ಡಿಕೆಶಿ ಬೆಳಗಾವಿಗೆ ಬಂದಾಗ ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಎಂಬುದು ಗೊತ್ತಿದೆ: ಎಂಎಲ್‌ಸಿ ಲಖನ್ ಜಾರಕಿಹೊಳಿ ಹೇಳಿದ್ದೇನು?

ಸಹೋದರ ರಮೇಶ ಜಾರಕಿಹೊಳಿ ಮಾತುಗಳನ್ನು ಮನ್ನಿಸಿರುವ ಎಂಎಲ್‌ಸಿ ಲಖನ್‌ ಜಾರಕಿಹೊಳಿ, 'ಲಕ್ಷ್ಮಿ ಹೆಬ್ಬಾಳ್ಕರ್‌ ವಿಷಕನ್ಯೆ' ಎಂಬುದು ನಿಜ ಎಂದು ಹೇಳಿದ್ದಾರೆ.

ಬೆಳಗಾವಿ, ಜನವರಿ 31: ರಮೇಶ್‌ ಜಾರಕಿಹೊಳಿ ಸಿಡಿ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಸೆಕ್ಸ್‌ ಸಿಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕೈವಾಡವಿದೆ. ಅವರೊಂದಿಗೆ ಆರು ಜನರು ಸೇರಿಕೊಂಡು ಈ ಷಡ್ಯಂತ್ರ ರೂಪಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು. ಡಿ ಕೆ ಶಿವಕುಮಾರ್‌ ಅವರನ್ನು ಬಂಧಿಸಬೇಕು' ಎಂದು ರಮೇಶ್‌ ಜಾರಕಿಹೊಳಿ ಒತ್ತಾಯಿಸಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಗುಡುಗು

ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಗುಡುಗು

ಇದೇ ವೇಳೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಹರಿಹಾಯ್ದಿದ್ದ ರಮೇಶ ಜಾರಕಿಹೊಳಿ, ಡಿಕೆ ಶಿವಕುಮಾರ್‌ ಹಾಗೂ ನಾನು ಸಹೋದರರಂತೆ ಇದ್ದೆವು. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್‌ ನಮ್ಮ ನಡುವೆ ಹುಳಿ ಹಿಂಡಿದರು. ಆಕೆ ಒಬ್ಬ ವಿಷಕನ್ಯೆ ಇದ್ದಂತೆ ಎಂದು ರಮೇಶ್‌ ಜಾರಕಿಹೊಳಿ ಟೀಕಿಸಿದ್ದರು. ಸಹೋದರನ ಮಾತುಗಳನ್ನು ಮನ್ನಿಸಿರುವ ಎಂಎಲ್‌ಸಿ ಲಖನ್‌ ಜಾರಕಿಹೊಳಿ, 'ಲಕ್ಷ್ಮಿ ಹೆಬ್ಬಾಳ್ಕರ್‌ ವಿಷಕನ್ಯೆ' ಎಂಬುದು ನಿಜ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಅವರು 'ಟಿವಿ 9 ಕನ್ನಡ' ಚಾನೆಲ್‌ ಜೊತೆ ಮಾತನಾಡಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿರುವುದು ನಿಜ

ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿರುವುದು ನಿಜ

'ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿರುವುದು ನಿಜ. ಇದರ ಹಿಂದೆ ದೊಡ್ಡದೊಂದು ಜಾಲವೇ ಇದೆ. ಈ ಜಾಲದ ಫ್ಯಾಕ್ಟರಿ ಇರುವುದು ಬೆಳಗಾವಿಯಲ್ಲಿ. ಇಲ್ಲಿಂದಲೇ ಸಿಡಿಗಳು ಅಲ್ಲಿಗೆ ಡಿಸ್ಪ್ಯಾಚ್ ಆಗುತ್ತವೆ. ರಾಜ್ಯದ ಮೂಲಕ ಮಹಾರಾಷ್ಟ್ರ, ಕೇರಳ, ದೆಹಲಿಯವರೆಗೂ ಸಿಡಿಗಳು ತಲುಪುತ್ತವೆ. ಈ ಕಾರಣಕ್ಕಾಗಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ನಾನು ಮುಖ್ಯಮಂತ್ರಿಗೆ ಆಗ್ರಹ ಮಾಡುತ್ತೇನೆ. ಇದನ್ನ ಸಿಬಿಐಗೆ ನೀಡಿದರೆ ಎಲ್ಲವೂ ಹೊರಗೆ ಬರುತ್ತೆ. ಈ ಸಿಡಿ ಪ್ರಕರಣಗಳಲ್ಲಿ ನೂರಾರು ಜನ ಅಲ್ಲ, ಸಾವಿರಾರು ಜನರು ಸಿಕ್ಕು ಬಿದ್ದಿದ್ದಾರೆ. ಇದು 2000 ಇಸವಿಯಿಂದ ಆರಂಭವಾಗಿದೆ. ಅವರು ಬ್ಲ್ಯಾಕ್ ಮೇಲ್ ಮಾಡ್ತಾರೆ. ಸಿಡಿ ಹುಡುಗಿಯನ್ನೇ ಬಿಟ್ಟು ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಮಾಡಿದರು' ಎಂದು ಆರೋಪಿಸಿದ್ದಾರೆ.

