• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆ ಖಾತೆ ಸಿಕ್ಕರೆ ಅದೇ ನನ್ನ ಅದೃಷ್ಟ: ರಮೇಶ್ ಜಾರಕಿಹೊಳಿ

|

ಬೆಳಗಾವಿ, ಡಿಸೆಂಬರ್ 10: ಉಪಚುನಾವಣೆಯಲ್ಲಿ ಗೆದ್ದ ಅನರ್ಹರು ಪ್ರಭಾವಿ ಸಚಿವ ಸ್ಥಾನಗಳಿಗೆ ಬೇಡಿಕೆ ಇಡುತ್ತಿದ್ದಾರೆ.

ಬೈರತಿ ಬಸವರಾಜ್, ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಮಧ್ಯಾಹ್ನವಷ್ಟೆ ಹೇಳಿದ್ದಾರೆ. ಗೋಪಾಲಯ್ಯ ಸಹ ಇದೇ ಖಾತೆಗೆ ಡಿಮ್ಯಾಂಡ್ ಮಾಡಿದ್ದಾರಂತೆ. ಇನ್ನು ಮೈತ್ರಿ ಸರ್ಕಾರ ಪತನಕ್ಕೆ ಮುನ್ನುಡಿ ಹಾಡಿದ್ದ ರಮೇಶ್ ಜಾರಕಿಹೊಳಿ ಸಹ ಖಾತೆಯೊಂದರ ಉಲ್ಲೇಖ ಮಾಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ನ್ನು ವಿಷಕನ್ಯೆಗೆ ಹೋಲಿಸಿದ ರಮೇಶ್ ಜಾರಕಿಹೊಳಿಲಕ್ಷ್ಮೀ ಹೆಬ್ಬಾಳ್ಕರ್ ನ್ನು ವಿಷಕನ್ಯೆಗೆ ಹೋಲಿಸಿದ ರಮೇಶ್ ಜಾರಕಿಹೊಳಿ

'ಜಲ ಸಂಪನ್ಮೂಲ ಖಾತೆ ಬಹಳ ಪ್ರಭಾವಿ ಖಾತೆ ಆ ಖಾತೆ ಸಿಕ್ಕರೆ ನನ್ನ ಅದೃಷ್ಟ' ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

'ಜಲ ಸಂಪನ್ಮೂಲ ಖಾತೆ ಪಕ್ಷಾತೀತ, ಧರ್ಮಾತೀತ ಖಾತೆ. ನೀರು ಎಲ್ಲರಿಗೂ ಬೇಕು, ಹಾಗಾಗಿ ಆ ಖಾತೆ ಕೊಟ್ಟರೆ ಪಕ್ಷಾತೀತವಾಗಿ , ಧರ್ಮಾತೀತವಾಗಿ ಕಾರ್ಯನಿರ್ವಹಿಸುತ್ತೇನೆ' ಎಂದು ಜಾರಕಿಹೊಳಿ ಹೇಳಿದ್ದಾರೆ.

ನನ್ನ ಮುಖ್ಯಮಂತ್ರಿ ಮಾಡಿದ್ದು ಇವರೇ, ಪ್ಲೀಸ್ ಇವರಿಗೆ ವೋಟ್ ಹಾಕಿ!ನನ್ನ ಮುಖ್ಯಮಂತ್ರಿ ಮಾಡಿದ್ದು ಇವರೇ, ಪ್ಲೀಸ್ ಇವರಿಗೆ ವೋಟ್ ಹಾಕಿ!

ಡಿಸಿಎಂ ಸ್ಥಾನವೇ ದೊರಕುತ್ತದೆ ಎಂದು ನಿರೀಕ್ಷಿಸಿದ್ದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಸಣ್ಣ ಶಾಕ್ ಅನ್ನೂ ನೀಡಿದ್ದಾರೆ. 'ಸಾಹುಕಾರರು ಏಕೆ ತಮ್ಮನ್ನು ಜಲಸಂಪನ್ಮೂಲ ಖಾತೆಗೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ' ಎಂದು ಅನುಮಾನ ಪಡುವಂತೆ ಮಾಡಿದ್ದಾರೆ.

ಮುಂದುವರೆದು ಮಾತನಾಡಿರುವ ರಮೇಶ್ ಜಾರಕಿಹೊಳಿ, 'ಯಡಿಯೂರಪ್ಪ ಅವರು ನಮ್ಮನ್ನು ಕೈ ಬಿಡುವುದಿಲ್ಲ ಎಂದು ಪದೇ-ಪದೇ ಹೇಳಿದ್ದಾರೆ. ಅದರಂತೆ ಅವರು ನಡೆದುಕೊಳ್ಳುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ' ಎಂದಿದ್ದಾರೆ.

ಉಪಚುನಾವಣಾ ಫಲಿತಾಂಶಕ್ಕೂ ಮುನ್ನವೇ ಅನರ್ಹರ ಭಾರೀ ಡಿಮಾಂಡ್? ಉಪಚುನಾವಣಾ ಫಲಿತಾಂಶಕ್ಕೂ ಮುನ್ನವೇ ಅನರ್ಹರ ಭಾರೀ ಡಿಮಾಂಡ್?

'ನಮಗೆ ಯಾವ ಸಚಿವ ಸ್ಥಾನ ನೀಡಬೇಕು ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ, ಅವರು ನೀಡುತ್ತಾರೆ. ಕೆಲವೇ ದಿನಗಳಲ್ಲಿ ನಾವು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದೇವೆ' ಎಂದು ಜಾರಕಿಹೊಳಿ ಹೇಳಿದರು.

ತಮ್ಮೆದುರು ಸೋತ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಬಗ್ಗೆ ಮಾತನಾಡಿದ ರಮೇಶ್, 'ಅವರಿಗೆ ಉನ್ನತ ಸ್ಥಾನ ನೀಡುವುದಾಗಿ ನಾವು ಪದೇ-ಪದೇ ಹೇಳಿದೆವು ಆದರೆ ಅವರು ನಮ್ಮ ಮಾತು ಕೇಳಲಿಲ್ಲ, ಮಾಡಿದ್ದು ಉಂಡ, ಅದು ಅವರ ದುರ್ದೈವ' ಎಂದು ಹೇಳಿದರು.

English summary
BJP mla Ramesh Jarkiholi said, i will be happy if i get water resource portfolio. He also said Yediyurappa will suitable post to us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X