ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇವಣ್ಣನಿಗೆ ಚಿರತೆ ಕಾಟ, ದತ್ತಾಗೆ ಕರಡಿ ಕಾಟವಂತೆ!

|
Google Oneindia Kannada News

ಬೆಳಗಾವಿ, ನ. 26 : ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತವೆ. ಅಂತೆಯೇ ಹಾಸ್ಯ ಚಟಾಕಿಗಳು ಸಿಡಿದು ಸದನದಲ್ಲಿ ನೆಗೆಯ ಅಲೆ ಉಕ್ಕುತ್ತದೆ. ಸೋಮವಾರವೂ ಹಲವಾರು ಹಾಸ್ಯ ಚಟಾಕಿಗಳು ಸಿಡಿದವು, ಪ್ರತಿಪಕ್ಷದವರು ಸರ್ಕಾರವನ್ನು ತಮ್ಮ ಮಾತಿನಿಂದಲೇ ಕೆಣಕಿದರು, ವಿರೋಧ ಪಕ್ಷದವರಿಗೆ ಅದಕ್ಕೆ ಸರಿಯಾದ ಉತ್ತರವೂ ಲಭಿಸಿತು.

ಸೋಮವಾರದ ಕಲಾಪದಲ್ಲಿ ಕರಡಿ, ಚಿರತೆ, ಆನೆ ಹಾವಳಿ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರಶ್ನೋತ್ತರ ಸಂದರ್ಭದಲ್ಲಿ ಜೆಡಿಎಸ್‌ನ ಶಾಸಕ ವೈ.ಎಸ್‌.ವಿ.ದತ್ತಾ, ಕಡೂರಿನಲ್ಲಿ ಕರಡಿ ಕಾಟದ ಬಗ್ಗೆ ಪ್ರಸ್ತಾಪಿಸಿ, ಕಡೂರಿನ ಕಲ್ಕೆರೆ ಗ್ರಾಮದಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಇದುವರೆಗೂ ಮೂವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಕರಡಿ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Belgaum winter session

ತಕ್ಷಣ ಎದ್ದು ನಿಂತ ಎಚ್‌.ಡಿ.ರೇವಣ್ಣ ಅವರನ್ನು ಕಂಡು, ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು, ಹೇ ರೇವಣ್ಣ ಇದು ಕಡೂರು ಸಮಸ್ಯೆನಪ್ಪಾ ಎಂದರು. ಆಗ, ರೇವಣ್ಣ, ಸಾರ್‌ ದತ್ತ ಅವರಿಗೆ ಕರಡಿ ಕಾಟ. ನಮಗೆ ಚಿರತೆ ಕಾಟ ಸಾರ್ ಎಂದು ಮಾತು ಮುಂದುವರಿಸಿ, ತಮ್ಮ ಕ್ಷೇತ್ರದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇತರ ಸ್ವಾರಸ್ಯಕರ ಚರ್ಚೆಗಳು
* ಬಿ.ಎಸ್. ಯಡಿಯೂರಪ್ಪ ನಡೆಸುತ್ತಿದ್ದ ಹೋರಾಟವನ್ನು ಬೆಂಬಲಿಸಿದ ಬಿಜೆಪಿಯವರ ಕಾಲೆಳೆಯಲು ಹೋದ ಜೆಡಿಎಸ್ ಶಾಸಕ ಜಮೀರ್ ಅಹ್ಮದ ಖಾನ್ ತಾವೇ ಎಡವಿದರು. 'ಅಲ್ರೀ ಈಗ್ಯಾಕೆ ಯಡ್ಯೂರಪ್ಪ ಮ್ಯಾಲೆ ನಿಮ್ಗೆ ಅಷ್ಟೊಂದು ಪ್ರೀತಿ? ಎಂದು ಅವರ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಇದಕ್ಕೆ ತಿರುಗೇಟು ನೀಡಿದ ಉಮೇಶ್ ಕತ್ತಿ, "ರೀ ಸುಮ್ನೆ ಇರಿ. ನಿಮ್ಮ ಒಂದು ಕಾಲು ಆ ಕಡೆ(ಕಾಂಗ್ರೆಸ್) ಇದೆ. ಅದ್ಕೇ ನೀವು ಕಾಂಗ್ರೆಸ್ ಪರ ಮಾತಾಡ್ತೀರಿ ಎಂದು ಜಮೀರ್ ಅವರಿಗೆ ಇರುಸು ಮುರುಸು ಉಂಟುಮಾಡಿದರು.

* ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಡಿ.ವಿ.ಸದಾನಂದ ಗೌಡ ಸಿಎಂ ಅವರನ್ನು ಉದ್ದೇಶಿಸಿ, ಲಾಡ್‌ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಕಲಾಪ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ ಎಂದು ಛೇಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೀರಣ್ಣ ಮತ್ತೀಕಟ್ಟಿ ಗಣಿ ಲೂಟಿಕೋರರನ್ನು ಇಟ್ಟುಕೊಂಡು ಐದು ವರ್ಷ ಅಧಿಕಾರ ನಡೆಸಿ ರಾಜ್ಯದ ಮಾನ ಹರಾಜು ಮಾಡಿದ ನಿಮಗೆ (ಬಿಜೆಪಿ) ಮೊದಲು ಅಭಿನಂದನೆ ಸಲ್ಲಿಸಬೇಕು ಎಂದು ಕುಟುಕಿದರು. (ಲಾಡ್ ರಾಜೀನಾಮೆ)

* ಕಲಾಪ ವೀಕ್ಷಿಸಲು ಸಂಸದರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಿಲ್ಲ ಎಂದು ಸಂಸದ ಪ್ರಭಾಕರ ಕೋರೆ ಸೋಮವಾರ ಮುನಿಸಿಕೊಂಡಿದ್ದರು. ಕಲಾಪ ವೀಕ್ಷಣೆಗೆ ಬಂದ ಕೋರೆ, ಅಧಿಕಾರಿಗಳ ಗ್ಯಾಲರಿಯತ್ತ ತೆರಳಿದರು. ಆದರೆ, ಅವರಿಗೆ ಅಲ್ಲಿ ಆಸನ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ ಮಾರ್ಷಲ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತುಕೊಳ್ಳಿ ಎಂದರೂ ಕೇಳದೆ ಸದನದಿಂದ ನಿರ್ಗಮಿಸಿದರು.

English summary
The ten-days winter session begins on Monday, November 25 at Suvarna Vidhana Soudha in Belgaum. here is some humorous discussion in day one session in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X