ರಮೇಶ ಜಾರಕಿಹೊಳಿಗೆ ಪ್ಯಾಂಟು ಬಿಚ್ಚಲು ನಾನು ಹೇಳಿದ್ನಾ?

ರಮೇಶ ಜಾರಕಿಹೊಳಿಗೆ ಪ್ಯಾಂಟು ಬಿಚ್ಚಲು ನಾನು ಹೇಳಿದ್ನಾ?

ರಮೇಶ್‌ ಜಾರಕಿಹೊಳಿ ಆರೋಪದ ವಿರುದ್ಧ ಪ್ರತಿಕ್ರಿಯಿಸಿದ್ದ ಡಿ ಕೆ ಶಿವಕುಮಾರ್, ರಮೇಶ ಜಾರಕಿಹೊಳಿಗೆ ಪ್ಯಾಂಟು ಬಿಚ್ಚಲು ನಾನು ಹೇಳಿದ್ನಾ ಎಂದು ಹರಿಹಾಯ್ದಿದ್ದರು. ಈ ಕುರಿತು ಮಾತನಾಡಿರುವ ಲಖನ್‌ ಜಾರಕಿಹೊಳಿ, ಲಂಚ ಮಂಚದ ಬಗ್ಗೆ ಡಿಕೆ ಶಿವಕುಮಾರ್‌ ಮಾತನಾಡುತ್ತಾನೆ. ಇವನು ಲುಂಗಿ ಬಿಚ್ಚೋದು ಪ್ಯಾಂಟು ಬಿಚ್ಚೋದು ಎಲ್ಲಿ ಎಂಬುದು ನಮಗೆ ಗೊತ್ತು. ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ಚುತ್ತಾನೆ, ಎಲ್ಲಾ ಪ್ಯಾಂಟು ಬಿಚ್ಚುತ್ತಾನೆ ಎಂಬುದೆಲ್ಲಾ ಗೊತ್ತಿಲದೆ. ಬೆಳಗಾವಿ ಸರ್ಕ್ಯೂಟ್ ಹೌಸ್​​ನಿಂದ ಡಿಕೆಶಿ ಗಾಡಿ ನೇರವಾಗಿ ಎಲ್ಲಿಗೆ ಹೋಗುತ್ತದೆ ಎಂಬುದೆಲ್ಲ ನಮಗೆ ಗೊತ್ತಿದೆ. ಸಮಯ ಬಂದರೆ, ಇದಕ್ಕೆ ಸಂಬಂಧಿಸಿದ ದಾಖಲೆಯನ್ನೂ ನಾವು ಬಿಡುಗಡೆ ಮಾಡುತ್ತೇವೆ ಎಂದು ಲಖನ್‌ ಜಾರಕಿಹೊಳಿ ಹೇಳಿದ್ದಾರೆ.

 ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಎಂದ ಲಖನ್ ಜಾರಕಿಹೊಳಿ

ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಎಂದ ಲಖನ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಅನ್ನೋದು ಬೆಳಗಾವಿ ಜನರಿಗೆ ಗೊತ್ತಿದೆ. 2000 ಇಸವಿಯಿಂದಲೂ ಆಕೆಯ ಬಗ್ಗೆ ಇದೇ ಹೆಸರು ಓಡಾಡುತ್ತಿದೆ. ಆಕೆಯಿಂದ ಎಷ್ಟು ಜನರು ಸಿಡಿಯಲ್ಲಿ ಸಿಕ್ಕು ಮುದುಡಿ ಹೋದಿದ್ದಾರೋ ಗೊತ್ತಿಲ್ಲ. ಆಕೆಯಿಂದ ವಂಚನೆಗೆ ಒಳಗಾದವರು ಇಟ್ಟ ಹೆಸರದು. ವಿಷಕನ್ಯೆ, ಮಟಾಷ್ ಲೆಗ್, ರಕ್ತಕಣ್ಣೀರು ಎಂದೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕರೆಯುತ್ತಾರೆ ಎಂದು ಎಂಎಲ್​ಸಿ ಲಖನ್ ಜಾರಕಿಹೊಳಿ ಹೇಳಿದ್ದಾರೆ. ಚುನಾವನೆ ಹೊಸ್ತಿಲಲ್ಲಿ ಜಾರಕಿಹೊಳಿ ಹಾಗೂ ಡಿ ಕೆ ಶಿವಕುಮಾರ್‌ ಕುಟುಂಬಗಳ ನಡುವೆ ನಡೆದಿರುವ ಈ ಕದನ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬೆಳಗಾವಿ ಗ್ರಾಮೀಣ ಭಾಗದ ಶಾಸಕಿಯನ್ನು ಸೋಲಿಸಲು ಕೋಟಿಗಟ್ಟಲೇ ಖರ್ಚು ಮಾಡಲು ಸಿದ್ದವೆಂದಿರುವ ರಮೇಶ ಜಾರಕಿಹೊಳಿ ಡಿ ಕೆ ಶಿವಕುಮಾರ್‌ ವಿರುದ್ಧ ತೊಡೆತಟ್ಟಿ ನಿಂತಿರುವುದಂತ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+