ಮರಾಠಿ ಮಾತನಾಡುವಂತೆ ಕರ್ನಾಟಕದ ಲಾರಿ ಚಾಲಕನಿಗೆ ಹಲ್ಲೆ

ಬೆಳಗಾವಿ, ಫೆಬ್ರವರಿ 6: ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕರ್ನಾಟಕದ ಲಾರಿ ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಮಹಾರಾಷ್ಟ್ರದ ಸಾತಾರಾ ನಗರದ ಟೋಲ್ ಗೇಟ್ ಬಳಿ ನಡೆದಿದೆ.

ಶುಕ್ರವಾರ ಸಂಜೆ 7 ಗಂಟೆಗೆ ಕರ್ನಾಟಕದ ಲಾರಿ ಚಾಲಕನ ಮೇಲೆ ಮರಾಠಿ ಪುಂಡರು ಹಲ್ಲೆಗೈದಿದ್ದಾರೆ. ಕರ್ನಾಟಕ ಲಾರಿ ಚಾಲಕ ಗೋವಿಂದ್ ಅವರ ಬಟ್ಟೆ ಬಿಚ್ಚಿಸಿ ಅಲ್ಲಿನ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.

ಮರಾಠಿ ಮಾತನಾಡುವಂತೆ ಒತ್ತಾಯಿಸಿ ಹಲ್ಲೆಗೈದಿರುವ ಘಟನೆಯನ್ನು ಲಾರಿ ಚಾಲಕ ಗೋವಿಂದ್ ಅವರು, ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿಗೆ ಕರೆ ವಿವರಿಸಿದ್ದಾರೆ.

Belagavi: Karnataka Lorry Driver Assaulted By Marathi People In Maharashtra

ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿಗೆ ಕರೆ ಮಾಡಿ ಲಾರಿ ಚಾಲಕ ತಮ್ಮ ಅಳಲು ತೋಡಿಕೊಂಡಿದ್ದು, ಈ ಘಟನೆ ಕುರಿತು ಅಶೋಕ್ ಚಂದರಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಬೆಳಗಾವಿಯಿಂದ ಸಾತಾರಾಗೆ ತೆರಳುತ್ತಿದ್ದ ಲಾರಿ ಚಾಲಕ ಗೋವಿಂದ್ ಅವರನ್ನು ಸಾತಾರಾ ಬಳಿಯ ಆನೇವಾಡಿ ಟೋಲ್ ಗೇಟ್ ಬಳಿ ತಡೆದು ಹಲ್ಲೆ ನಡೆಸಿದ್ದಾರೆ. ಮರಾಠಿ ಭಾಷಿಕರು ಪದೇಪದೇ ಈ ರೀತಿ ಕೃತ್ಯಗಳನ್ನು ಮಾಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+