ಬೆಳಗಾವಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ಇಪ್ಪತ್ತೈದರ ಯುವಕ ಸಾವು
ಬೆಳಗಾವಿ, ಜೂನ್ 2: ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ಶನಿವಾರ ಬಿದ್ದ ಭಾರೀ ಮಳೆಗೆ ನೀರಿನಲ್ಲಿ ಓರ್ವ ಕೊಚ್ಚಿಕೊಂಡು ಹೋಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ಸಂಭವಿಸಿದೆ. ಹುಕ್ಕೇರಿ ತಾಲೂಕಿನ ಕೊಟಬಾಗಿಯಿಂದ ಇಬ್ಬರು ಸಹೋದರರು ಬೆಳಗಾವಿಗೆ ತೆರಳುತ್ತಾ ಇದ್ದರು.
ಈ ವೇಳೆ ಇಮ್ರಾನ್ ನದಾಫ್ ಎಂಬ ಯುವಕ ಮಳೆಗೆ ಕೊಚ್ಚಿಹೋದ ಯುವಕ. ಆತ ತನ್ನ ಸಹೋದರ ಅಮೀರ್ ಜೊತೆ ಬೆಳಗಾವಿಗೆ ತೆರಳುತ್ತಾ ಇದ್ದ. ಇಮ್ರಾನ್ ನದಾಫ್ ನನ್ನು ರಕ್ಷಿಸಿಕೊಳ್ಳಲು ಅಮೀರ್ ಗೆ ಸಾಧ್ಯವಾಗಲಿಲ್ಲ. ಮಳೆಯ ರಭಸಕ್ಕೆ ಇಮ್ರಾನ್ ಕೊಚ್ಚಿಕೊಂಡು ಹೋಗಿದ್ದಾನೆ.

ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಬೆಳಗಾವಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಮ್ರಾನ್ ನದಾಫ್ ನ ಶವ ಭೂತರಾಮನಹಟ್ಟಿ ಬಳಿ ಪತ್ತೆಯಾಗಿದೆ. ಇಪ್ಪತ್ತೈದು ವರ್ಷದ ಇಮ್ರಾನ್ ನ ನದಾಫ್ ನನ್ನು ಬದುಕಿಸಿಕೊಳ್ಳಲು ಸಾಧ್ಯವಾಗದ ಅಸಹಾಯಕತೆಗೆ ಆತನ ಸಹೋದರ ಕಣ್ಣೀರು ಇಡುತ್ತಿದ್ದ ದೃಶ್ಯ ಎಂಥವರಿಗೂ ಮನ ಕಲಕುವಂತಿತ್ತು.












Click it and Unblock the Notifications