IPL Fans: ಐಪಿಎಲ್ ಅಂಧಾಭಿಮಾನಿಗಳ ಹುಚ್ಚತನದ ವಿಡಿಯೋ ಭಾರೀ ವೈರಲ್
IPL Fans: ಐಪಿಎಲ್ ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್‌ಗಳಲ್ಲಿ ಒಂದಾಗಿದೆ. ಆದರೆ, ಕೆಲ ಅಭಿಮಾನಿಗಳ ಅಭಿಮಾನವಂತೂ ಅತಿರೇಕಕ್ಕೆ ಹೋಗುತ್ತಿದೆ. ಇದು ಒಂದು ಟೀಂ ಅಭಿಮಾನಿಗಳ ಕಥೆಯಲ್ಲ.. ಎಲ್ಲಾ ತಂಡದ ಅಭಿಮಾನಿಗಳದ್ದು ಇದೇ ಆಗಿಹೋಗಿಬಿಟ್ಟಿದೆ. ತುಂಬಾ ಮಂದಿ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸ, ಕೆಲಸ ಹುಡುಕಿಕೊಂಡು ಬಂದಿರುತ್ತಾರೆ. ಇವರಲ್ಲಿ ಕೆಲವರು ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿದ್ದು, ಇನ್ನೂ ಕೆಲವರು ತಮಗೆ ಗೊತ್ತಿಲ್ಲದೆ, ನಮಗೊಂದು ಫ್ಯಾಮಿಲಿ ಇದೆ ಎನ್ನುವುದನ್ನೇ ಮರೆತು ಜೀವನ ಹಾಳುಮಾಡಿಕೊಳ್ಳಲು ಹೊರಟಿರುವ ಘಟನೆಗಳು ನಡೆಯುತ್ತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ಬಳಿಕ 18ನೇ ಆವೃತ್ತಿಲ್ಲಿ ಟ್ರೋಫಿಯೇನೋ ಎತ್ತಿ ಹಿಡಿಯಿತು. ಇದರಿಂದ ಕರ್ನಾಟಕದ ಮಂದಿ ತೃಪ್ತಿಯೇನೋ ಪಟ್ರು. ಬಳಿಕ ಮಾರನೇ ದಿನವೇ ಬೆಂಗಳೂರಿಗೆ ತಂಡವನ್ನು ಪರೇಡ್‌ಗೆಂದು ಕರೆಸಲಾಗಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪಗಳು ಜೋರಾಗಿ ಕೇಳಿಬರುತ್ತಿದೆ.

ಆರ್‌ಸಿಬಿ ಟ್ರೋಫಿ ಗೆದ್ದು ಮಾರನೇ ದಿನ ಈ ಕಾರ್ಯಕ್ರಮವನ್ನು ಇಟ್ಟುಕೊಳ್ಳಬಾರದಿತ್ತು. ವೀಕ್ಷಣೆ ಮಾಡಲು ಬರುವಂತಹ ಅಭಿಮಾನಿಗಳು ಹಾಗೂ ಸಾಮಾನ್ಯ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಒಂದೆರಡು ಅಥವಾ ಒಂದು ವಾರ ಬಿಟ್ಟು ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು. ಇದರಿಂದ ಈ ದುರ್ಘಟನೆಯನ್ನು ತಪ್ಪಿಸಬಹುದುದಾಗಿತ್ತು ಅಂತಾ ವಿಪಕ್ಷದ ನಾಯಕರು ಹೇಳಿತ್ತಿದ್ದಾರೆ. ಈ ನಡುವೆಯೇ ಅಂಧಾಭಿಮಾನಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು.. ಆರ್‌ಸಿಬಿ ಕಪ್ ಗೆದ್ದರೆ ಅರ್ಧ ತಲೆ ಬೋಳಿಸಿಕೊಳ್ಳುವುದಾಗಿ ಸಿಎಸ್‌ಕೆ ಅಭಿಮಾನಿಯೊಬ್ಬ ಚಾಲೆಂಜ್ ಮಾಡಿದ್ದು, ಇದೀಗ ತಲೆಬೋಳಿಸಿಕೊಂಡು ಹುಚ್ಚಾಟ ಮೆರೆದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆಸಿದೆ. ಸಿಎಸ್‌ಕೆ ಅಭಿಮಾನಿ ಮಹಾವೀರ ಕಿರಣ ಕಡಕೋಳ ತಲೆ ಬೋಳಿಸಿಕೊಂಡವನಾಗಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಂತಹ ಹುಚ್ಚು ಅಭಿಮಾನಿಗಳಿಗೆ ಹಲವೆಡೆ ಪೊಲೀಸರು ತಮ್ಮ ಶೈಲಿಯಲ್ಲೇ ಪಾಠ ಕಲಿಸುವ ಕೆಲಸವನ್ನು ಐಪಿಎಲ್ ಆರಂಭದಿಂದಲೂ ಮಾಡುತ್ತಲೇ ಇದ್ದಾರೆ. ಆದರೂ ಇಂತಹ ಬೇಜಾವಾಬ್ದಾರಿಯುತ ಘಟನೆಗಳು ಮುಂದುವರೆದಿವೆ. ಇಂತಹವರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತಿದೆ. ಆದ್ದರಿಂದ, ಇಂತಹ ಹುಚ್ಚು ಅಭಿಮಾನಿಗಳ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.












Click it and Unblock the Notifications