ಮಹಾಲಕ್ಷ್ಮಿಗೆ ಡೈಮಂಡ್ ಮಿಶ್ರಿತ ಚಿನ್ನದ ಹಾರ ಸಮರ್ಪಿಸಿದ ಲಕ್ಷ್ಮಿ!
ಬೆಳಗಾವಿ, ನವೆಂಬರ್ 23: ಬೆಳಗಾವಿಯಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಚುನಾವಣೆ ಬಿಸಿ ನಡುವೆ ಬಿಡುವು ಮಾಡಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಲಕ್ಷ್ಮೀ ದೇವಿಗೆ ಚಿನ್ನದ ಹಾರ ನೀಡಿದ್ದಾರೆ.
ವಿಶೇಷ ಪೂಜೆ ಸಲ್ಲಿಸಲೆಂದು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಶುಕ್ರವಾರ ಕುಟುಂಬ ಸಮೇತ ಹೋಗಿದ್ದ ಅವರು 205 ಗ್ರಾಂ ತೂಕದ, ಡೈಮಂಡ್ ಹೊಂದಿರುವ ಚಿನ್ನದ ಹಾರವನ್ನು ದೇವಿಗೆ ಸಮರ್ಪಿಸಿದ್ದಾರೆ.

ಸಹೋದರ ಚನ್ನರಾಜ್ ಹಟ್ಟಿಹೊಳಿ, ಪುತ್ರ ಮೃಣಾಲ್, ಕುಟುಂಬ ಹಾಗೂ ಆಪ್ತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವಿಗೆ ದುಬಾರಿ ಹಾರ ಸಮರ್ಪಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೇವಸ್ಥಾನ ಸಮಿತಿಯವರು ಸನ್ಮಾನ ಮಾಡಿದ್ದಾರೆ.












Click it and Unblock the Notifications