ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯ ನಿಷೇಧ : ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ, ಗದ್ದಲ

|
Google Oneindia Kannada News

ಬೆಳಗಾವಿ, ನವೆಂಬರ್ 21 : ಮದ್ಯ ನಿಷೇಧದ ಬಗ್ಗೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. 'ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವುದು ಅಸಾಧ್ಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದರು.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಮದ್ಯ ಮಾರಾಟದ ಬಗ್ಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ : ಸಿಎಂಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ : ಸಿಎಂ

ಪ್ರತಿಪಕ್ಷಗಳ ಗದ್ದಲದ ಕಾರಣ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. 'ಮದ್ಯ ಮಾರಾಟದಿಂದ ಸರ್ಕಾರಕ್ಕೆ 11 ಸಾವಿರ ಕೋಟಿ ಆದಾಯ ಬಂದಿದೆ' ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಧಾನಸಭೆಗೆ ಮಾಹಿತಿ ನೀಡಿದರು.

'ಮದ್ಯ ನಿಷೇಧದ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ' ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು. 'ರಾಷ್ಟ್ರೀಯ ನೀತಿ ರೂಪಿಸಿದರೆ ಕರ್ನಾಟಕವೂ ಅದನ್ನು ಬೆಂಬಲಿಸಲಿದೆ' ಎಂದು ಸಿದ್ದರಾಮಯ್ಯ ಹೇಳಿದರು.

ಸದನದಲ್ಲಿ ಸಿಎಂ ಹೇಳಿದ್ದೇನು?

ಸದನದಲ್ಲಿ ಸಿಎಂ ಹೇಳಿದ್ದೇನು?

'ಮದ್ಯ ನಿಷೇಧ ನಿರ್ಧಾರ ಎಲ್ಲಿಯೂ ಯಶಸ್ವಿಯಾಗಿಲ್ಲ. ಗುಜರಾತ್ ರಾಜ್ಯವನ್ನೇ ಗಮನಿಸಿ. ಅದೆಷ್ಟು ಪರಿಣಾಮಕಾರಿಯಾಗಿ ಮದ್ಯ ಮಾರಾಟದ ನಿಷೇಧ ಅನುಷ್ಟಾನಗೊಂಡಿದೆ ಎಂಬುದನ್ನು ಸ್ವತಃ ಪರಿಶೀಲಿಸಿ' ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸದಸ್ಯರ ಗದ್ದಲ

ಬಿಜೆಪಿ ಸದಸ್ಯರ ಗದ್ದಲ

'ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ ನಿರ್ಣಯವಾಗಿತ್ತು. ಅದಕ್ಕೆ ಯಡಿಯೂರಪ್ಪ ಅವರ ವಿರೋಧವಿತ್ತು' ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಸಿಎಂ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸದನದ ಬಾವಿಗಿಳಿದು ಒತ್ತಾಯಿಸಿತು.

ವೈ.ಎಸ್‌.ವಿ.ದತ್ತಾ ಹೇಳಿಕೆಗೆ ಕಿಡಿ

ವೈ.ಎಸ್‌.ವಿ.ದತ್ತಾ ಹೇಳಿಕೆಗೆ ಕಿಡಿ

ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಜೆಡಿಎಸ್‌ ನಾಯಕ ವೈ.ಎಸ್‌.ವಿ.ದತ್ತಾ ಮಾತನಾಡಿ, 'ಸಾರಾಯಿ ನಿಷೇಧ ಮಾಡೋಕೆ ಯಡಿಯೂರಪ್ಪ ಅವರಿಗೆ ಮನಸ್ಸು ಇರಲಿಲ್ಲ' ಎಂದರು ಇದರಿಂದಾಗಿ ಬಿಜೆಪಿ ಸದಸ್ಯರು ಮತ್ತಷ್ಟು ಕೆರಳಿದರು.

18 ಕೋಟಿ ಆದಾಯದ ನಿರೀಕ್ಷೆ

18 ಕೋಟಿ ಆದಾಯದ ನಿರೀಕ್ಷೆ

ಗದ್ದಲದ ನಡುವೆಯೇ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, 'ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಸರಕಾರ ಚಿಂತನೆಯನ್ನೇ ನಡೆಸಿಲ್ಲ. ಮದ್ಯ ನಿಷೇಧ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ 11 ಸಾವಿರ ಕೋಟಿ ಆದಾಯವಿದ್ದು, 18 ಸಾವಿರ ಕೋಟಿ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇವೆ' ಎಂದರು.

ಆಕ್ರೋಶ ವ್ಯಕ್ತಪಡಿಸಿದ ಶೆಟ್ಟರ್

ಆಕ್ರೋಶ ವ್ಯಕ್ತಪಡಿಸಿದ ಶೆಟ್ಟರ್

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, 'ಸಾರಾಯಿ ನಿಷೇಧ ಕುರಿತು ಯಡಿಯೂರಪ್ಪನವರ ಬಗ್ಗೆ ಸಿಎಂ ಹೇಳಿಕೆ ನೀಡಿರುವುದು ಖಂಡನೀಯ. ಸಿದ್ದರಾಮಯ್ಯ ಅವರು ವಿಪಕ್ಷಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಸಿಎಂ ನೀಡಿದ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು' ಎಂದು ಆಗ್ರಹಿಸಿದರು.

English summary
Karnataka Chief Minister Siddaramaiah ruled out the news of liquor ban in state. Discussion on assembly winter session Belagavi about liquor ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X