneindia Kannada

      ಬೆಳಗಾವಿ, ಆಗಸ್ಟ್.29:ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್​ ಗೇಮ್ಸ್ ​​​ನಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

      ಅಂದಹಾಗೆ ನಿನ್ನೆ ಮಂಗಳವಾರ ನಡೆದ ಖುರಾಷ್​​​ ಪಂದ್ಯದಲ್ಲಿ ಬೆಳಗಾವಿಯ ತುರಮರಿ ಗ್ರಾಮದ ಯುವ ಪ್ರತಿಭೆ ಮಲಪ್ರಭಾ ಜಾಧವ್(18)​​ ಮಹಿಳೆಯರ 52 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶದ ಗೌರವಕ್ಕೆ ಮತ್ತೊಂದು ಗರಿ ಮೂಡಿಸಿದ್ದಾರೆ.

      ಇದೀಗ ಮಲಪ್ರಭಾ ಹುಟ್ಟೂರು ತುರಮರಿಯಲ್ಲಿ ಸಂಭ್ರಮ ಮನೆಮಾಡಿದ್ದು, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

      Malaprabha Jadhav won a bronze in Kurash on Tuesday at the Asian Games

      ಎಲ್ಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ, ಮಲಪ್ರಭಾ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್​ನಲ್ಲಿ ಉಜ್ಬೇಕಿಸ್ಥಾನದ ಆಟಗಾರ್ತಿ ಗುಲ್ನೋರ್ ವಿರುದ್ಧ ಪರಾಭವಗೊಂಡು‌ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

      ಬೆಳಗಾವಿಯ ಡಿವೈಎಸ್ ನ ಜುಡೋ ಕೋಚ್ ಎಂ.ಎನ್. ತ್ರಿವೇಣಿ ಹಾಗೂ ಜಿತೇಂದ್ರ ಸಿಂಗ್ ಮಲಪ್ರಭಾ ಜಾಧವ್ ಗೆ ತರಬೇತಿ ನೀಡಿದ್ದರು.

      ನಗರದ ವನಿತಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಲಪ್ರಭಾ ಖುರಾಷ್ ನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಎಂಬ ಕೀರ್ತಿಗೂ ಮಲಪ್ರಭಾ ಪಾತ್ರರಾಗಿದ್ದಾರೆ.

      ಮಲಪ್ರಭಾ ಜಾಧವ್ ಶಾಲಾ ಮಟ್ಟದಲ್ಲಿ ಇರುವಾಗಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಇವರ ಸಾಧನೆ ಕಂಡು ಬೆಳಗಾವಿಯಲ್ಲಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಇಲಾಖೆಯ ವಸತಿ ನಿಲಯದಲ್ಲಿ ಇರಿಸಿಕೊಂಡು ವಿಶೇಷ ತರಬೇತಿ ನೀಡಿದ್ದರು.

      ಮಲಪ್ರಭಾ ಕೆಲ ತಿಂಗಳ ಹಿಂದೆಯಷ್ಟೇ ಜುಡೋ ಕ್ರೀಡೆಯ ಸಾಮ್ಯತೆ ಹೊಂದಿರುವ ಖುರಾಷ್ ಅನ್ನು ಆಯ್ದುಕೊಂಡಿದ್ದರು. ತಂದೆ-ತಾಯಿ ಕೃಷಿಕರಾಗಿದ್ದು, ಬಡತನ ಕುಟುಂಬ ಹಿನ್ನಲೆಯ ಮಲಪ್ರಭಾ ಕಂಚಿನ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+