• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಕಾಕ್‌ನಲ್ಲಿ ಸಹೋದರರು ಎದುರಾಳಿಗಳು; ಯಾರಿಗೆ ಗೆಲುವು?

|

ಬೆಳಗಾವಿ, ಡಿಸೆಂಬರ್ 5 : 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಜ್ಯದ ಜನರ ಕುತೂಹಲ ಕೆರಳಿಸಿರುವ ಕ್ಷೇತ್ರ ಬೆಳಗಾವಿ ಜಿಲ್ಲೆಯ ಗೋಕಾಕ್. ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಲಖನ್ ಜಾರಕಿಹೊಳಿ ಕಣದಲ್ಲಿದ್ದು, ಸಹೋದರರಲ್ಲಿ ಗೆಲುವು ಯಾರಿಗೆ?

ಬೆಳಗಾವಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ಮತದಾನ ನಡೆಯುತ್ತಿದೆ. ಕಾಂಗ್ರೆಸ್‌ ಮತ್ತು ಜಾರಕಿಹೊಳಿ ಕುಟುಂಬದ ಭದ್ರಕೋಟೆ ಎಂದು ಕರೆಯಲಾಗುವ ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಕಮಲ ಅರಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ತೆರಿಗೆದಾರರ ಗಮನಕ್ಕೆ: 'ಗೋಕಾಕ್ ಸಾಹುಕಾರ' ತೀರಾ ನಾಟಿ ಕಂಡ್ರಿ!

ಗೋಕಾಕ್ ಕ್ಷೇತ್ರದ ಉಪ ಚುನಾವಣೆ ಜಾರಕಿಹೊಳಿ ಕುಟುಂಬ ಸದಸ್ಯರ ನಡುವಿನ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ ಪೂಜಾರಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ. 2018ರ ಚುನಾವಣೆಯಲ್ಲಿ ಅಶೋಕ ಪೂಜಾರಿ ಬಿಜೆಪಿಯಿಂದ ಕಣಕ್ಕಿಳಿದು 75,969 ಮತ ಪಡೆದಿದ್ದರು.

ಗೋಕಾಕ್ ಚುನಾವಣಾ ಕಣದಲ್ಲಿ ಸಹೋದರರ ಸವಾಲ್, ಪೂಜಾರಿಗೆ ಎಚ್ ಡಿಕೆ ಸಾಥ್

2008 ಮತ್ತು 2013ರಲ್ಲಿ ಜೆಡಿಎಸ್‌ನಿಂದ, 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅಶೋಕ ಪೂಜಾರಿ ಈ ಉಪ ಚುನಾವಣೆಯಲ್ಲಿಯೂ ರಮೇಶ್ ಜಾರಕಿಹೊಳಿ ಎದುರಾಳಿ. ಕಳೆದ ಬಾರಿಯ ಚುನಾವಣೆ ಸೋಲಿನ ಅನುಕಂಪ ಈ ಬಾರಿ ಗೆಲುವಿನ ದಡ ಸೇರಿಸಲಿದೆಯೇ? ಕಾದು ನೋಡಬೇಕು.

ಜೋಳಿಗೆ ಒಡ್ಡಿ ಹಣ ಹಾಕಿ ಎಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿ!

ಕಾಂಗ್ರೆಸ್ ಜಾರಕಿಹೊಳಿ ಕುಟುಂಬದ ಮತ್ತೊಬ್ಬ ಸದಸ್ಯ ಲಖನ್ ಜಾರಕಿಹೊಳಿ ಕಣಕ್ಕಿಳಿಸಿದೆ. ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಸೇರಿ ರಮೇಶ್ ಜಾರಕಿಹೊಳಿ ಸೋಲಿಸಲೇಬೇಕು ಎಂದು ತಂತ್ರ ರೂಪಿಸಿದ್ದಾರೆ. ಜಾರಕಿಹೊಳಿ ಕುಟುಂಬದಲ್ಲಿ ಯಾರ ಪ್ರಭಾವ ಹೆಚ್ಚು? ಎಂದು ಕಾದು ನೋಡಬೇಕು.

ಮತದಾರರ ವಿವರ: ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರು 2,42,124. ಪುರಷರು 1,19,737, ಮಹಿಳೆಯರು 1,22,373, ಇತರರು 14. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಜಾತಿ ಲೆಕ್ಕಾಚಾರಗಳು: ಗೋಕಾಕ್ ಕ್ಷೇತ್ರದಲ್ಲಿ 75 ಸಾವಿರ ಲಿಂಗಾಯತ, ಎಸ್ಟಿ 60 ಸಾವಿರ, ಮುಸ್ಲಿಂ 30 ಸಾವಿರ, ಕುರುಬ15 ಸಾವಿರ, ಉಪ್ಪಾರ 20 ಸಾವಿರ, ಎಸಿ 20 ಸಾವಿರ, ಮರಾಠ10 ಸಾವಿರ, ಇತರೆ 10 ಸಾವಿರ ಮತದಾರರು ಇದ್ದಾರೆ.

2018ರ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ (ಕಾಂಗ್ರೆಸ್) 90,249 ಮತಗಳನ್ನು ಪಡೆದಿದ್ದರು. ಅಶೋಕ್ ಪೂಜಾರಿ ಬಿಜೆಪಿಯಿಂದ ಕಣಕ್ಕಿಳಿದು 75,969 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಕರೆಪ್ಪ ತಲ್ವಾರ್ 1,553 ಮತ ಪಡೆದಿದ್ದರು.

English summary
Karnataka's Belagavi district Gokak assembly seat by election 2019 : Read all about Gokak assembly constituency voting.Get By election news updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X