ಸರ್ಕಾರ ಬಿದ್ರೆ ಅದಕ್ಕೆ ಕಾಂಗ್ರೆಸ್ ಹೊಣೆ, ಜೆಡಿಎಸ್ ಅಲ್ಲ: ಬಸವರಾಜ ಹೊರಟ್ಟಿ
Recommended Video

ಬೆಳಗಾವಿ, ಡಿಸೆಂಬರ್ 13: ವಿಧಾನಪರಿಷತ್ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾಗೊಂಡಿರುವ ಬಸವರಾಜ ಹೊರಟ್ಟಿ ಅವರು ಮಿತ್ರ ಪಕ್ಷ ಕಾಂಗ್ರೆಸ್ ಮೇಲೆಯೇ ಹರಿಹಾಯ್ದಿದ್ದಾರೆ.
ಈಗಿರುವ ಮೈತ್ರಿ ಸರ್ಕಾರ ಬಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಜೆಡಿಎಸ್ ಕಾರಣ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸರ್ಕಾರ ಬೀಳುತ್ತದೆ ಎಂಬ ಸೂಚನೆ ಅವರ ಮಾತಿನಲ್ಲಿ ಇದೆ. ಬಿಜೆಪಿ ಇದನ್ನು ಒತ್ತಿ ಹೇಳುತ್ತಿದೆ.
ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಕಾಂಗ್ರೆಸ್ ಪಕ್ಷವು ತಮ್ಮದೇ ಪಕ್ಷದ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಅನ್ನಾಗಿ ಆಯ್ಕೆ ಮಾಡಿತು. ಇದಕ್ಕೆ ಜೆಡಿಎಸ್ ನಾಯಕರು ಕೂಡ ತಲೆ ಆಡಿಸಿದರು ಇದು ಬಸವರಾಜ ಹೊರಟ್ಟಿ ಅವರಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ಜೆಡಿಎಸ್ ನಾಯಕರ ಮೇಲೂ ಬಸವರಾಜ ಹೊರಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಹೇಳುವುದಕ್ಕೆ ತಲೆ ಆಡಿಸುವುದಕ್ಕೆ ಅಲ್ಲ ಕುಮಾರಸ್ವಾಮಿ ಇರುವುದು ಎಂದು ಹೇಳಿದ್ದರು. ಕುಮಾರಸ್ವಾಮಿ ಕೇವಲ ಹೆಬ್ಬೆಟ್ಟು ಸಿಎಂ ಆಗಿದ್ದಾರೆ ಎಂದು ಸಹ ಹೇಳಿದ್ದರು.
ಆದರೆ ಕುಮಾರಸ್ವಾಮಿ ಅವರು ಆ ನಂತರ ಬಸವರಾಜ ಹೊರಟ್ಟಿ ಅವರೊಂದಿಗೆ ಮಾತನಾಡಿ ಅವರನ್ನು ಸಮಾಧಾನ ಪಡಿಸಿದರು, ಆ ನಂತರ ಬಸವರಾಜ ಹೊರಟ್ಟಿ ಅವರು ಸಿಎಂ ಅವರ ಬಗ್ಗೆ ಮೃದುವಾಗಿದ್ದರು ಆದರೆ ಕಾಂಗ್ರೆಸ್ ವಿರುದ್ಧ ಪೂರ್ತಿ ಗರಂ ಆಗಿದ್ದರು.












Click it and Unblock the Notifications