ಬೆಳಗಾವಿ: ಬುರ್ಖಾ ಧರಿಸಿದ್ದಕ್ಕೆ ಮತಗಟ್ಟೆಗೆ ಪ್ರವೇಶ ನಿರಾಕರಣೆ

ಬೆಳಗಾವಿ, ಮೇ 12: ಬುರ್ಖಾ ಧರಿಸಿ ಮತಗಟ್ಟೆಗೆ ಬಂದ ಮಹಿಳೆಯೊಬ್ಬರಿಗೆ ಪೊಲೀಸರು ಪ್ರವೇಶ ನಿರಾಕರಣೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದಿದೆ.

ಜಿಲ್ಲೆಯ ಶಿವಾಜಿನಗರದ ಬೂತ್ ಸಂಖ್ಯೆ 185ಕ್ಕೆ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರಿಗೆ ಬುರ್ಖಾ ತೆರೆದು ಮುಖ ತೋರಿಸುವಂತೆ ಪೊಲೀಸರು ಸೂಚಿಸಿದರು. ಮುಖ ತೋರಿಸದೆ ಇದ್ದರೆ ಒಳಗೆ ಕಳುಹಿಸಲು ಅವಕಾಶವಿಲ್ಲ. ಹೀಗಾಗಿ ಮತಗಟ್ಟೆ ಒಳಗೆ ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಮಹಿಳೆಯ ಕುಟುಂಬದವರ ಮನವಿ ಮಾಡಿದರೂ ಪೊಲೀಸರು ಅವಕಾಶ ನಿರಾಕರಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಆದರೆ, ಯಾವ ಕಾರಣಕ್ಕೂ ಬುರ್ಖಾ ತೆಗೆಯುವುದಿಲ್ಲ ಎಂದು ಮಹಿಳೆ ಪಟ್ಟುಹಿಡಿದರು. ಚುನಾವಣಾ ನಿರತ ಇತರೆ ಸಿಬ್ಬಂದಿ ಕೂಡ ನಿಯಮದ ಪ್ರಕಾರ ಗುರುತು ನೋಡದೆ ಮತದಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

karnataka assembly elections 2018 woman wear burqa was refused to enter booth

ಇದರಿಂದ ಬೇಸರಗೊಂಡ ಮಹಿಳೆ ಸರದಿಯಲ್ಲಿ ನಿಂತಿದ್ದಾಗಲೇ ಕಣ್ಣೀರಿಡಲು ಪ್ರಾರಂಭಿಸಿದರು.

ಕೊನೆಗೆ ಸ್ಥಳೀಯ ಮಹಿಳೆಯೊಬ್ಬರು ಅವರ ಗುರುತು ಹೇಳಿ, ಸಿಬ್ಬಂದಿ ಮನವೊಲಿಸಿದ ಬಳಿಕ ಅವರಿಗೆ ಒಳಗೆ ಹೋಗಿ ಮತ ಚಲಾವಣೆ ಮಾಡಲು ಅವಕಾಶ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+